ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ. ಜೆಡಿಎಸ್ ಪಕ್ಷದಲ್ಲಿ ಇದೊಂದೇ ವಿಚಾರ ಬಿರುಗಾಳಿಯನ್ನೇ ಎಬ್ಬಿಸಿದೆ. ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ವಿವಾದಕ್ಕೆ ತೆರೆ ಎಳೆಯೋ ಸಾಹಸ ಮಾಡಿದ್ರೂ ಹಾಸನ ಟಿಕೆಟ್ ಸಮರ ಸದ್ದು ಮಾಡ್ತಿದೆ. ಇದೀಗ ಹೆಚ್.ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ, ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಸಂದೇಶ ಕೊಟ್ಟಿದ್ದಾರೆ.
ಇದನ್ನೂ ಓದಿ: ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ HDK.. ಭವಾನಿ ರೇವಣ್ಣ ಟಿಕೆಟ್ ಗುದ್ದಾಟ ಶಮನಕ್ಕೆ ದೇವೇಗೌಡರ ಎಂಟ್ರಿ..!
ಅರಕಲಗೂಡಿನಲ್ಲಿ ಮಾತನಾಡಿರೋ MLC ಸೂರಜ್ ರೇವಣ್ಣ, ಇವತ್ತಿನ ಲೆಕ್ಕಾಚಾರ ನೋಡಿದ್ರೆ, ಭವಾನಿ ರೇವಣ್ಣ ಅಭ್ಯರ್ಥಿ ಆದರೆ ಗೆಲುವು ಖಚಿತ. ಇದನ್ನು ಬರೆದಿಟ್ಟುಕೊಳ್ಳಿ ಎಂದಿದ್ದಾರೆ. 2018ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರವನ್ನ ನಾವು ಕಳೆದುಕೊಂಡಿದ್ದೇವೆ. 2023ರಲ್ಲಿ ವಾಪಸ್ ವಶಪಡಿಸಿಕೊಳ್ಳಬೇಕು ಅನ್ನೋದೇ ನಮ್ಮ ಉದ್ದೇಶ ಎಂದಿದ್ದಾರೆ.
ಹಾಲಿ ಬಿಜೆಪಿ ಶಾಸಕರು ಏನಾದ್ರೂ ಸವಾಲ್ ಹಾಕಿಕೊಳ್ಳಲಿ ನಮಗೂ ಅದಕ್ಕೂ ಸಂಬಂಧವಿಲ್ಲ. ನಾವು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು. ಹಾಸನದಲ್ಲಿ ಭವಾನಿ ರೇವಣ್ಣ ಅವರನ್ನ ಬಿಟ್ಟು ಬೇರೆ ಜನಸಾಮಾನ್ಯರನ್ನ, ಕಾರ್ಯಕರ್ತರನ್ನು ನಿಲ್ಲಿಸುತ್ತೀವಿ ಎನ್ನುವ ಹೇಳಿಕೆಗಳನ್ನು ಬಿಟ್ಟು ಬಿಡಬೇಕು. ಹಾಸನ ಜಿಲ್ಲೆಯನ್ನ ರೇವಣ್ಣ ಸಾಹೇಬರು ಅರಿತಿರುವಂತಹ ವ್ಯಕ್ತಿ ಈ ಭೂಮಿಯಲ್ಲೇ ಮತ್ತೊಬ್ಬರಿಲ್ಲ ಅಂತಾ ಹೇಳಲು ಬಯಸುತ್ತೇನೆ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post