ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ದೂರದರ್ಶನ ಮತ್ತು ಸಿನಿಮಾ ರಂಗದಲ್ಲಿ 20 ವರ್ಷ ಪೂರೈಸಿದ್ದ ಸಂಭ್ರದಲ್ಲಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಶ್ವೇತಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಶ್ವೇತಾ ಚಂಗಪ್ಪ ಅವರು ಕಾದಂಬರಿ, ಸುಕನ್ಯಾ, ಅರುಂದತಿ, ಸಂಗೀತ, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರಾ, ಡ್ಯಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ನಲ್ಲಿ ಸಖತ್ ಮನರಂಜನೆಯನ್ನು ನೀಡಿದ್ದರು. ಬಿಗ್ ಬಾಸ್ ಸೀಸನ್ 2ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸ್ ಜೂನಿಯರ್ಸ್, ಜೋಡಿ ನಂಬರ್ ಒನ್, ಇದೀಗ ಸೂಪರ್ ಕ್ವೀನ್ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೂರದರ್ಶನ ಮತ್ತು ಚಲನಚಿತ್ರೋದ್ಯಮದಲ್ಲಿ 20 ವರ್ಷಗಳನ್ನು ಪೂರೈಸಿದೆ. ನಾನು ನಿನ್ನೆಯಷ್ಟೇ ಇದನ್ನು ಆರಂಭಿಸಿದೆ ಎಂದು ಅನಿಸುತ್ತಿದೆ. ನಂಬಲು ಅಸಾಧ್ಯ ಎನಿಸುತ್ತಿದೆ. ನನ್ನ ಈ ಪಯಣದಲ್ಲಿ ನನ್ನ ಪಕ್ಕದಲ್ಲಿ ನಿಂತ ತಾಯಿಗೆ, ನನ್ನ ಮೇಲೆ ನಂಬಿಕೆ ಇಟ್ಟ ತಂದೆಗೆ, ನನ್ನ ಜೀವನದಲ್ಲಿ ನಾನು ಏನನ್ನು ಬೇಕಾದರೂ ಸಾಧಿಸಲು ನನ್ನ ಶಕ್ತಿಯಾಗಿ ಹೊರಹೊಮ್ಮಿದ ನನ್ನ ಪತಿಗೆ ವಿಶೇಷ ಧನ್ಯವಾದಗಳು. ನನಗೆ ಆ ಧೈರ್ಯವನ್ನು ನೀಡಿ ನನ್ನನ್ನು ನೋಡಿಕೊಂಡರು ಸಣ್ಣ ಪುಟ್ಟ ದೇವತೆ. ಮತ್ತು ನನ್ನ ಪುಟ್ಟ ನಾಯಕ ಜಿಯಾನ್ ಈ ಚಿಕ್ಕ ವಯಸ್ಸಿನಲ್ಲಿ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನನ್ನ ಕೆಲಸವನ್ನು ಮಾಡಲು ಪ್ರೋತ್ಸಾಹಿಸುತ್ತಾರೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
View this post on Instagram
0
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post