ಟೀಮ್ ಇಂಡಿಯಾದ ಕ್ರಿಕೆಟರ್ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಪುತ್ರಿಯನ್ನ ವರಿಸಿರುವ ರಾಹುಲ್ ಫೇಸ್ಬುಕ್ ಪೇಜ್ನಲ್ಲಿ ಅರಿಶಿಣ ಶಾಸ್ತ್ರದ ಮತ್ತಷ್ಟು ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಬಾದಾಮಿ ಕಲರ್ನ ಡ್ರೆಸ್ ಹಾಕಿಕೊಂಡಿರುವ ನವದಂಪತಿ ಒಬ್ಬರ ಮುಖಕ್ಕೆ ಒಬ್ಬರು ಅರಿಶಿಣ ಸವರುತ್ತಿದ್ದಾರೆ. ಮೈತುಂಬಾ ಹೂದಳಗಳನ್ನ ಮತ್ತಿಕೊಂಡಿರೋ ರಾಹುಲ್-ಅಥಿಯಾ ಫೋಟೋಗೆ ಸಖತ್ ಆಗಿಯೇ ಪೋಸ್ ಕೊಟ್ಟಿದ್ದಾರೆ.
ಈ ಹಿಂದೆ ಮದುವೆಯ ಕಲರ್ಫುಲ್ ಫೋಟೋಗಳನ್ನ ರಾಹುಲ್ ಹಂಚಿಕೊಂಡಿದ್ರು. ಆದ್ರೆ ಈಗ ವಿವಾಹಕ್ಕೂ ಮೊದಲೇ ಅಥಿಯಾ ಹಾಗೂ ರಾಹುಲ್ ಅರಿಶಿಣ ಮತ್ತು ಶ್ರೀಗಂಧದಲ್ಲಿ ಮಿಂದೆದ್ದಿದ್ದಾರೆ.
ಒಂದು ಫೋಟೋದಲ್ಲಿ ರಾಹುಲ್ ಅವರ ಮೈ ತುಂಬಾ ಅರಿಶಿಣ ಬಳಿಯಲಾಗಿದೆ. ಮತ್ತೆ ಅವರ ಮುಖಕ್ಕೆ ಇನ್ನಷ್ಟು ಅರಿಶಿಣ ಬಳಿದಿದ್ದಾರೆ. ಈ ವೇಳೆ ರಾಹುಲ್ ಕಣ್ಣುಗಳನ್ನ ಮುಚ್ಚಿಕೊಂಡಿದ್ದಾರೆ.
ಮತ್ತೊಂದು ಫೋಟೋದಲ್ಲಿ ರಾಹುಲ್ ಅವರ ತಂದೆ ಅರಿಶಿಣವನ್ನ ನಗುತ್ತಲೇ ಬಳಿಯುತ್ತಿದ್ದಾರೆ. ಈ ವೇಳೆ ರಾಹುಲ್ ಕೂಡ ನಗುತ್ತ ತಂದೆಯವರನ್ನ ನೋಡುತ್ತಿದ್ದಾರೆ.
ಅಥಿಯಾ ಶೆಟ್ಟಿಯವರ ತಂದೆ ನಟ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ನಲ್ಲಿ ಎರಡು ಕಡೆಯ ಕುಟುಂಬಸ್ಥರ ಹಾಗೂ ಕೆಲವೇ ಕೆಲವು ಕ್ರಿಕೆಟರ್ಸ್, ಸೆಲೆಬ್ರೆಟಿಗಳ ಸಮ್ಮುಖದಲ್ಲಿ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನೊಂದು ಫೋಟೋದಲ್ಲಿ ಸಂಬಂಧಿಗಳು ರಾಹುಲ್ ಹಾಕಿರುವ ಕುರ್ತಾವನ್ನ ತೆಗೆದು ಅವರ ಮೈಗೆ ಶ್ರೀಗಂಧ ಹಾಗೂ ಅರಿಶಿಣ ಬಳಿಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post