ಬ್ಯಾಟಿಂಗ್ ಡ್ಯಾರಿಲ್ ಮಿಚೆಲ್ ಅಬ್ಬರ, ಬೌಲಿಂಗ್ನಲ್ಲಿ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಮ್ಯಾಜಿಕ್. ಪರಿಣಾಮ ಟೀಮ್ ಇಂಡಿಯಾ ವಿರುದ್ಧದ ಮೊದಲ T20 ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಬೀಗಿದೆ.
ಕಿವೀಸ್ಗೆ ಸಿಕ್ತು ಉತ್ತಮ ಆರಂಭ
ರಾಂಚಿಯ JSCA ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್, ಟೀಮ್ ಇಂಡಿಯಾ ಪಾಲಾಯ್ತು. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ್ರು. ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ಗೆ, ಆರಂಭಿಕರಾದ ಫಿನ್ ಅಲೆನ್, ಡಿವಾನ್ ಕಾನ್ವೆ, ಉತ್ತಮ ಆರಂಭವನ್ನೇ ಒದಗಿಸಿದ್ರು. ಫಿನ್ ಅಲೆನ್, ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ್ರು. 23 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಸಹಿತ 35 ರನ್ ಗಳಿಸಿದ ಅಲೆನ್, ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದ್ರು.
ಮಾರ್ಕ್ ಚಪ್ಮ್ಯಾನ್, ಡಕೌಟ್ ಆದ್ರು. ತಮ್ಮದೇ ಬೌಲಿಂಗ್ನಲ್ಲಿ ಸುಂದರ್, ಅದ್ಭುತ ರಿಟರ್ನ್ ಕ್ಯಾಚ್ ಮೂಲಕ, ಚಪ್ಮ್ಯಾನ್ಗೆ ಪೆವಿಲಿಯನ್ ದಾರಿ ತೋರಿಸಿದ್ರು. 3ನೇ ವಿಕೆಟ್ಗೆ ಡಿವಾನ್ ಕಾನ್ವೆ, ಗ್ಲೆನ್ ಫಿಲಿಪ್ಸ್ 60 ರನ್ ಕಲೆಹಾಕಿದ್ರು. ಕಾನ್ವೆ, ಸ್ಫೋಟಕ ಬ್ಯಾಟಿಂಗ್ ಮೂಲಕ, ಅಬ್ಬರಿಸಿದ್ರು. ಫಿಲಿಪ್ಸ್ 17 ರನ್ಗಳಿಸಿ ಔಟಾದ್ರು. ಕಾನ್ವೆ ಅರ್ಧಶತಕಗಳಿಸಿ, ಆರ್ಷ್ದೀಪ್ ಸಿಂಗ್ಗೆ ಬಲಿಯಾದ್ರು. ಮೈಕಲ್ ಬ್ರೆಸ್ವೆಲ್ ರನೌಟ್ ಆಗಿ, ಬಂದಷ್ಟೇ ಬೇಗ ಪೆವಿಲಿಯನ್ ಸೇರಿದ್ರು.
ಕೊನೆಯಲ್ಲಿ ಡ್ಯಾರಿಲ್ ಮಿಚೆಲ್ ಆರ್ಭಟ
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಡ್ಯಾರಿಲ್ ಮಿಚೆಲ್, ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಆರ್ಭಟಿಸಿದ್ರು. ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ್ರು. ಆರ್ಷ್ದೀಪ್ ಸಿಂಗ್ ಎಸೆದ ಕೊನೆಯ ಓವರ್ನಲ್ಲಿ ಮಿಚೆಲ್, 3 ಸಿಕ್ಸರ್ 1 ಫೋರ್ ಚಚ್ಚಿದ್ರು. ಈ ಓವರ್ನಲ್ಲಿ 27 ರನ್ ಹರಿದು ಬಂದ್ರು. ಮಿಚೆಲ್ ಆರ್ಭಟದಿಂದಾಗಿ ನ್ಯೂಜಿಲೆಂಡ್ 20 ಓವರ್ಗಳಲ್ಲಿ, 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸ್ತು. ಸುಂದರ್, ಕುಲ್ದೀಪ್ ಯಾದವ್ ಅದ್ಭುತ ಸ್ಪೆಲ್ ಮೂಲಕ ಮಿಂಚಿದ್ರು.
ಟೀಮ್ ಇಂಡಿಯಾಗೆ ಆರಂಭಿಕ ಆಘಾತ..!
177 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಲೋಕಲ್ ಬಾಯ್ ಇಶನ್ ಕಿಶನ್, ಕೇವಲ 4 ರನ್ಗಳಿಸಿ ಔಟಾದ್ರು. ರಾಹುಲ್ ತ್ರಿಪಾಠಿ ಡಕೌಟ್ ಆದ್ರು. ಶುಭ್ಮನ್ ಗಿಲ್ ಕೂಡ ಸಿಂಗಲ್ ಡಿಜಿಟ್ಗೆ ಜಾಗ ಖಾಲಿ ಮಾಡಿದ್ರು.
4ನೇ ವಿಕೆಟ್ಗೆ ಸೂರ್ಯ-ಹಾರ್ದಿಕ್ ಅರ್ಧಶತಕದ ಜೊತೆಯಾಟ
4ನೇ ವಿಕೆಟ್ಗೆ ಜೊತೆಯಾದ ಸೂರ್ಯಕುಮಾರ್ ಯಾದವ್, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, 68 ರನ್ಗಳ ಜೊತೆಯಾಟವಾಡಿದ್ರು. ಸೂರ್ಯಕುಮಾರ್ ಎಂದಿನಂತೆ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ್ರು. ಕಿವೀಸ್ ಬೌಲರ್ಗಳಿಗೆ ನಡುಕ ಹುಟ್ಟಿಸಿದ್ರು. ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಸೂರ್ಯ, 47 ರನ್ಗಳಿಸಿ ಸ್ಪಿನ್ನರ್ ಐಶ್ ಸೋಧಿಗೆ ವಿಕೆಟ್ ಒಪ್ಪಿಸಿದ್ರು. ಸೂರ್ಯ ಔಟಾದ ನಂತರ, ಹಾರ್ದಿಕ್ ಪಾಂಡ್ಯ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ದೀಪಕ್ ಹೂಡ ಹೋರಾಟ 10 ರನ್ಗೆ ಅಂತ್ಯವಾಯ್ತು. ಮಾವಿ 2 ರನ್ಗಳಿಸಿ ಔಟಾದ್ರು. ಕುಲ್ದೀಪ್ ಯಾದವ್ ಡಕೌಟ್ ಆದ್ರು.
ಒಂದೆಡೆ ಮೇಲಿಂದ ಮೇಲೆ ವಿಕೆಟ್ ಬೀಳ್ತಿದ್ರು, ವಾಷಿಂಗ್ಟನ್ ಸುಂದರ್ ಏಕಾಂಗಿ ಹೋರಾಟ ನಡೆಸಿದ್ರು. ಜಸ್ಟ್ 28 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್, 5 ಫೋರ್ಗಳಿಂದ ಭರ್ತಿ ಅರ್ಧಶತಕ ಸಿಡಿಸಿ ಔಟಾದ್ರು. ಅಂತಿಮವಾಗಿ ಟೀಮ್ ಇಂಡಿಯಾ, 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ಗಳಿಸ್ತು. 21 ರನ್ಗಳಿಂದ ನ್ಯೂಜಿಲೆಂಡ್ ಗೆಲುವು ಸಾಧಿಸ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post