ಇಂದು ಮಧ್ಯಪ್ರದೇಶದ ಮೊರೆನಾದಲ್ಲಿ 2 ಯುದ್ದ ವಿಮಾನಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದ್ದಾರೆ.
ವಾಯುಪಡೆಯ 2 ಫೈಟರ್ ಜೆಟ್ ಅಪಘಾತಕ್ಕೀಡಾಗಿದ್ದವು. ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಅಪಘಾತಕ್ಕೀಡಾಗಿದ್ದವು. ಘಟನೆಯಲ್ಲಿ ಕರ್ನಾಟಕದ ಪೈಲಟ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ.
ಭಾರತೀಯ ವಾಯುಪಡೆ ಹನುಮಂತರಾವ್ ನಿಧನದ ಬಗ್ಗೆ ಮಾಹಿತಿ ನೀಡಿದ್ದು, ಈ ವಿಚಾರ ತಿಳಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಏನಿದು ಘಟನೆ?
ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯು ಇಂದು ಬೆಳಗ್ಗೆ 5:30ರ ಸುಮಾರಿಗೆ ನಡೆದಿದೆ. ಎರಡು ಯುದ್ಧ ವಿಮಾನಗಳು ಗ್ವಾಲಿಯರ್ ವಾಯುನೆಲೆಯಲ್ಲಿ ತಾಲೀಮು ನಡೆಸುತ್ತಿದ್ದವು. ಈ ವೇಳೆ ಆಗಸದಲ್ಲೇ ಸುಖೋಯಿ ಮತ್ತು ಮಿರಾಜ್ ಮುಖಾಮುಖಿ ಡಿಕ್ಕಿಯಾಗಿವೆ.
ತಕ್ಷಣ ಪೈಲಟ್ಗಳಿಬ್ಬರು ತಮ್ಮ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಮೇಲಿಂದ ಬಿದ್ದ ರಭಸಕ್ಕೆ ಓರ್ವ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊರ್ವ ಬೆಳಗಾವಿ ಮೂಲದ ಪೈಲಟ್ ಸಾವನ್ನಪ್ಪಿದ್ದಾರೆ.
मध्य प्रदेश के मुरैना के पास एक सुखोई-30 और मिराज 2000 विमान दुर्घटनाग्रस्त हो गए हैं। अधिक जानकारी की प्रतीक्षा है। खोज और बचाव अभियान शुरू कर दिया गया है.#BreakingNews #sukhoi #HelicopterCrash pic.twitter.com/PzgjreivsA
— Moazzam Ali Siddiqui (@MoazzamTweet) January 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post