ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ದೊಡ್ಡ ಫ್ಯಾನ್ಸ್ ಫಾಲೋವಿಂಗ್ ಹೊಂದಿದ್ದಾರೆ. ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಇದೇ ರೀತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯೊಬ್ಬನ ಮೊಬೈಲ್ ಅನ್ನು ರಣಬೀರ್ ಕಪೂರ್ ಕಿತ್ತು ಬಿಸಾಕಿದ್ದಾರೆ.
ರಣಬೀರ್ ಕಪೂರ್ ಫೋಟೋ ತೆಗೆಯಲು ಸಾಕಾಷ್ಟು ಫ್ಯಾನ್ಸ್ ಕೂಗುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ತನ್ನ ನೆಚ್ಚಿನ ನಟನ ಬಳಿ ಬಂದಿದ್ದಾನೆ. ಬಳಿಕ ಮೊಬೈಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದ. ಇದಕ್ಕೆ ರಣಬೀರ್ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಕೊಡುತ್ತಿದ್ದರು.
ಎಷ್ಟು ಬಾರಿ ಸೆಲ್ಫಿ ಕ್ಲಿಕ್ಕಿಸಿದರೂ ಫೋಟೋ ಸರಿಯಾಗಿ ಬಂದಿಲ್ಲ. ಹೀಗಾಗಿ ಅಭಿಮಾನಿ ಮತ್ತೆ ಮತ್ತೆ ಫೋಟೋ ತೆಗೆದುಕೊಳ್ಳಲು ಮುಂದಾದರು. ಇದರಿಂದ ಬೇಸತ್ತ ರಣಬೀರ್ ಕಪೂರ್ ಅಭಿಮಾನಿಯಿಂದ ಮೊಬೈಲ್ ಕೊಡು ಎಂದು ಕಿತ್ತುಕೊಂಡು ತಕ್ಷಣ ಬೀಸಾಕಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಫ್ಯಾನ್ಸ್ಗಳೆಲ್ಲ ನಟನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ರಣಬೀರ್ ಮಾಡಿರುವ ಕೆಲಸವನ್ನ ಟೀಕಿಸಿ ವಿಡಿಯೋವನ್ನ ಟ್ರೋಲ್ ಮಾಡ್ತಿದ್ದಾರೆ. ರಣಬೀರ್ ಕಪೂರ್ ಅಭಿನಯಿಸಿದ್ದ ಬ್ರಹ್ಮಸ್ತ್ರ ಸಿನಿಮಾ ಇತ್ತೀಚೆಗೆ ತೆರೆ ಕಂಡು ಗೆಲುವು ಪಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Shocking 😱 Ranbir Kapoor THROWS Fan's Phone for annoying him for a Selfie.#RanbirKapoor pic.twitter.com/dPEymejxRv
— [email protected] (@SAMTHEBESTEST_) January 27, 2023
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post