ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಅನ್ನೋ ಗುರಿ ಇಟ್ಟುಕೊಂಡ ಕಾಂಗ್ರೆಸ್ ಪಾಳಯ ಭರ್ಜರಿ ರಣತಂತ್ರ ರೂಪಿಸ್ತಿದೆ. ಬಸ್ ಯಾತ್ರೆ, ಸರಣಿ ಸಮಾವೇಶಗಳ ಮಧ್ಯೆ ಮಹತ್ವದ ಮೀಟಿಂಗ್ ನಡೆದಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಮೀಟಿಂಗ್ ಮಾಡಲಾಯ್ತು. ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು ಸಂಸದರು ಸೇರಿದಂತೆ ಪ್ರಮುಖ ನಾಯಕರಿಗೆ ಗೆಲುವಿನ ಗೇಮ್ಪ್ಲಾನ್ ಜಾರಿಗೆ ಟಾಸ್ಕ್ ಕೊಡಲಾಗಿದೆ.
ಈಗಾಗಲೇ ಗೃಹಲಕ್ಷಿ ಯೋಜನೆ ಮೂಲಕ ಮನೆಯ ಒಬ್ಬ ಮಹಿಳೆಗೆ ತಿಂಗಳಿಗೆ 2 ಸಾವಿರ ರೂಪಾಯಿ, 200 ಯೂನಿಟ್ವರೆಗಿನ ಉಚಿತ ವಿದ್ಯುತ್ ಕೊಡೋದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಇದೇ ಭರವಸೆಗಳನ್ನು ಮನೆ ಮನೆಗೆ ತಲುಪಿಸೋದು, ಟಿಕೆಟ್ ಹಂಚಿಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.
ಫೆಬ್ರವರಿ 3 ರಿಂದ ಮಾರ್ಚ್ 10ರವರೆಗೆ ಮನೆ ಮನೆ ಪ್ರಚಾರ ನಡೆಸೋದು. ಈ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಈಗಾಗಲೇ ಘೋಷಿಸಿರುವ 2 ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ‘ಗೃಹಜ್ಯೋತಿ’, ‘ಗೃಹಲಕ್ಷ್ಮಿ’ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಬೇಕು. ಮನೆಗಳಿಗೆ ಭೇಟಿ ವೇಳೆ ಪ್ರತಿ ಮನೆಯವರ ನೋಂದಣಿ ಮಾಡಬೇಕು. ಪ್ರತಿ ಗ್ರಾಮ, ವಾರ್ಡ್ ಮಟ್ಟದಲ್ಲಿ 2 ಸಭೆಗಳನ್ನು ನಡೆಸಬೇಕು. ಬಿಜೆಪಿಯ ‘ಪಾಪದ ಪುರಾಣ’ ಕರಪತ್ರ ಎಲ್ಲೆಡೆ ಹಂಚಬೇಕು.
SC, ST ಸಮುದಾಯದವರ ಮನೆ, ಅದೇ ಪ್ರದೇಶದಲ್ಲಿ ಉಳಿದ ಸಮುದಾಯಗಳ ಮನೆಗೆ ಭೇಟಿ ನೀಡಬೇಕು. ಸ್ಥಳೀಯ ಪ್ರಭಾವಿ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. 50 ಜನರ ತಂಡ ಪ್ರತಿ ದಿನ 2500 ಮನೆಗೆ ಭೇಟಿ ನೀಡಬೇಕು. ಹೀಗೆ ಪ್ರತಿ ಕ್ಷೇತ್ರದ 75 ಸಾವಿರ ಮನೆಗಳಿಗೆ ಭೇಟಿ ನೀಡಬೇಕು. ಒಂದು ತಿಂಗಳೊಳಗೆ ಮನೆಗಳಿಗೆ ಭೇಟಿ ನೀಡುವಂತೆ ಸೂಚನೆ ಕೊಡಲಾಗಿದೆ.
ಇದೇ ವೇಳೆ ಡಿಜಿಟಲ್ ಪ್ರಚಾರ, ಗೋಡೆ ಚಿತ್ರ, ಗ್ರಾಮದಲ್ಲಿ ಫ್ಲೆಕ್ಸ್, ಭಿತ್ತಿಪತ್ರ ಅಂಟಿಸುವುದು. ವಾಹನ ಸ್ಟಿಕ್ಕರ್, ಆಟೋ ಬ್ರ್ಯಾಂಡಿಂಗ್, ಜಗಲಿ ಕಟ್ಟೆ, ಡಂಗೂರ, ಬೀದಿ ನಾಟಕದ ಮೂಲಕ ಪಕ್ಷದ ಗ್ಯಾರೆಂಟಿ ಭರವಸೆಯ ಬಗ್ಗೆ ಪ್ರಚಾರ ಮಾಡಬೇಕು. ಈ ಎಲ್ಲಾ ಕಾರ್ಯಗಳಿಗೆ ಕಾಂಗ್ರೆಸ್ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಹಾಗೂ ಕೆಪಿಸಿಸಿ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಡೆ ಭರ್ಜರಿ ತಯಾರಿ ನಡೆಸ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಇರೋ ಟ್ರೆಂಡ್ ಅನ್ನು ಸರಿಯಾಗಿ ಬಳಸಿ ಗೆಲ್ಲುವ ಗೇಮ್ಪ್ಲಾನ್ ರೂಪಿಸ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post