ಇಂದು ರಾಂಚಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ.
ಕಿವೀಸ್ ನೀಡಿದ್ದ 177 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾ ವಾಶಿಂಗ್ಟನ್ ಸುಂದರ್ ಏಕಾಂಗಿ ಹೋರಾಟದ ನಡುವೆಯೋ ಸೋತಿದೆ. ನಿಗದಿತ 20 ಓವರ್ನಲ್ಲಿ 9 ವಿಕೆಟ್ಗೆ 155 ರನ್ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾದ ಕಿವೀಸ್ ಪಡೆ ವಿರುದ್ಧ 21 ರನ್ನಿಂದ ಸೋತಿದೆ.
2 ಸಿಕ್ಸರ್, 6 ಫೋರ್ ಸಮೇತ ಸೂರ್ಯ 47 ರನ್ ಸಿಡಿಸಿದ್ರೆ, ಸುಂದರ್ 3 ಸಿಕ್ಸರ್, 5 ಫೋರ್ ಸಮೇತ 50 ರನ್ ಚಚ್ಚಿದ್ರು. ಹಾರ್ದಿಕ್ ಕೇವಲ 21 ರನ್ಗೆ ಔಟಾದ್ರು.
ನ್ಯೂಜಿಲೆಂಡ್ ಪರ ಓಪನರ್ ಆಗಿ ಬಂದ ಫಿನ್ ಅಲ್ಲೆನ್ ಬರೋಬ್ಬರಿ 150 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 2 ಸಿಕ್ಸರ್, 4 ಫೋರ್ ಸಮೇತ 35 ರನ್ ಚಚ್ಚಿದ್ರು. ಕೊನೇವರೆಗೂ ಕ್ರೀಸ್ನಲ್ಲಿದ್ದ ಡಿವೋನ್ ಕಾನ್ವೇ 1 ಸಿಕ್ಸರ್, 7 ಫೋರ್ ಸಮೇತ 52 ರನ್ ಸಿಡಿಸಿದ್ರು.
ಹಾಗೆಯೇ ಕೊನೆಗೆ ಬಂದ ಮಿಚೆಲ್ ಕೇವಲ 30 ಬಾಲ್ನಲ್ಲಿ 197 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 5 ಸಿಕ್ಸರ್, 3 ಫೋರ್ನೊಂದಿಗೆ 59 ರನ್ ಬಾರಿಸಿದ್ರು. ಅರ್ಷ್ದೀಪ್ಗೆ ಕೊನೇ ಓವರ್ನಲ್ಲಿ 27 ರನ್ ಸಿಡಿಸಿದ್ರು ಮಿಚೆಲ್. ಈ ಮೂಲಕ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 176 ರನ್ ಗಳಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post