ಸ್ಯಾಂಡಲ್ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಇಷ್ಟೊತ್ತಿಗೆ ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡಬೇಕಿತ್ತು. ಆದರೆ ಅದ್ಯಾಕೋ ನಟಿ ರಮ್ಯಾ ಇನ್ನು ಕ್ಯಾಮೆರಾ ಫೇಸ್ ಮಾಡೋಕೆ ರೆಡಿಯಾದಂತೆ ಕಾಣಿಸ್ತಿಲ್ಲ. ಈಗ ಬೇರೆ ಮಿನಿಸ್ಟರ್ ಮುನಿರತ್ನ ಹೊಸ ಟ್ವಿಸ್ಟ್ ಕೊಟ್ಟಿದ್ದು, ರಮ್ಯಾ ಸಿನಿಮಾ ಸದ್ಯಕ್ಕಾಗಲ್ಲ ಅನ್ನೋ ಅನುಮಾನ ಕಾಡ್ತಿದೆ.
ಸಿನಿಮಾ ಯಾವಾಗ ಶುರು ಮಾಡ್ತೀರೆ ಅಂತ ಕೇಳಿದ್ದಕ್ಕೆ ‘ನಾನು ದಪ್ಪ ಆಗಿದ್ದೀನಿ ಅಲ್ವಾ’ ಅಂತ ಹೇಳಿ ಸ್ಲಿಮ್ ಆಗೋ ಪ್ರೋಸಸ್ನಲ್ಲಿದ್ದೇನೆ. ಡಯೆಟ್, ವರ್ಕೌಟ್ ಎಲ್ಲವೂ ನಡೀತಿದೆ ಅಂತ ಸುಳಿವು ಕೊಟ್ಟಿದ್ದರು ಮೋಹಕ ತಾರೆ. ಹೊಸ ವರ್ಷಕ್ಕೆ ಶೂಟಿಂಗ್ ಸ್ಟಾರ್ಟ್ ಮಾಡ್ತೀವಿ ಅಂತಾನೂ ಹೇಳಿದ್ರು. ರಮ್ಯಾ ಅವರ ಈ ಮಾತನ್ನು ಕೇಳಿ ಮೂರು ತಿಂಗಳು ಆಯ್ತು. ಹೊಸ ವರ್ಷನೂ ಬಂತು. ಜನವರಿ ಮುಗಿದು ಫೆಬ್ರವರಿನೂ ಬಂತು. ಆದರೆ ರಮ್ಯಾ ಅವ್ರು ಸ್ಲಿಮ್ ಆಗ್ಲಿಲ್ಲ, ಸಿನಿಮಾನೂ ಸ್ಟಾರ್ಟ್ ಮಾಡ್ಲಿಲ್ಲ. ಯಾಕಿರಬಹುದು ಅಂತ ಹುಡುಕ್ತಾ ಹೋದ್ರೆ ರಮ್ಯಾ ಅವರದ್ದು ಬೇರೆನೇ ಪ್ಲಾನ್ ಇರಬಹುದು ಅನ್ನೋ ಅನುಮಾನ ಕಾಡ್ತಿದೆ. ರಮ್ಯಾ ಸದ್ಯಕ್ಕೆ ಸಿನಿಮಾ ಶುರು ಮಾಡೋದು ಡೌಟ್ ಅನಿಸ್ತಾ ಇದೆ.
ರಮ್ಯಾ ಅವರು ಕೆಸಿಸಿ ಟ್ರೋಫಿ ಅನಾವರಣ ಮತ್ತು ಪ್ಲೇಯರ್ಸ್ ಬಿಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ಸಲ ಕೆಸಿಸಿ ಟೂರ್ನಿಯ ಫೀಮೇಲ್ ಫೇಸ್ ರಮ್ಯಾ ಅವರಾಗಿದ್ದಾರೆ. ಕಳೆದ ಬಾರಿ ವಿನ್ನರ್ ಆಗಿದ್ದ ಗೋಲ್ಡನ್ ಸ್ಟಾರ್ ಅವರಿಂದ ರೋಲಿಂಗ್ ಟ್ರೋಫಿ ಸ್ವೀಕರಿಸಿ ಹೊಸ ಆವೃತ್ತಿಗೆ ಚಾಲನೆ ಕೂಡ ಕೊಟ್ಟರು. ಕೆಸಿಸಿ ಇವೆಂಟ್ಗೆ ಬಂದಿದ್ದ ರಮ್ಯಾ ಅವರು ಈ ಹಿಂದಿನಂತೆ ಇದ್ದಾರೆ. ಫಿಸಿಕಲಿ ಸ್ಲಿಮ್ ಆಗಿಲ್ಲ. ಹಾಗಾಗಿ, ರಮ್ಯಾ ಕಂಬ್ಯಾಕ್ ಸಿನಿಮಾ ಸದ್ಯಕ್ಕೆ ಶುರುವಾಗಲ್ಲ. ಅದಕ್ಕೆ ಇನ್ನೂ ಟೈಂ ಬೇಕು ಅನ್ನೋದು ಕ್ಲಿಯರ್. ಯಾಕಂದ್ರೆ, ಉತ್ತರಕಾಂಡ ಚಿತ್ರದ ನಟ ಧನಂಜಯ್ ಕೂಡ ಬೇರೆ ಬೇರೆ ಸಿನಿಮಾಗಳ ಜೊತೆ ಕೆಸಿಸಿಯಲ್ಲಿ ಆಡ್ತಿದ್ದಾರೆ. ಆ ಕಡೆ ನಿರ್ಮಾಪಕ ಕಾರ್ತಿಕ್ ಗೌಡ ಅವರು ಕೂಡ ಕೆಸಿಸಿಯ ಮೇನ್ ಪಿಲ್ಲರ್ ಆಗಿದ್ದು, ಇನ್ನೊಂದು ತಿಂಗಳು ಈ ಕಡೆ ಆ ಕಡೆ ಯಾವುದೇ ಕೆಲಸ ಮಾಡಲ್ಲ.
ರಮ್ಯಾಗೆ ಗಾಳ ಹಾಕ್ತಿದ್ದಾರಾ ಮುನಿರತ್ನ?
ರಮ್ಯಾ ಸದ್ಯ ಸಕ್ರಿಯ ರಾಜಕೀಯದಲ್ಲಿಲ್ಲ. ಆದ್ರೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿಲ್ಲ. ರಿಸೆಂಟ್ ಆಗಿ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ಅದನ್ನ ಖಚಿತಪಡಿಸಿದ್ರು. ಆದ ರಮ್ಯಾ ಅವರನ್ನ ಮತ್ತೆ ಸಕ್ರಿಯ ರಾಜಕೀಯಕ್ಕೆ ತರಬೇಕು, ಅದರಲ್ಲೂ ಮಂಡ್ಯ ರಾಜಕಾರಣಕ್ಕೆ ಕರೆತರಬೇಕು ಅನ್ನೋ ಪ್ರಯತ್ನಗಳು ತೆರೆಮರೆಯಲ್ಲಿ ಸಾಗ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಬಿಜೆಪಿಯಿಂದಲೇ ರಮ್ಯಾ ಅವ್ರನ್ನ ಸಂಪರ್ಕಿಸುವ ಕೆಲಸಗಳು ನಡೀತಿವೆ ಎನ್ನಲಾಗಿದೆ. ಈಗ ಮುನಿರತ್ನ ಅವರು ಹೇಳಿದ ಮಾತು ಇದಕ್ಕೆ ಇನ್ನಷ್ಟು ಪುಷ್ಠಿ ಕೊಡುವಂತಿದೆ. ಮುನಿರತ್ನ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರುವ ಶಾಸಕ.
ಯಾವ ಸ್ಯಾಟಲ್ಲೈಟ್ ಹಾಕಿ ಹುಡುಕಿದ್ರೂ ಸಿಗದಿರೋರನ್ನು ನೋಡುವಂತಹ ಅವಕಾಶವನ್ನು ಸುದೀಪ್ ಅವರು ಮಾಡಿಕೊಟ್ಟಿದ್ದಾರೆ. ರಮ್ಯಾ ಅವರೇ ನಿಮಗೆ ಇದನ್ನು ನಾನು ಹೇಳುತ್ತಿರೋದು. ಯಾವ ಕ್ಯಾಮರಾಗೂ ಸಿಗದವರೂ ಇಲ್ಲಿ ಸಿಗುತ್ತಿದ್ದೀರಾ.. ನಾನು ಎಷ್ಟೋ ಸಲ ಫೋನ್ ಮೂಲಕ ಟ್ರೈ ಮಾಡಿದ್ದೇನೆ. ನೀವು ನನಗೆ ಸಿಕ್ಕೇ ಇಲ್ಲ.
ಮುನಿರತ್ನ, ಸಚಿವ
ಶೀಘ್ರದಲ್ಲೇ ರಾಜ್ಯದಲ್ಲಿ ಎಲೆಕ್ಷನ್ ಬೇರೆ ಬರ್ತಿರುವ ಕಾರಣ ಮಂಡ್ಯದಲ್ಲಿ ಬಿಜೆಪಿಯನ್ನ ಗಟ್ಟಿಗೊಳಿಸುವ ಕೆಲಸಕ್ಕೆ ಮುನಿರತ್ನ ಸೇರಿ ಪ್ರಮುಖ ರಾಜಕಾರಣಿಗಳು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ರಮ್ಯಾ ಅವರನ್ನು ಬಿಜೆಪಿಗೆ ಆಪರೇಷನ್ ಮಾಡೋದಕ್ಕೆ ಮುನಿರತ್ನ ಮುಂದಾಗಿದ್ದಾರೆ. ಹಾಗಾಗಿಯೇ ಅವರನ್ನು ಸಂಪರ್ಕಿಸೋಕೆ ತುಂಬಾ ಸಲ ಪ್ರಯತ್ನ ಪಟ್ಟಿದ್ದಾರೆ ಎನ್ನುವ ಕುತೂಹಲ ಕಾಡ್ತಿದೆ.
ತುಂಬಾ ವರ್ಷ ಆದ್ಮೇಲೆ ರಮ್ಯಾ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಆಗಿದ್ದಾರೆ. ಈಗಾಗಲೇ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಎನ್ನುವ ಸಂಸ್ಥೆಯಡಿ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎನ್ನುವ ಚಿತ್ರ ನಿರ್ಮಾಣ ಮಾಡಿ ತೆರೆಗೆ ತರೋ ಹಂತದಲ್ಲಿದ್ದಾರೆ. ಈ ನಡುವೆ ತಾವು ಆ್ಯಕ್ಟ್ ಮಾಡಲಿರುವ ಉತ್ತರಕಾಂಡ ಸಿನಿಮಾ ಆರಂಭಿಸಬೇಕಿದೆ. ರಮ್ಯಾ ಅವರ ನಡೆ ನೋಡಿದ್ರೆ ಚುನಾವಣೆ ಮುಗಿಯೋವರೆಗೂ ಕ್ಯಾಮೆರಾ ಫೇಸ್ ಮಾಡ್ತಾರಾ ಅನ್ನೋದು ಸದ್ಯಕ್ಕೆ ಅನುಮಾನ ಉಂಟುಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post