ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಲು ಒತ್ತಾಯ ಇದೆ ಎಂಬ ವಿಚಾರಕ್ಕೆ ರಾಯಚೂರಲ್ಲಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ.. ಈಗಾಗಲೇ 4 ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ನಾಲ್ಕೈದು ಜನ ಹೇಳಿದ ತಕ್ಷಣ ಅದು ಆಗಲ್ಲ. ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾಗ ಮಾತ್ರ ಅದು ಸಾಧ್ಯ ಎಂದಿದ್ದಾರೆ.
ನಮ್ಮ ಕುಟುಂಬದಿಂದ ಯಾರನ್ನೂ ಸ್ಪರ್ಧಗೆ ಇಳಿಸಲ್ಲ
ನಾವು ಕುಟುಂಬದಿಂದ ಯಾರನ್ನು ಸ್ಪರ್ಧೆಗೆ ಇಳಿಸಲ್ಲ. ಕೆಲವರಿಗೆ ವೈಯಕ್ತಿಕ ಪ್ರೀತಿ ವಿಶ್ವಾಸವಿರುತ್ತದೆ. ಅಭಿಮಾನದಿಂದ ಮಾತನಾಡಿದ್ದಾರೆ. ಅಭಿಮಾನದಿಂದ ಮಾತನಾಡಿದ್ದು ಎಲ್ಲರ ಅಭಿಪ್ರಾಯವೆಂದು ತೀರ್ಮಾನಿಸಲು ಆಗಲ್ಲ. ಇನ್ನುಳಿದದ್ದು ಮನೆಯಲ್ಲಿ ಕುಳಿತು ಮತ್ತು ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಬಿ.ಫಾರ್ಮ್ ಕೊಡುವುದು ದೇವೇಗೌಡರೇ. ಪ್ರಜ್ವಲ್ ಹೇಳಿಕೆಯಲ್ಲಿ ತಪ್ಪು ಏನು ಇಲ್ಲ. ಬಿ.ಫಾರ್ಮ್ಗೆ ಸಿಹಿ ಮಾಡುವುದು ದೇವೇಗೌಡರೇ. ಅಂತಿಮವಾಗಿ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲ್ಲ. ಯಾವುದೇ ರೀತಿಯ ಸಂಘರ್ಷವೂ ಆಗಲ್ಲ. ಎಲ್ಲಾ ಕ್ಲಿಯರ್ ಮಾಡಲು, ಸಮಸ್ಯೆಗಳು ಏನು ಇಲ್ಲ ಅಂತಾ ಇದೇ ವೇಳೆ ಸ್ಪಷ್ಟಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post