ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಕಂಗಾಲಾಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ನಿತ್ಯದ ಖರ್ಚುಗಳನ್ನು ಹೇಗೆಲ್ಲಾ ನಿಭಾಯಿಸಬೇಕು ಎಂದು ಜನಸಾಮಾನ್ಯರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಅಲ್ಲಿನ ಸರ್ಕಾರಕ್ಕೆ ಯಾವುದೇ ದಿಕ್ಕು ತೋಚದಂತಾಗಿದೆ.
ಇದೀಗ ವೆಚ್ಚದಲ್ಲಿ ಕಡಿತ ಮಾಡಲು ಪಾಕ್ ಸರ್ಕಾರ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಯಾವುದೇ ಲಕ್ಸುರಿ ವಾಹನ ಖರೀದಿ ಇಲ್ಲ. ಎಲ್ಲಾ ಹಂತದಲ್ಲೂ ಶೇಕಡಾ 30 ರಷ್ಟು ಪೆಟ್ರೋಲ್ ಬಳಕೆಯನ್ನು ಕಡಿತ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: ‘ನಮೋ’ ಭಾರತ ಅಂತಿದೆ ಪಾಕ್.. ಅಲ್ಲಿನ ಜನ ನಮ್ಮ ಪ್ರಧಾನಿ ಮೋದಿಗೆ ಜೈ ಅಂತಿರೋದೇಕೆ..?
ಐಎಂಎಫ್ ಮುಂದೆ ಕಣ್ಣೀರಿಟ್ಟ ಪಾಕ್..!
ಮಾತ್ರವಲ್ಲ ಸಂಸದರ ವೇತನದಲ್ಲಿ ಶೇಕಡಾ 15 ರಷ್ಟು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ಸಂಸದರ ವಿತನಾ ನಿಧಿ ಕೂಡ ರದ್ದು ಮಾಡಲಾಗಿದೆ. ಐಎಂಎಫ್ನಿಂದನಿಂದ ಸಾಲ ಕೊಡಿಸುವಂತೆ ಅಮೆರಿಕಾಗೆ ಮನವಿ ಮಾಡಿದೆ. ಈ ಬಗ್ಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ನೇರವಾಗಿ ಐಎಂಎಫ್ ಪಾಕಿಸ್ತಾನಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿರುವ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.
ಸಾಲದ ಸುಳಿಯಲ್ಲಿ ಪಾಕಿಸ್ತಾನ
ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ, ಚೀನಾದ ಕಮರ್ಷಿಯಲ್ ಬ್ಯಾಂಕ್ಗೆ 500 ಮಿಲಿಯನ್ ಡಾಲರ್ ಸಾಲವನ್ನು 48 ಗಂಟೆಯಲ್ಲಿ ಪಾವತಿಸಬೇಕಿದೆ. ಇದರಿಂದಾಗಿ ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಉಳಿಯೋದು 4 ಬಿಲಿಯನ್ ಡಾಲರ್ ಮಾತ್ರ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post