ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆ ರಾಜಕೀಯ ನಾಯಕರ ಲೂಸ್‌ಟಾಕ್ ಹೆಚ್ಚಾಗುತ್ತಿದೆ. ಜೊತೆಗೆ ಅವರು ಮಾತನಾಡಿದ ಆಡಿಯೋಗಳು ಹಲ್‌ಚಲ್ ಎಬ್ಬಿಸುತ್ತಿವೆ. ಇದೀಗ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸರದಿ. ಮೊದಲೇ ಶತ್ರುರಾಷ್ಟ್ರವನ್ನ ಹೊಗಳಿ ಟೀಕೆಗೆ ಗುರಿಯಾಗಿದ್ದ ರಾಜೇಗೌಡ, ಈಗ ಬಿಜೆಪಿ, ಮೋದಿಯನ್ನ ತೆಗಳಿ ಕೇಸರಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡರ ಮಾತನ್ನ ಇದೇ ಆಡಿಯೋ ಚುನಾವಣೆ ಹೊತ್ತಲ್ಲಿ ಕಾಫಿನಾಡಿನಲ್ಲಿ ಹಲ್‌ಚಲ್ ಎಬ್ಬಿಸಿದೆ. ಶ್ರೀರಾಮಮಂದಿರ ದತ್ತಪೀಠದ ಹೋರಾಟಗಾರರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪಕ್ಕೂ ಕಾರಣವಾಗಿದೆ.
ಶೃಂಗೇರಿ ‘ಕೈ’ ಶಾಸಕ ಟಿ.ಡಿ. ರಾಜೇಗೌಡ ವಿವಾದಾತ್ಮಕ ಹೇಳಿಕೆ
ಅಯೋಧ್ಯೆ, ದತ್ತಪೀಠ ಹೋರಾಟದ ಬಗ್ಗೆ ಅವಹೇಳನ ಮಾತು
ಅಯೋಧ್ಯೆ ರಾಮಜನ್ಮಭೂಮಿಗಾಗಿ ಅದೆಷ್ಟೋ ಜನ ಹೋರಾಡಿದ್ದಾರೆ. ರಾಮನ ನೆಲೆಯನ್ನ ಉಳಿಸಿಕೊಳ್ಳಲು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇತ್ತ ಚಿಕ್ಕಮಗಳೂರಿನಲ್ಲಿ ದತ್ತಪೀಠಕ್ಕಾಗಿ ಈಗಲೂ ಹೋರಾಟ ನಡೆಯುತ್ತಲೇ ಇದೆ. ಹಿಂದೂ ಕಾರ್ಯಕರ್ತರು ಪವಿತ್ರ ಭೂಮಿಗಾಗಿ ಕೋರ್ಟ್ ಕಟಕಟೆಯನ್ನೂ ಏರಿದ್ದಾರೆ. ಆದ್ರೀಗ ಈ ಎರಡೂ ಹಿಂದೂ ಹೋರಾಟಗಳ ಬಗ್ಗೆ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಕೇವಲವಾಗಿ ಮಾತನ್ನಾಡಿದ್ದಾರೆ. ಅಯೋಧ್ಯೆ ರಾಮನಿಗಾಗಿ, ದತ್ತಪೀಠಕ್ಕಾಗಿ ಹೋರಾಡಿದವರ ಬಗ್ಗೆ ತುಚ್ಛವಾಗಿ ಭಾಷೆ ಬಳಸಿದ್ದಾರೆ. ದತ್ತ ಪೀಠ ಏನ್ ಅನ್ನ ಹಾಕುತ್ತಾ ಎನ್ನುವ ಮೂಲಕ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕರ ಮಾತಿನ ಗೀಳು ಇದೇ ಮೊದಲೇನಲ್ಲ.. ಈ ಹಿಂದೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಸಜ್ಜನ ವ್ಯಕ್ತಿ ಅಂತ ಹಾಡಿಹೊಗಳಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ಅಯೋಧ್ಯೆ ರಾಮಮಂದಿರ ವಿಚಾರಕ್ಕೆ ಪ್ರಧಾನಿ ಮೋದಿಯನ್ನೂ ತೆಗಳಿ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇನ್ನೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಲೂಸ್ ಟಾಕ್ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿ ಸಿಡಿದೆದ್ದಿವೆ. ಜಿಲ್ಲಾದ್ಯಂತ ಪ್ರತಿಭಟನೆಗೆ ಕರೆಕೊಡಲಾಗಿದ್ದು, ರಾಜೇಗೌಡ ಬಹಿರಂಗ ಕ್ಷಮೆಯಾಚಿಸುವಂತೆ ಒತ್ತಾಯ ಕೇಳಿಬಂದಿದೆ.
ಈ ಬಗ್ಗೆ ಮಾತನಾಡಿರೋ ಗೃಹ ಸಚಿವ ಆರಗ ಜ್ಞಾನೇಂದ್ರ, ಅಲ್ಪಸಂಖ್ಯಾತರ ಓಲೈಕೆಗಾಗಿ ಹೀಗೆಲ್ಲಾ ಮಾತಾಡ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ. ಒಟ್ಟಾರೆ, ಚುನಾವಣೆ ಹೊತ್ತಲ್ಲಿ ರಾಜಕೀಯ ನಾಯಕರು ಇಲ್ಲ ಸಲ್ಲದ ಮಾತುಗಳನ್ನಾಡಿ ವಿವಾದವನ್ನ ಮೈಮೇಲೆ ಎಳೆದುಕೊಳ್ತಿದ್ದಾರೆ. ಅವರು ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಅವರಿಗೆ ಮುಳುವಾಗ್ತಿವೆ. ಇನ್ಮೇಲಾದ್ರೂ ಜನಪ್ರತಿನಿಧಿಗಳು ಸ್ವಲ್ಪ ಸಂಸ್ಕಾರದಿಂದ ಮಾತನಾಡೋದನ್ನ ಕಲಿತ್ರೆ ಒಳಿತು. ಇಲ್ಲ ಅಂದ್ರೆ ಜನರೇ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post