ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಸಾಮಾನ್ಯವಾಗಿ ಪರೀಕ್ಷೆ ಅಂದ್ರೆ ವಿದ್ಯಾರ್ಥಿಗಳಿಗೆ ಭಯ ಇದ್ದೇ ಇರುತ್ತೆ. ಹೀಗಾಗಿ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮ ನಡೆಸಿದ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಭಯ ಓಡಿಸುವ ಕೆಲಸ ಮಾಡಿದ್ದಾರೆ. ಪರೀಕ್ಷೆ ಎದುರಿಸಲು ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಮಕ್ಕಳ ಜೊತೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ!
ಪರೀಕ್ಷೆ ಎದುರಿಸುವ ಬಗ್ಗೆ ಮಕ್ಕಳಿಗೆ ‘ನಮೋ’ ಟಿಪ್ಸ್!
ಇವತ್ತು ನವದೆಹಲಿಯಲ್ಲಿ ಪ್ರಧಾನಿ ಮೋದಿ ಇವತ್ತು 6ನೇ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ ನಡೆಸಿದ್ರು. ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮ ಮಕ್ಕಳು, ಶಿಕ್ಷಕರು, ಪೋಷಕರ ಜೊತೆ ಸಂವಾದ ನಡೆಸಿದ್ರು. ಕೇಂದ್ರದ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿದ್ದು ಈ ಬಾರಿ 38 ಲಕ್ಷದ 80 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕ-ಶಿಕ್ಷಕಿಯರು ಹಾಗೂ1 ಲಕ್ಷ 95 ಸಾವಿರ ಪೋಷಕರು ನೋಂದಾಯಿಸಿಕೊಂಡಿದ್ದರು. 2022ನೇ ಸಾಲಿಗಿಂತ ಈ ಬಾರಿ 15.7 ಲಕ್ಷ ಹೆಚ್ಚು ನೋಂದಣಿ ನಡೆದಿದೆ. 2022ರ ನವೆಂಬರ್ 25ರಿಂದ ಆರಂಭವಾಗಿದ್ದ ಪರೀಕ್ಷಾ ಪೇ ಚರ್ಚಾ ನೋಂದಣಿ ಕಳೆದ ಡಿಸೆಂಬರ್ 30, 2022ರವರೆಗೆ ನಡೆದಿತ್ತು. ಓರ್ವ ವಿದ್ಯಾರ್ಥಿ ನಾವು ಪರೀಕ್ಷೆಗೆ ಹಾರ್ಡ್ವರ್ಕ್ ಮಾಡಬೇಕಾ ಅಥವಾ ಸ್ಮಾರ್ಟ್ವರ್ಕ್ ಮಾಡಬೇಕಾ ಅಂತ ಪ್ರಶ್ನೆ ಕೇಳಿದ. ಈ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರ ನೀಡಿದ್ದು ಹೀಗೆ…
ಕೆಲವರು ಹಾರ್ಡ್ವರ್ಕ್ ಮಾಡ್ತಾರೆ, ಇನ್ನೂ ಕೆಲವರಲ್ಲಿ ಹಾರ್ಡ್ವರ್ಕ್ ಅನ್ನೋ ಲಕ್ಷಣಗಳೇ ಇರಲ್ಲ. ಮತ್ತು ಕೆಲವರು ಹಾರ್ಡ್ ಆಗಿ ಸ್ಮಾರ್ಟ್ವರ್ಕ್ ಮಾಡ್ತಾರೆ. ಇನ್ನೂ ಕೆಲವರು ಸ್ಮಾರ್ಟ್ ಆಗಿ ಹಾರ್ಡ್ವರ್ಕ್ ಮಾಡ್ತಾರೆ . ತಂದೆ-ತಾಯಿ ನೋಡಿ ಸಮಯ ನಿರ್ವಹಣೆ ಕಲಿಯಿರಿ, ಪೋಷಕರು ತಾನು ಮಾಡುವ ಕೆಲಸ ಹೊರೆ ಎನ್ನಲ್ಲ, ಪರೀಕ್ಷೆ ಅಲ್ಲದೇ ಜೀವನದಲ್ಲೂ ಸಮಯ ನಿರ್ವಹಣೆ ಇರಲಿ. ಜೀವನದಲ್ಲಿ ಎಂದಿಗೂ ಶಾರ್ಟ್ಕಟ್ ಹುಡುಕಿಕೊಳ್ಳಬೇಡಿ, ಕಠಿಣ ಕೆಲಸಗಳನ್ನೂ ಕೂಡ ಬುದ್ಧಿವಂತಿಕೆಯಿಂದ ಮಾಡಿ, ಮೊದಲು ಕಡಿಮೆ ಇಷ್ಟಪಡುವ ವಿಷಯಕ್ಕೆ ಸಮಯ ನೀಡಿ ಬಳಿಕ ನೀವು ಇಷ್ಟಪಡುವ ವಿಷಯಕ್ಕೆ ಸಮಯವನ್ನು ನೀಡಿ, ಅತಿಯಾದ ಗ್ಯಾಜೆಟ್ಗಳ ಬಳಕೆ ಅತ್ಯಂತ ಕಳವಳಕಾರಿಯಾಗಿದೆ. ಯೋಚಿಸಿ, ವಿಶ್ಲೇಷಿಸಿ, ಕಾರ್ಯನಿರ್ವಹಿಸುವುದನ್ನು ಕಲಿಯಿರಿ.
ಪೋಷಕರು ಕೂಡ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆ ಇಡಬೇಕು. ಮಕ್ಕಳ ಸಾಮರ್ಥ್ಯ ಬಗ್ಗೆ ನೀವು ಸದಾ ಗಮನ ಹರಿಸಬೇಕು. ನಿಮ್ಮ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಪೋಷಕರು ಮಕ್ಕಳ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಬಾರದು. ಸಾಮಾಜಿಕ ಸ್ಥಾನಮಾನ ಪಡೆಯಲು ಪೋಷಕರು ಹೆಚ್ಚು ನಿರೀಕ್ಷೆಗಳನ್ನು ಹೊಂದಿರುವುದು ಆತಂಕಕಾರಿ ಅಂತ ಸಲಹೆ ನೀಡಿದ್ರು. ನನಗೂ ಪರೀಕ್ಷೆ ಇದೆ ಹಾಗೂ ದೇಶದ ಕೋಟ್ಯಂತರ ವಿದ್ಯಾರ್ಥಿಗಳು ನನ್ನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಪರೀಕ್ಷೆಯನ್ನು ನೀಡುವುದನ್ನು ನಾನು ಆನಂದಿಸುತ್ತೇನೆ ಅಂತ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post