ಬೆಂಗಳೂರು: ಬಿಎಂಟಿಸಿ ಬಸ್ನ ಅಡ್ಡಾದಿಡ್ಡಿ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ನಿನ್ನೆ ಸಂಜೆ 7:30 ರ ಸುಮಾರಿಗೆ ಹೆಗಡೆನಗರ ಸಮೀಪದ ಭಾರತ್ ಸಿಟಿ ಕ್ರಾಸ್ ಬಳಿ ನಡೆದಿದೆ.
ಬೈಕ್ ಸವಾರ ಅಯೂಬ್ (35) ಮೃತ ದುರ್ದೈವಿ. ರಫಿಯುಲ್ಲಾ ಖಾನ್, ಮುಸಾದ್ದಿಕ್, ಮುನ್ನಾವರ್ ಅನ್ನೋರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭಾರತ್ ಸಿಟಿ ಕ್ರಾಸ್ ಟ್ರಾಫಿಕ್ ಸಿಗ್ನಲ್ ಹಿನ್ನೆಲೆಯಲ್ಲಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ವೇಗವಾಗಿ ಬಂದ 290ED ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಮಾತ್ರವಲ್ಲ ಬೈಕ್ಗೆ ಡಿಕ್ಕಿ ಹೊಡೆದು ಮತ್ತೊಂದು ರಸ್ತೆಗೆ ತಳ್ಳಿಕೊಂಡು ಹೋಗಿದೆ. ಡಿಕ್ಕಿ ರಭಸಕ್ಕೆ 2 ಕಾರು, 3 ಬೈಕ್ಗಳು ಜಖಂ ಆಗಿವೆ.
ಘಟನೆಯಲ್ಲಿ ಅಯೂಬ್ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಸಾವನ್ನಪ್ಪಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post