ಕುಂದಗೋಳ: ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಅಮಿತ್ ಶಾಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಗೃಹ ಸಚಿವ ಪ್ರಹ್ಲಾದ್ ಜೋಶಿ ಸಾಥ್ ನೀಡಿದ್ದಾರೆ.
ಒಂದು ಕಿಲೋ ಮೀಟರ್ ನಡೆದ ಅಮಿತ್ ಶಾ ರೋಡ್ ಶೋಗೆ ಭಾರೀ ಜನಸ್ಪಂದನೆ ಸಿಕ್ಕಿದೆ. ರಸ್ತೆ ಉದ್ದಕ್ಕೂ ಜನ ಸಾಗರ ಕಿಕ್ಕಿರಿದು ಸೇರಿತ್ತು. ದಾರಿಯುದ್ದಕ್ಕೂ ಮೋದಿ, ಮೋದಿ ಜೈಕಾರ ಮೊಳಗಿದ್ರೆ, ಚುನಾವಣಾ ಚಾಣಾಕ್ಯನಿಗೆ ಹೂವಿನ ಸುರಿಮಳೆ ಸುರಿಸಲಾಗಿದೆ. ರಸ್ತೆಯುದ್ದಕ್ಕೂ ಬ್ಯಾನರ್ ಬಂಟಿಂಗ್ಸ್ ರಾರಾಜಿಸುತ್ತಿದ್ರೆ, ಕುಂದಗೋಳ ಪಟ್ಟಣ ಫುಲ್ ಕೇಸರಿಮಯವಾಗಿತ್ತು.
ಹೆಲಿಪ್ಯಾಡ್‌ನಿಂದ ಗಾಳಿ ಮರೆಮ್ಮ ದೇವಸ್ಥಾನದವರೆಗೆ ಅಮಿತ್ ಶಾ ರೋಡ್ ಶೋ ನಡೆಸಿದ್ರು. ರೋಡ್ ಶೋ ನಂತರ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ಅಮಿತ್ ಶಾ ಕಮಲ ಚಿತ್ರಕ್ಕೆ ಬಣ್ಣ ತುಂಬಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post