ಕೇಸರಿ ವಿವಾದದಲ್ಲೇ ಸದ್ದು ಮಾಡಿ ಬಿಡುಗಡೆಯಾದ ಪಠಾಣ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ವಿಶ್ವದಾದ್ಯಂತ 8000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿರುವ ಪಠಾಣ್, ಹಿಂದಿ ಚಿತ್ರರಂಗದಲ್ಲೇ ಹೊಸ ರೆಕಾರ್ಡ್ ಬ್ರೇಕ್ ಮಾಡಿದೆ.
ಹಿಂದಿ ಚಿತ್ರರಂಗದಲ್ಲೇ ‘ಪಠಾಣ್’ ಫಸ್ಟ್
ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಥ್ರಿಲ್ಲರ್ ಚಿತ್ರ ಪ್ರೇಕ್ಷಕರ ಮೋಡಿ ಮಾಡಿದೆ. ಪಠಾಣ್ ಫಸ್ಟ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಫಸ್ಟ್ ಶೋ ಮುಗಿಯುತ್ತಿದ್ದಂತೆ ಸಿನಿಮಾ ವಿತರಕರು 300 ಶೋಗಳನ್ನ ಹೆಚ್ಚಿಸಿದ್ದಾರೆ. ದೇಶದಾದ್ಯಂತ 5,500 ಪರದೆ ಮೇಲೆ ಪಠಾಣ್ ಮಿಂಚುತ್ತಿದ್ರೆ, 2,500 ಫಾರೀನ್ ಸ್ಕ್ರೀನ್‌ಗಳಲ್ಲಿ ಪಠಾಣ್ ಬಿಡುಗಡೆ ಆಗಿದೆ. ಇದು ಹಿಂದಿ ಚಲನಚಿತ್ರದ ಇತಿಹಾಸದಲ್ಲೇ ಇದೇ ಫಸ್ಟ್.
‘ಪಠಾಣ್’ ಅನ್ನೂ ಬಿಡದ ಪೈರಸಿ!
ಬಿಗ್ ಬಜೆಟ್‌ನ ಪಠಾಣ್ ಸಿನಿಮಾ ರಿಲೀಸ್‌ಗೂ ಮುಂಚೆ ಪೈರಸಿ ಆಗುವ ಭಯ ಚಿತ್ರತಂಡಕ್ಕೆ ಇತ್ತು. ಖುದ್ದು ಶಾರೂಖ್ ಖಾನ್ ಅವರೇ ಪಠಾಣ್ ಸಿನಿಮಾ ಪೈರಸಿ ಮಾಡದಂತೆ ಮನವಿ ಮಾಡಿದ್ರು. ತಮ್ಮ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದ ಶಾರೂಖ್, ಪಠಾಣ್ ಸಿನಿಮಾವನ್ನ ಸಿನಿಮಾ ಹಾಲ್‌ಗಳಲ್ಲೇ ನೋಡಿ. ಲೀಕ್ ಆಗೋ ಪೈರಸಿ ಕಾಪಿಯನ್ನ ಪ್ರೋತ್ಸಾಹಿಸಬೇಡಿ ಎಂದಿದ್ದರು. ಬಾಲಿವುಡ್ ಸಿನಿ ತಂಡ ಎಷ್ಟೇ ಹುಷಾರಾಗಿದ್ರೂ ಪಠಾಣ್ ಸಿನಿಮಾ ಪೈರಸಿಗಳ ಪಾಲಾಗಿದೆ.
ಪಠಾಣ್‌ಗೆ ಕಲ್ಲು ಎಸೆದ ಹೋರಾಟಗಾರರು!
ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕನಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿತ್ರದಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಅಂತಾ ಬಜರಂಗದಳ, ವಿಶ್ವಹಿಂದೂ ಪರಿಷತ್‌ನ ನಾಯಕರು ಇವತ್ತು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮುಂದೆ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪಠಾಣ್ ಚಿತ್ರದ ಪೋಸ್ಟರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಕಲಬುರಗಿ ನಗರದ ಶೆಟ್ಟಿ ಮಲ್ಟಿಫ್ಲೆಕ್ಸ್ ಎದುರು ಪ್ರತಿಭಟನೆ ನಡೀತು. ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ರು. ಪೊಲೀಸರು ಪ್ರತಿಭಟನಾ ನಿರತ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post