ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ರೀತಿ ನಟ ರಣಬೀರ್ ಕಪೂರ್ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಬ್ಬನ ಮೊಬೈಲ್ ಅನ್ನು ರಣಬೀರ್ ಕಪೂರ್ ಕಿತ್ತು ಬಿಸಾಕಿದ್ದಾರೆ.
ಇದನ್ನು ಓದಿ: VIDEO: ತಾಳ್ಮೆ ಕಳೆದುಕೊಂಡ ರಣ್ಬೀರ್.. ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ ಬಾಲಿವುಡ್ ಹೀರೋ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಕೂಡ ಆಗಿತ್ತು. ಇದಾದ ಬಳಿಕ ಅವರ ಈ ರೀತಿಯ ವರ್ತನೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದೀಗ ಆ ವಿಡಿಯೋ ಮಾಡಿದ್ದು ಜಾಹೀರಾತಿಗಾಗಿ ಮಾಡಿದ್ದು ಎನ್ನಲಾಗಿದೆ. ರಣಬೀರ್ ಅಹಂಕಾರದಿಂದ ವರ್ತಿಸಿದ್ದಲ್ಲ, ಇದು ಜಾಹೀರಾತುಗಾಗಿ ಮಾಡಿದ್ದು ಅಂತ ರಣಬೀರ್ ಕಪೂರ್ ಅವರ ಟೀಮ್ ಸ್ಪಷ್ಟನೆ ಕೊಡುತ್ತಿದೆ. ಆದರೂ ಕೂಡ ರಣಬೀರ್ ಕಪೂರ್ ಅವರ ಈ ರೀತಿಯ ವರ್ತನೆ ಬಗ್ಗೆ ಟೀಕೆಗಳು ಮುಂದುವರೆಯುತ್ತಾನೆ ಇವೆ.
ಇನ್ನು ರಣಬೀರ್ ಕಪೂರ್ ನಟಿಸಿದ ಕ್ರೈಮ್ ಡ್ರಾಮ ಚಿತ್ರ ‘ಅನಿಮಲ್’ ಆಗಸ್ಟ್ 11 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್‌ಲುಕ್ ಸಹ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post