ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಕಲ ತಯಾರಿ ನಡೀತಿದೆ. ಈ ಕಡೆ ವಿಷ್ಣು ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಯನ್ನ ಐತಿಹಾಸಿಕ ಕ್ಷಣವನ್ನಾಗಿಸಲು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಭರ್ಜರಿ ಪ್ರಿಪರೇಷನ್ ಸಾಗ್ತಿದೆ.
ಸಾಕಷ್ಟು ವಿವಾದ, ವಿಷಾದಗಳ ನಂತರ 7 ಅಡಿ ಎತ್ತರದ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಿದ್ದು, ಜನವರಿ 29ರಂದು ಲೋಕಾರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ್ರು ವಿಷ್ಣು ಸ್ಮಾರಕ ಉದ್ಘಾಟಿಸಲಿದ್ದು, ಮೈಸೂರು ಜಿಲ್ಲೆಯ ಹಾಲಾಳು ಗ್ರಾಮದಲ್ಲಿ ದೊಡ್ಡ ಕಾರ್ಯಕ್ರಮವೇ ಹಮ್ಮಿಕೊಳ್ಳಲಾಗಿದೆ.
ಒಂದು ಕಡೆ ಮೈಸೂರಿನಲ್ಲಿ ಸರ್ಕಾರದಿಂದ ಕಾರ್ಯಕ್ರಮ ಆಯೋಜನೆಯಾಗ್ತಿದ್ರೆ ಈ ಕಡೆ ಅಭಿಮಾನಿಗಳ ಸಂಭ್ರಮವೂ ಜೋರಾಗಿದೆ. ವಿಷ್ಣು ಸ್ಮಾರಕ ಲೋಕಾರ್ಪಣೆಯನ್ನ ಒಂದು ಐತಿಹಾಸಿಕ ದಿನವನ್ನಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ವಿಶೇಷ ಯೋಜನೆಗಳನ್ನ ಹಾಕಿಕೊಂಡಿದ್ದಾರೆ. ಸ್ಮಾರಕದ ಸುತ್ತಮುತ್ತ ವಿಷ್ಣುವರ್ಧನ್ ಅವರ ಪೋಸ್ಟರ್, ಕಟೌಟ್ಗಳನ್ನ ನಿಲ್ಲಿಸುವುದು. ಅಲ್ಲಿ ಬರುವ ಅಭಿಮಾನಿಗಳಿಗೆ ಅನ್ನದಾನ ಮಾಡುವ ತಯಾರಿಯೂ ನಡೆದಿದೆ.
ಇನ್ನು ಲೋಕಾರ್ಪಣೆ ದಿನ ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿನ ಸ್ಮಾರಕದವರೆಗೂ ಬೈಕ್ ಱಲಿ ಹಮ್ಮಿಕೊಂಡಿದ್ದು, ಸಾವಿರಾರು ಜನ ಈ ಜಾಥಾದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಬೈಕ್, ಕಾರು, ಬಸ್ಗಳಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮೂಲಕ ಮೈಸೂರು ಸೇರಲಿದ್ದಾರೆ ವಿಷ್ಣು ಅಭಿಮಾನಿಗಳು. 5 ಎಕರೆ ಪ್ರದೇಶದಲ್ಲಿ ಸುಮಾರು 11 ಕೋಟಿ ವೆಚ್ಚದಲ್ಲಿ ವಿಷ್ಣು ಸ್ಮಾರಕ ತಲೆ ಎತ್ತಿದ್ದು, 13 ವರ್ಷಗಳ ಹೋರಾಟ ಕೊನೆಗೂ ಕಾರ್ಯರೂಪಕ್ಕೆ ಬರ್ತಿದೆ. ಹಾಗಾಗಿ, ಈ ಸಂಭ್ರಮವನ್ನ ಅಭಿಮಾನಿಗಳು ವಿಜೃಂಬಣೆಯಿಂದ ಆಚರಿಸೋಕೆ ಸಜ್ಜಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]firstlive.com
Discussion about this post