ಬೆಂಗಳೂರು: ಪೊಲೀಸ್ರಿಂದ ಗುಂಡೇಟು ತಿಂದರೂ ಕುಖ್ಯಾತ ರೌಡಿ ಅನೀಸ್ ಇನ್ನೂ ಬುದ್ಧಿ ಕಲಿತಂತೆ ಕಾಣ್ತಿಲ್ಲ. ಮೂರು ಕೊಲೆ, 5 ಕೊಲೆಯತ್ನ ಸೇರಿ 19 ಕೇಸ್ಗಳಲ್ಲಿ ಭಾಗಿಯಾಗಿರೋ ಅನೀಸ್ ಜೈಲು ವಾಸ ಮುಗಿಸಿ ಹೊರ ಬರ್ತಿದ್ದಂತೆ ಹಳೆ ವರಸೆ ಶುರು ಮಾಡಿದ್ದಾನೆ.

ಏಕಾಏಕಿ ಕುತ್ತಿಗೆ ಮೇಲೆ ಲಾಂಗ್ ಇಟ್ಟು ಅನೀಸ್ ಅಂಡ್ ಗ್ಯಾಂಗ್ ಸುಲಿಗೆ ಮಾಡಲು ಶುರು ಮಾಡಿದೆ. ಸೈಯದ್ ಇಮ್ಮು ಎಂಬಾತನನ್ನ ಅಡ್ಡಗಟ್ಟಿ ದರೋಡೆ ಮಾಡಿದೆ. ಜೆ.ಸಿ.ಬಿ ಹಾಗೂ ಲಾರಿಗಳನ್ನ ಇಟ್ಕೊಂಡು ಇಮ್ಮು ಬ್ಯುಸಿನೆಸ್ ಮಾಡ್ತಿದ್ದ. ಇಮ್ಮು ಅವರ ಬ್ಯುಸಿನೆಸ್ ಅನ್ನೇ ಟಾರ್ಗೆಟ್ ಮಾಡಿದ ಅನೀಸ್ ಅಂಡ್ ಸೈಯ್ಯದ್ ಮೆಹಬೂಬ್, ಏಕಾಏಕಿ ಅಟ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.
ಇಮ್ಮು ಅವರ ಕುತ್ತಿಗೆ ಮೇಲೆ ಲಾಂಗ್ ಇಟ್ಟು ಬೆದರಿಕೆ ಹಾಕಿದ್ದಾರೆ. ಕೊನೆಗೆ ಮಹೀಂದ್ರ ಥಾರ್ ಜೀಪ್ ಸೇರಿದಂತೆ ಅದರಲ್ಲಿದ್ದ ಒಟ್ಟು 1 ಲಕ್ಷ 80 ಸಾವಿರ ನಗದು ದರೋಡೆ ಮಾಡಿದ್ದಾರೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೀಶ್ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಬಾಗಲೂರು ಠಾಣೆಯ ಅತಿಥಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post