2023ರ ಜನವರಿ 25.. ಭಾರತೀಯ ಮಹಿಳಾ ಕ್ರಿಕೆಟರ್ಗಳ ಪಾಲಿಗೆ ಐತಿಹಾಸಿಕ ದಿನವಾಗಿದ್ದು, ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಅದ್ಭುತ ಅಡಿಪಾಯ ಸಿಕ್ಕಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ, ತನ್ನ ಕನಸಿನ ಕೂಸಾದ ಪುರುಷರ IPLನಂತೆ ಉದ್ಘಾಟನಾ ಮಹಿಳಾ ಐಪಿಎಲ್ಗೂ ಫೌಂಡೇಷನ್ ಹಾಕಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾಗಿದೆ.
ಮಹಿಳಾ ಐಪಿಎಲ್ ತಂಡಗಳನ್ನ ಪ್ರಕಟಿಸಿರುವ ಬಿಸಿಸಿಐ, ಈ ಲೀಗ್ಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಎಂದು ಹೆಸರಿಟ್ಟಿದೆ. ನಿರೀಕ್ಷೆಯಂತೆ ಸಾವಿರಾರು ಕೋಟಿಯನ್ನೇ ಜೇಬಿಗಿಳಿಸಿಕೊಂಡಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಿಸಿದ್ದಾರೆ. 5 ಕಾರ್ಪೋರೇಟ್ ಸಂಸ್ಥೆಗಳು ತಾನು ಪ್ರತಿನಿಧಿಸುವ ನಗರದ ಮಹಿಳಾ ತಂಡವನ್ನ ಖರೀದಿಸಿವೆ.
ತಂಡಗಳ ಖರೀದಿಸುವ ಬಿಡ್ನಲ್ಲಿ 5 ಫ್ರಾಂಚೈಸಿಗಳಿಂದ ಬಿಸಿಸಿಐ ಖಾತೆಗೆ 4669.99 ಕೋಟಿ ಹರಿದು ಬಂದಿದೆ. ಸದ್ಯ ಅದಾನಿ ಗ್ರೂಪ್, ಸದ್ಯ ಹೆಚ್ಚು ಕೋಟಿ ಸುರಿದು ಮಹಿಳಾ ತಂಡದ ಖರೀದಿಸಿದ ಖ್ಯಾತಿಗೆ ಒಳಗಾಗಿದೆ. ಅಹ್ಮದಾಬಾದ್ ಮಹಿಳಾ ತಂಡವನ್ನ ಖರೀದಿಸಿರುವ ಅದಾನಿ ಗ್ರೂಪ್, 1289 ಕೋಟಿ ರೂಪಾಯಿ ಸುರಿದಿದೆ.
ಹಾಗೆಯೇ ಭಾರತದ ಶ್ರೀಮಂತ ಅಂಬಾನಿ ಮಾಲೀಕತ್ವದ ಇಂಡಿಯಾ ವಿನ್ಸ್ಪೋರ್ಟ್ಸ್ ಗ್ರೂಪ್ ಮಹಿಳಾ ಕ್ರಿಕೆಟ್ಗೂ ಕಾಲಿಟ್ಟಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕತ್ವದ ಹೊಣೆ ಹೊತ್ತಿರುವ ಅಂಬಾನಿ, ಮಹಿಳಾ ಮುಂಬೈ ತಂಡವನ್ನ 912 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.
ಒಂದು ಸಲವೂ ಕಪ್ ಗೆಲ್ಲದ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ವುಮೆನ್ಸ್ ಪ್ರೀಮಿಯರ್ ಲೀಗ್ಗೂ ಹೆಜ್ಜೆ ಇಟ್ಟಿದೆ. ಆರ್ಸಿಬಿ ಮಾಲೀಕರು 901 ಕೋಟಿ ನೀಡಿ ಬೆಂಗಳೂರು ತಂಡವನ್ನ ಖರೀದಿಸಿದ್ದಾರೆ. ಇನ್ನು ಕ್ಯಾಪ್ರಿ ಗ್ಲೋಬಲ್, ಲಕ್ನೋ ತಂಡವನ್ನ 757 ಕೋಟಿ ರೂಪಾಯಿಗೆ ಮತ್ತು JSW GMR ಕ್ರಿಕೆಟ್ ಪ್ರೈ.ಲಿ ಗ್ರೂಪ್ ಡೆಲ್ಲಿ ತಂಡವನ್ನ 810 ಕೋಟಿಗೆ ಖರೀದಿಸಿದೆ.
Breaking barriers, making history, and playing bold!
Royal Challengers Bangalore are the proud owners of the Bengaluru Women's Premier League Team 🙌#PlayBold #ItsHerGameToo #WomensIPL pic.twitter.com/swO4EvhZQc
— Royal Challengers Bangalore (@RCBTweets) January 25, 2023
ಉದ್ಘಾಟನಾ WPL ತಂಡಗಳ ಬಿಡ್ಡಿಂಗ್ 2008ರಲ್ಲಿ ಉದ್ಘಾಟನಾ ಪುರುಷರ ಐಪಿಎಲ್‌ನ ದಾಖಲೆಗಳನ್ನು ಮುರಿದಿದೆ. ಇದೊಂದು ಕ್ರಾಂತಿಯ ಆರಂಭವನ್ನ ಸೂಚಿಸುತ್ತೆ. ನಮ್ಮ ಮಹಿಳಾ ಕ್ರಿಕೆಟಿಗರಿಗೆ ಮಾತ್ರವಲ್ಲದೆ ಇಡೀ ಕ್ರೀಡಾ ಭ್ರಾತೃತ್ವಕ್ಕೆ ಪರಿವರ್ತನೆಯ ಪ್ರಯಾಣಕ್ಕೆ ದಾರಿ ಮಾಡಿಕೊಡುತ್ತದೆ. WPL ಮಹಿಳಾ ಕ್ರಿಕೆಟ್‌ನಲ್ಲಿ ಅಗತ್ಯ ಸುಧಾರಣೆಗಳನ್ನು ತರುತ್ತದೆ ಎಂದು ಜಯ್ ಶಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post