ಮೊನ್ನೆಯಷ್ಟೇ ಜೆಎನ್ಯುನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಂಘರ್ಷ ಉಂಟಾಗಿತ್ತು. ಇದೇ ಡಾಕ್ಯುಮೆಂಟರಿ ದಂಗಲ್ ದೆಹಲಿ ಯುನಿವರ್ಸಿಟಿಗೂ ಹರಡಿದೆ. ಗುಜರಾತ್ ಗಲಭೆಯ ಸಾಕ್ಷ್ಯಚಿತ್ರ ಪ್ರದರ್ಶನ ವೇಳೆ ದೆಹಲಿ ವಿವಿ ಕ್ಯಾಂಪಸ್ ರಣಾಂಗಣವಾಗಿದೆ. ಕೊನೆಗೆ ಕ್ಯಾಂಪಸ್ ಒಳಗೆ ಪೊಲೀಸರೇ ಎಂಟ್ರಿಯಾಗಬೇಕಾಯ್ತು.
ಗುಜರಾತ್ ನರಮೇಧದ ಬಗ್ಗೆ ಬಿಬಿಸಿ ತಯಾರಿಸಿರೋ ಸಾಕ್ಷ್ಯ ಚಿತ್ರ ದೇಶಾದ್ಯಂತ ಪರ ವಿರೋಧದ ಅಲೆಯನ್ನೇ ಎಬ್ಬಿಸಿದೆ. ಪ್ರಧಾನಿ ಮೋದಿ ಪಾತ್ರದ ಬಗ್ಗೆ ಆರೋಪಿಸಿ ಮಾಡಲಾಗಿರೋ ಡಾಕ್ಯುಮೆಂಟರಿ ಈಗಾಗಲೇ ಭಾರತದಲ್ಲಿ ಬ್ಯಾನ್ ಆಗಿದೆ. ಮೊನ್ನೆಯಷ್ಟೇ ಜೆಎನ್ಯು ಕ್ಯಾಂಪಸ್ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ್ದಕ್ಕೆ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಬಳಿಕ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಕೋಲಾಹಲವನ್ನೇ ಎಬ್ಬಿಸಿತ್ತು. ಇದೀಗ ದೆಹಲಿ ಯೂನಿವರ್ಸಿಟಿ ಸರದಿ.
ಜೆಎನ್ಯು ಬಳಿಕ ದೆಹಲಿ ವಿವಿಯಲ್ಲೂ ಬಿಬಿಸಿ ಸಾಕ್ಷ್ಯಚಿತ್ರ ಹಂಗಾಮ
ತಮ್ಮನ್ನು ವಶಪಡಿಸಲು ಬಂದ ಭದ್ರತಾ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ಶಾಂತವಾಗಿದ್ದ ಕ್ಯಾಂಪಸ್ನಲ್ಲಿ ಹೊಡೆದಾಟ, ಕೂಗಾಟ, ಚೀರಾಟ ಇವು ದೆಹಲಿ ಯೂನಿವರ್ಸಿಟಿಯಲ್ಲಿ ನಡೆದಿವೆ. ಗುಜರಾತ್ ಗಲಭೆ ಬಗ್ಗೆ ಬಿಬಿಸಿ ತಯಾರಿಸಿರೋ ಡಾಕ್ಯುಮೆಂಟರಿ ಪ್ರದರ್ಶನ ವಿಚಾರಕ್ಕೆ ದೆಹಲಿ ವಿವಿ ಕ್ಯಾಂಪಸ್ ಅಕ್ಷರಶಃ ರಣಾಂಗಣವಾಗಿದೆ.
ದೆಹಲಿ ಯೂನಿವರ್ಸಿಟಿಯ ಕಲಾ ವಿಭಾಗದ ವಿದ್ಯಾರ್ಥಿಗಳು ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಮುಂದಾಗಿದ್ದರು. ಸಾರ್ವಜನಿಕವಾಗಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದಕ್ಕೆ ಆಡಳಿತ ಮಂಡಳಿ ವಿರೋಧವ್ಯಕ್ತಪಡಿಸಿತ್ತು. ಆದ್ರೆ ಆಡಳಿತ ಮಂಡಳಿ ವಿರುದ್ಧವೇ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಸಾಕ್ಷ್ಯಚಿತ್ರ ಪ್ರದರ್ಶಿಸೋದಾಗಿ ಪಟ್ಟು ಹಿಡಿದಿದ್ದರು. ಕೊನೆಗೆ ಕ್ಯಾಂಪಸ್ಗೆ ದೆಹಲಿ ಪೊಲೀಸರೇ ಬರಬೇಕಾಯ್ತ. ಪೊಲೀಸರು ಕ್ಯಾಂಪಸ್ ಒಳಗೆ ಬರ್ತಿದ್ದಂತೆ ಅವ್ರ ವಿರುದ್ಧವು ಘೋಷಣೆ ಕೂಗಿದ್ದಾರೆ.
ಮತ್ತೊಂದೆಡೆ ಬಲಪಂಥೀಯ ವಿದ್ಯಾರ್ಥಿಗಳ ಗುಂಪು ಕೂಡಾ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಕಾಲೇಜಿನ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ವಿದ್ಯಾರ್ಥಿಗಳನ್ನು ಕ್ಯಾಂಪಸ್ನಿಂದ ತೆರವುಗೊಳಿಸಲು ಯತ್ನಿಸಿದ್ರು. ಆದ್ರೆ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲು ಮುಂದಾಗ್ತಿದ್ದಂತೆ ಪ್ರತಿಭಟನೆ ಸಂಘರ್ಷದ ರೂಪ ಪಡೆದುಕೊಂಡಿದೆ.
ಸದ್ಯ 24 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯೋ ಮೂಲಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಿಬಿಸಿ ತಯಾರಿಸಿರೋ ಡಾಕ್ಯುಮೆಂಟರಿ ಬಗ್ಗೆ ಶುರುವಾಗಿರೋ ಪರ-ವಿರೋಧದ ಫೈಟ್ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಕ್ಯಾಂಪಸ್ನಿಂದ ಕ್ಯಾಂಪಸ್ಗೆ ಸಾಕ್ಷ್ಯಚಿತ್ರದ ಕಿತ್ತಾಟ ಹಬ್ಬುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post