ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್ನಲ್ಲಿ ಕೆಲ ದೋಷಗಳು ಕಂಡು ಬಂದಿದ್ದು ರಿಮೋಟ್ ಹ್ಯಾಕರ್ಸ್ಗಳು ಆಕ್ಸೆಸ್ ಪಡೆದುಕೊಂಡು ದಾಳಿ ಮಾಡಬಹುದು ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಎಚ್ಚರಿಕೆ ನೀಡಿದೆ.
ಕೇಂದ್ರದ ಸರ್ಕಾರಿ ಸಂಸ್ಥೆಯಾಗಿರುವ CERT-IN ಆಪರೇಟಿಂಗ್ ಸಿಸ್ಟಮ್ಗಳ ದೋಷಗಳು ಹಾಗೂ ದುರ್ಬಲತೆಗಳನ್ನ ಮೇಲ್ವಿಚಾರಣೆ ಮಾಡುತ್ತದೆ. ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್ ಮೇಲೆ ಹ್ಯಾಕರ್ಸ್ ದಾಳಿ ಮಾಡುವ ಸಾಧ್ಯತೆ ಇದೆ ಎಂದಿದೆ. ಈ ಹಿಂದಿನ ಮೈಕ್ರೋಸಾಫ್ಟ್ 109.0.1518.61 ವರ್ಸಿನ್ನ ದುರ್ಬಲತೆ ಪತ್ತೆಯಾಗಿವೆ. ಹೀಗಾಗಿ ಸಿಸ್ಟಂಗಳನ್ನ ರಕ್ಷಣೆ ಮಾಡಲು ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೌಸರ್ ಅನ್ನ ಇತ್ತಿಚೀನ ವರ್ಸನ್ಗೆ ಅಪ್ಡೇಟ್ ಮಾಡಲು CERT-IN ಸಲಹೆ ನೀಡಿದೆ.
109.0.1518.61 ವರ್ಸಿನ್ ಅನ್ನ ಮೈಕ್ರೋಸಾಫ್ಟ್ ಕಂಪನಿಯು ಈಗಾಗಲೇ ಬಿಡುಗಡೆ ಮಾಡಿದೆ. ತಕ್ಷಣ ಬಳಕೆದಾರರು ತಮ್ಮ ಸಿಸ್ಟಂಗಳನ್ನ ರಕ್ಷಣೆ ಮಾಡಿಕೊಳ್ಳಲು ಇದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕಂಪನಿ ತಿಳಿಸಿದೆ.
ಸಿಸ್ಟಂನಲ್ಲಿ ಟಪ್ಡೇಟ್ ಲಭ್ಯವಿದ್ದರೇ..
- ಸಿಸ್ಟಂನ ಸ್ಕ್ರೀನ್ ಮೇಲೆ ಕಾಣಿಸುವ 3 ಡಾಟ್ಗಳನ್ನ ಕ್ಲಿಕ್ ಮಾಡಿ
- ಅಲ್ಲಿ ಕಾಣುವ ಸೆಟ್ಟಿಂಗ್ಸ್ಗೆ ಹೋಗಬೇಕು
- ಸೆಟ್ಟಿಂಗ್ಸ್ನಲ್ಲಿ ಮೈಕ್ರೋಸಾಫ್ಟ್ ಎಡ್ಜ್ ಕ್ಲಿಕ್ ಮಾಡಿ
- ಅಪ್ಡೇಟ್ ಬಗ್ಗೆ ಮಾಹಿತಿ ಇರುತ್ತೆ. ಅದರ ಮೇಲೆ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post