ಚಿನ್ನದ ನಾಡು ಈ ಬಾರಿಯ ಚುನಾವಣೆಯಲ್ಲಿ ಹೈ-ವೋಲ್ಟೇಜ್ ಕದನದ ಭೂಮಿಯಾಗಿ ಮಾರ್ಪಟ್ಟಿದೆ.. ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳಿಯುತ್ತಾರೆ ಅನ್ನೋ ಘೋಷಣೆ ಬೆನ್ನಲ್ಲೇ ಮತ್ತೊಂದು ಘಟನೆ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಕಮಲದೊಳಗೆ ಬೇಗುದಿಯ ಬೆಂಕಿ ಧಗಧಗಿಸಬಾರದು ಅನ್ನೋ ಕಾರಣ ಕೋಲಾರಮ್ಮ ಮೇಲೆ ಆಣೆ ಮಾಡಿಸಲಾಗಿದೆ..
‘ಮತ’ ಯುದ್ಧದ ಹೊಸ್ತಿಲಲ್ಲೇ ಸದ್ದು ಮಾಡಿದ ಕೋಲಾರ
ಕರ್ನಾಟಕದ ಕೋಲಾರ ಈ ಬಾರಿ ಚುನಾವಣೆಯಲ್ಲಿ ಸೆಂಟ್ರಾಫ್ ದಿ ಅಟ್ರ್ಯಾಕ್ಷನ್. ಚುನಾವಣೆ ಹೊಸ್ತಿಲಲ್ಲಿರುವಾಗಲೇ ಚಿನ್ನದ ನಾಡು ಹೈವೋಲ್ಟೇಜ್ ರೂಪ ಪಡೆಯುತ್ತಿದೆ. ಅದಕ್ಕೆ 2 ಕಾರಣಗಳಿವೆ.. ಒಂದು ಬಾದಾಮಿಯಿಂದ ಕೋಲಾರ ಕಡೆ ಕಾಂಗ್ರೆಸ್ ಕಟ್ಟಾಳು ಸಿದ್ದರಾಮಯ್ಯ ವಲಸೆ ಬಂದಿದ್ದಾರೆ.
ಟಿಕೆಟ್ ಆಕಾಂಕ್ಷಿಗಳಿಂದ ಆಣೆ ಮಾಡಿಸಿದ ಸಚಿವ ಮುನಿರತ್ನ
ಹೌದು.. ಕೋಲಾರ ಕ್ಷೇತ್ರದಂತೆ, ಪಕ್ಕದ ಬಂಗಾರಪೇಟೆ ಈ ಬಾರಿ ಸಖತ್ ಸದ್ದು ಮಾಡ್ತಿದೆ. ಕೈ ಕಲಿಗಳ ಭದ್ರ ಕೋಟೆಯಾಗಿರೋ ಇದೇ ಬಂಗಾರ ಪೇಟೆಯಲ್ಲಿ ಕೇಸರಿ ಪಡೆ ಜಯಕ್ಕೆ ಮುತ್ತಿಕ್ಕಲು ಶಪಥ ಮಾಡಿದೆ. ಆದ್ರೆ ಬಿಜೆಪಿಯಿಂದ ಅಖಾಡಕ್ಕಿಯಲು ಕಮಲದೊಳಗೆ ಸಿಕ್ಕಾಪಟ್ಟೆ ಫೈಟ್ ನಡೀತಿದೆ. ಇದೇ ಒಳಜಗಳ ಈಗ ಆಣೆ ಪ್ರಮಾಣ ಮಾಡುವ ಸ್ಥಿತಿಗೆ ತಲುಪಿಸಿಬಿಟ್ಟಿದೆ..
ಬಂಗಾರಪೇಟೆ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ. ಒಂದು ಟಿಕೆಟ್ಗಾಗಿ ಬರೋಬ್ಬರಿ 6 ಮಂದಿ ಹಪಹಪಿಸ್ತಿದ್ದಾರೆ. ಮುಸುಕಿನ ಗುದ್ದಾಟ ಕೂಡ ನಡೀತಿದೆ. ಹೀಗಾಗಿ ಈ ಗುದ್ದಾಟಕ್ಕೆ ಮದ್ದು ನೀಡಲು ಸಚಿವ ಮುನಿರತ್ನ ರಂಗ ಪ್ರವೇಶ ಮಾಡಿದ್ರು. ಖಾಸಗಿ ರೆಸಾರ್ಟ್ನಲ್ಲಿ ಸಂಧಾನ ಮಾತುಕತೆ ನಡೆಸಿದ್ರು. ನಂತರ ಜಿಲ್ಲೆಯ ಶಕ್ತಿ ದೇವತೆ ಕೋಲಾರಮ್ಮನ ಮೇಲೆ ಆಣೆ ಪ್ರಮಾಣ ಮಾಡಿಸಿದ್ದಾರೆ..
ಟಿಕೆಟ್ ಕೈ ತಪ್ಪಿದರೂ ಬಿಜೆಪಿ ಪಕ್ಷವನ್ನ ಬಿಡಲ್ಲ
ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದರೂ ಬಿಜೆಪಿ ಪಕ್ಷವನ್ನ ಬಿಡಲ್ಲ. ಪಕ್ಷ ಸೂಚಿಸಿ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಅಂತ 6 ಮಂದಿ ಟಿಕೆಟ್ ಆಕಾಂಕ್ಷಿಗಳಿಂದ ಆಣೆ ಮಾಡಿಸಿಕೊಂಡಿದ್ದಾರೆ.. ಬಂಗಾರಪೇಟೆ ಬಿಜೆಪಿ ಟಿಕೆಟ್ಗಾಗಿ ಲಾಭಿ ನಡೆಸ್ತಿರುವ ಮಾಜಿ ಶಾಸಕ ಎಂ ನಾರಾಯಣಸ್ವಾಮಿ, ವೆಂಕಟ ಮುನಿಯಪ್ಪ, ಬಿ.ವಿ ಮಹೇಶ್, ವಿ ಶೇಷು, ಅಮರೇಶ್ ಸೇರಿ 6 ಮಂದಿಯಿಂದ ಆಣೆ ಪ್ರಮಾಣ ಮಾಡಿಸಲಾಗಿದೆ.
2018ರಲ್ಲಿ ಕಮಲದೊಳಗೆ ಬಂಡಾಯವೆದ್ದಿದ್ರಿಂದ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿತ್ತು. ಈ ಬಾರಿಯೂ ಬಂಡಾಯದ ಬೇಗುದಿಯ ಬೆಂಕಿ ಧಗಧಗಿಸಬಾರದು ಅನ್ನೋ ಕಾರಣ ಆಣೆ ಅಸ್ತ್ರ ಪ್ರಯೋಗಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post