ರಾಯಚೂರು: ಹಾಸನ ಟಿಕೆಟ್ ವಿಚಾರ ಜೆಡಿಎಸ್‌ನಲ್ಲಿ ತಾರಕಕ್ಕೇರಿದೆ. ಸೂರಜ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡ್ತೇವೆ. ಪ್ರತಿಭಟನೆ ಮಾಡುವವರು ಜೆಡಿಎಸ್ ಕಾರ್ಯಕರ್ತರೇ ಅಲ್ಲ ಎಂದು ಗರಂ ಆಗಿ ಉತ್ತರಿಸಿದ್ದಾರೆ.
ಸೂರಜ್ ರೇವಣ್ಣ ಅವರು ಕಳೆದ ಬಾರಿ ಹಾಸನ ನಮ್ಮ ಕೈ ತಪ್ಪಿ ಹೋಗಿದೆ. ಈ ಬಾರಿ ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸದಿದ್ರೆ ಪಕ್ಷ ಸಂಘಟನೆ ಕಷ್ಟ ಎಂದಿದ್ರು. ಈ ಬಗ್ಗೆ ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಸೂರಜ್ ಹೇಳಿಕೆಯನ್ನ ಗಮನಕ್ಕೆ ತಗೊಂಡು ಅಭ್ಯರ್ಥಿ ಹಾಕೋಣ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡ್ತೇವೆ. ಬಿಜೆಪಿ ಗೆಲ್ಲಲಿ ಅನ್ನೋರು ಮಾತ್ರ ಪ್ರತಿಭಟನೆ ಮಾಡ್ತಿದ್ದಾರೆ. ಪ್ರತಿಭಟನೆ ಮಾಡುವವರು ಜೆಡಿಎಸ್ ಕಾರ್ಯಕರ್ತರಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post