ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನೀಲನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪರವಾನಗಿ ಇಲ್ಲದ ಪಿಸ್ತೂಲ್ಗಳನ್ನ ಬಚ್ಚಿಟ್ಟಿದ್ದ ಆರೋಪಿ ಬಾಯ್ಬಿಟ್ಟ ವಿಚಾರಕ್ಕೆ ಪೊಲೀಸರು ಸೈಲೆಂಟ್ ಸುನೀಲನನ್ನ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಪರವಾನಗಿ ಇಲ್ಲದ ಪಿಸ್ತೂಲ್ಗಳನ್ನ ಬಚ್ಚಿಟ್ಟಿದ್ದ ಆರೋಪದಲ್ಲಿ ಸಮೀವುಲ್ಲಾ ಖಾನ್ ಎಂಬಾತನ ಮೇಲೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಕೇಸ್ ದಾಖಲಿಸಿದ್ದರು. ಕೊಲೆ, ಕೊಲೆ ಯತ್ನ, ದರೋಡೆ ಸೇರಿ ಹಲವು ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ವಿಚಾರಣೆ ವೇಳೆ ಸಮೀವುಲ್ಲಾ ಖಾನ್ ಸೈಲೆಂಟ್ ಸುನೀಲನ ವಿಚಾರ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಸೈಲೆಂಟ್ ಸುನೀಲನಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಪಿಸ್ತೂಲ್ಗಳನ್ನ ಇಟ್ಟುಕೊಂಡು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಅನುಮಾನದಲ್ಲಿ ಸೈಲೆಂಟ್ ಸುನೀಲನನ್ನ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಜಮೀರ್ ವಿರುದ್ಧ ಸೈಲೆಂಟ್ ಸುನಿಲ ಸ್ಪರ್ಧೆ ಪಕ್ಕಾ.. ಟಿಕೆಟ್ ಕೊಡುತ್ತಾ ಬಿಜೆಪಿ..?
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದ. ಬಿಜೆಪಿ ಸಂಸದರಾದ ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ ಗರುಡಾಚಾರ್ ಭಾಗಿಯಾಗಿದ್ದರು. ಇದು ಸೈಲೆಂಟ್ ಸುನೀಲನ ರಾಜಕೀಯ ಪ್ರವೇಶಕ್ಕೆ ನಡೆದ ಸಿದ್ಧತೆ ಎಂದೇ ಸುದ್ದಿಯಾಗಿತ್ತು. ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಸೈಲೆಂಟ್ ಸುನೀಲ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಇದೀಗ ಪೊಲೀಸರು ಸೈಲೆಂಟ್ ಸುನೀಲನ ವಿಚಾರಣೆಗೆ ಮುಂದಾಗಿರುವುದು ಕುತೂಹಲ ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post