ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪರಮಾಪ್ತರಾಗಿದ್ದ ವೈ.ಎಸ್.ವಿ ದತ್ತಾ ಜೆಡಿಎಸ್ಗೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ. ಚುನಾವಣೆ ಹೊತ್ತಲ್ಲಿ ಪಕ್ಷ ತೊರೆದಿರುವ ದತ್ತಾಗೆ ಟಕ್ಕರ್ ಕೊಡಲು ದಳಪತಿ ‘ಮಾಸ್ಟರ್ ಪ್ಲಾನ್’ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪರಮಾಪ್ತ ಪಕ್ಷಕ್ಕೆ, ನಂಬಿಕೆಗೆ ಕೈಕೊಟ್ಟರೆನಂತೆ, ಆದರೆ ನಾವು ಪಕ್ಷನಿಷ್ಟೆಯ ಕುಡಿಯನ್ನು ಮರೆಯಬಾರದು ಎಂಬ ನಿರ್ಧಾರಕ್ಕೆ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ದಿವಂಗತ ಎಸ್.ಆರ್ ಲಕ್ಷ್ಮಣಯ್ಯ ಅವರ ಮೊಮ್ಮಗ ಸುಹಾಲ್ ಧರ್ಮೆಗೌಡರಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬಂದಿದೆ.
ಇದನ್ನೂ ಓದಿ: ಪರಿಷತ್ನಲ್ಲಿ ಅಣ್ಣ ಧರ್ಮೇಗೌಡರನ್ನ ನೆನೆದು ಕಣ್ಣೀರಿಟ್ಟ ತಮ್ಮ ಭೋಜೇಗೌಡ
ಸುಹಾಲ್ ಧರ್ಮೆಗೌಡಗೆ ಟಿಕೆಟ್..!
ಹೌದು.. ನ್ಯೂಸ್ಫಸ್ಟ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ ದಿವಂಗತ ಎಸ್.ಎಲ್.ಧರ್ಮೆಗೌಡ ಪುತ್ರನನ್ನ ಕಣಕ್ಕಿಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆಯಂತೆ. ಅಂದ್ಹಾಗೆ ಜೆಡಿಎಸ್ನಿಂದ ಲಕ್ಷ್ಮಣಯ್ಯ ಮೂರು ಬಾರಿ ಶಾಸಕರಾಗಿದ್ದರು. ಒಂದು ಬಾರಿ ಧರ್ಮೆಗೌಡ ಶಾಸಕರಾಗಿದ್ದರು. ಕಡೂರು ಕ್ಷೇತ್ರದಿಂದ ಸುಹಾಲ್ ಧರ್ಮೆಗೌಡರನ್ನು ಕಣಕ್ಕಿಳಿಸಲು ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಕಡೂರು ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಧರ್ಮೆಗೌಡರಿಗೆ ತಮ್ಮದೆಯಾದ ವರ್ಚಸ್ಸು ಇತ್ತು. ಮಾತ್ರವಲ್ಲ, ಧರ್ಮೆಗೌಡರ ಸಹೋದರ ಎಸ್.ಎಲ್.ಬೋಜೆಗೌಡ ಕೂಡರಿಗೂ ಅದೇ ವರ್ಚಸ್ಸು ಇದೆ. ಧರ್ಮೆಗೌಡ ನಿಧನದ ಅನುಕಂಪ ಹಾಗೂ ಅವರ ಸಹೋದರ ಎಸ್.ಎಲ್.ಬೋಜೆಗೌಡ ವರ್ಚಸ್ಸಿನಲ್ಲಿ ಮತ ಸೆಳೆಯೋಕೆ ಪ್ಲಾನ್ ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ. ಅಂದ್ಹಾಗೆ ಎಸ್.ಎಲ್.ಬೋಜೇಗೌಡ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಜೊತೆಗೆ ಕುಮಾರಸ್ವಾಮಿಯ ಅತ್ಯಾಪ್ತರಲ್ಲಿ ಒಬ್ಬರು. ಇದನ್ನೇ ದಾಳವಾಗಿಸಿಕೊಂಡು ವೈಎಸ್ವಿ ದತ್ತಾಗೆ ತಿರುಗೇಟು ನೀಡಲು ದಳಪತಿ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post