ಇತ್ತೀಚೆಗೆ ಅಜಿತ್ ನಟನೆಯ ತುನಿವು ಸಿನಿಮಾ ತೆರೆ ಮೇಲೆ ಬಂದಿದೆ. ಬಹುತೇಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ 25 ವರ್ಷದ ಯುವಕ ತುನಿವು ಸಿನಿಮಾ ಮೆಚ್ಚಿಕೊಂಡಿದ್ದು, ಅದರಿಂದ ಪ್ರೇರಿತನಾಗಿ ಬ್ಯಾಂಕ್ ದರೋಡೆಗೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಯುವಕ ತಮಿಳುನಾಡಿನ ದಿಂಡಿಗಲ್ನಲ್ಲಿ ಹಗಲು ಹೊತ್ತಿನಲ್ಲಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾನೆ. ಈತನನ್ನು ಪೊಲೀಸರು ಅರೆಸ್ಟ್ಮಾಡಿದ್ದು, ಅಜಿತ್ ಅವರ ತುನಿವು ಸಿನಿಮಾದಿಂದ ಪ್ರೇರಿತನಾಗಿ ದರೋಡೆ ಮಾಡಲು ಯತ್ನಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಯುವಕ ದರೋಡೆ ಮಾಡುವಾಗ ಮೂವರು ಬ್ಯಾಂಕ್ ಉದ್ಯೋಗಿಗಳ ಕೈಯನ್ನು ಕಟ್ಟಿಹಾಕಿ, ಚಾಕು, ಪೆಪ್ಪರ್ ಸ್ಪ್ರೇ ಮತ್ತು ಮೆಣಸಿನ ಪುಡಿ ತೋರಿಸಿ ಬೆದರಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post