ಹಾಸನ ತಮ್ಮ ಭದ್ರಕೋಟೆಯಿಂದ ತಮ್ಮ ಸೇನಾನಿಗಳನ್ನು ದಳಪತಿಗಳು ಇನ್ನೂ ರಣಕಣಕ್ಕೆ ಇಳಿಸಿಲ್ಲ. ಈ ನಡುವೆಯೇ ಕುಟುಂಬದ ಸದಸ್ಯರಾದ ಭವಾನಿ ರೇವಣ್ಣ ಖುದ್ದು ತಾನೇ ಸೇನಾನಿಯೆಂದು ಘೋಷಿಸಿಕೊಂಡು ಯುದ್ಧ ರಕ್ಷಾ ಕವಚಗಳನ್ನು ಧರಿಸಲು ಮುಂದಾಗಿದ್ದಾರೆ. ಆದ್ರೆ ಇದು ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದ್ದು ಸೈನಿಕರಲ್ಲಿ ಗೊಂದಲ ಮೂಡಿಸಿದೆ.
ಯಾವಾಗಲೂ ಹಸಿರು ಬಾವುಟವೇ ಹಾರುತ್ತಿದ್ದ ಅಖಾಡದಲ್ಲಿ ಕಳೆದ ಬಾರಿ ಕೇಸರಿ ಪತಾಕೆ ರಾರಾಜಿಸಿತ್ತು. ಜೆಡಿಎಸ್ ವಿರುದ್ಧ ಬಿಜೆಪಿಯ ಪ್ರೀತಂಗೌಡ ಗೆದ್ದು ಹಾಸನದಲ್ಲಿ ಹಸನ್ಮುಖರಾಗಿದ್ದರು. ಸದ್ಯ ಈ ಕ್ಷೇತ್ರದಲ್ಲಿ ಮತ್ತೆ ತೆನೆ ಹೊತ್ತ ಮಹಿಳೆ ನಡೆಯಬೇಕೆಂದು ಪಣ ತೊಟ್ಟಿರುವ ದಳಪತಿಗಳಿಗೆ ಸ್ವತಃ ದೊಡ್ಡಗೌಡರ ಹಿರಿ ಸೊಸೆ ಭವಾನಿ ರೇವಣ್ಣ ಹಾಸನದಿಂದ ನಾನೇ ಸ್ಪರ್ಧೆ ಮಾಡ್ತೀನಿ ಅಂತ ಘೋಷಣೆ ಮಾಡಿದ್ದು, ಕನ್ಫೂಶನ್ಗೆ ಕಾರಣವಾಗಿದೆ. ಇದಕ್ಕೆ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ವಿರೋಧಿಸಿದ್ರು. ಈ ಬೆನ್ನಲ್ಲೇ ಅಖಾಡಕ್ಕೆ ದೊಡ್ಡ ಗೌಡರ ಎಂಟ್ರಿಯ ಸೂಚನೆ ಸಿಕ್ಕಿದೆ.
ಗೊಂದಲಕ್ಕೆ ಬ್ರೇಕ್ ಹಾಕಲು ಮುಂದಾದ ದೇವೇಗೌಡರು
ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಹೆಚ್ಚಿದ ಗೊಂದಲ ಶುರುವಾದ ಬೆನ್ನಲ್ಲೇ ಗೊಂದಲಕ್ಕೆ ಬ್ರೇಕ್ ಹಾಕಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರೇ ಅಖಾಡಕ್ಕಿಳಿಯಲಿದ್ದಾರೆ. ಟಿಕೆಟ್ ಬಗ್ಗೆ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬಗಳು ದ್ವಂದ್ವ ಹೇಳಿಕೆ ನೀಡಿದ್ದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಇಬ್ಬರು ನಾಯಕರ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು ಭವಾನಿ ರೇವಣ್ಣಗೆ ಟಿಕೆಟ್ ಕೊಟ್ರೆ ಸ್ವರೂಪ್ ಬೆಂಬಲಿಗರಿಗೆ ಬೇಸರವಾಗಿ ಅವರ ಬೆಂಬಲಿಗರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ.
ಒಂದ್ವೇಳೆ ಸ್ವರೂಪ್‌ಗೆ ಟಿಕೆಟ್ ಕೊಟ್ಟರೆ ರೇವಣ್ಣ ಕುಟುಂಬ ತಟಸ್ಥರಾಗುವ ಸಾಧ್ಯತೆ ಇದೆ. ಆದ್ರೆ ಕಡ್ಡಿ ಮುರಿದಂತೆ ಭವಾನಿ ರೇವಣ್ಣರಿಗೆ ಹೆಚ್ಡಿಕೆ ಟಿಕೆಟ್ ನಿರಾಕರಿಸಿದ್ದಾರೆ. ಹೀಗಾಗಿ ಹಾಸನ ಟಿಕೆಟ್ ಗೊಂದಲ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಗೊಂದಲಕ್ಕೆ ತೆರೆ ಎಳೆಯಲು ಆಪ್ತರ ಮನವಿ ಮೇರೆಗೆ ಖುದ್ದು ದೊಡ್ಡ ಗೌಡ್ರು ಅಖಾಡಕ್ಕಿಳಿಯಲಿದ್ದಾರೆ.
ಹಾಸನ ಟಿಕೆಟ್ ಕೈ ತಪ್ಪುವ ಭೀತಿ. ರೇವಣ್ಣ ಕುಟುಂಬ ದೇವರ ಮೊರೆ
ಹಾಸನ ಟಿಕೆಟ್ ಕೈತಪ್ಪುವ ಭೀತಿ ಹಿನ್ನೆಲೆ ಹೆಚ್.ಡಿ ರೇವಣ್ಣ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದಾರೆ. ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ದೇಗುಲ ಭೇಟಿ ನೀಡುವ ರೇವಣ್ಣ ಈಗಲೂ ದೇಗುಲಕ್ಕೆ ಭೇಟಿ ಕೊಟ್ಟು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಮಾತ್ರವಲ್ಲದೇ ಭವಾನಿ ರೇವಣ್ಣ ಕೂಡ ಬುಸ್ತೇನಹಳ್ಳಿ ಗ್ರಾಮದ ಶ್ರೀಮಾಸ್ತಿಯಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಕುಟುಂಬದ ಸದಸ್ಯರ ಹೆಸರಲ್ಲಿ ಅರ್ಚನೆ ಮಾಡಿಸಿದ್ರು.
ಇದನ್ನು ಓದಿ: ಕೋಲಾರದಲ್ಲಿ ಗೆಲ್ಲಲು ಸಿದ್ದರಾಮಯ್ಯ ಪ್ಲಾನ್; ಅಲ್ಪಸಂಖ್ಯಾತ ಮುಖಂಡರ ಮನವೊಲಿಕೆಗೆ ಸಭೆ
ಭವಾನಿ ರೇವಣ್ಣರ ಒಂದು ಹೇಳಿಕೆ ಹಾಸನ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಇದು ದಳಪತಿಗಳ ಕುಟುಂಬದಲ್ಲೇ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಈ ಅಖಾಡಕ್ಕೆ ದೊಡ್ಡಗೌಡರು ಇಳಿಯೋ ಸೂಚನೆ ಕೊಟ್ಟಿದ್ದಾರೆ. ಆದ್ರೆ ಕುಟುಂಬದ ಗಲಾಟೆಯಲ್ಲಿ ಪಕ್ಕದ ಮನೆಯವರು ಲಾಭ ಪಡೆಯೋ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post