ಜ್ಯೂ. NTR ಸಹೋದರ ನಂದಮೂರಿ ತಾರಕರತ್ನ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ತೀವ್ರ ಅನಾರೋಗ್ಯ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: Jr.NTR ಸೋದರ ಸಂಬಂಧಿ, ನಟ ನಂದಮೂರಿ ತಾರಕರತ್ನ ಆಸ್ಪತ್ರೆಗೆ ದಾಖಲು
ನಿನ್ನೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ TDP ಪಕ್ಷ ಪಾದಯಾತ್ರೆ ಹಮ್ಮಿಕೊಂಡಿತ್ತು. ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ತಾರಕರತ್ನ ಕುಸಿದು ಬಿದ್ದಿದ್ದರು. ತಕ್ಷಣವೇ ಹೃದಯ ಸಂಬಂಧಿ ಪರೀಕ್ಷೆಗಳನ್ನ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಯಿತು. ಕಳೆದ ರಾತ್ರಿ 1 ಗಂಟೆಗೆ ಕುಪ್ಪಂನಿಂದ ಬೆಂಗಳೂರಿನ ಆನೇಕಲ್‌ನ ನಾರಾಯಣ ಹೃದಯಾಲಯದಲ್ಲಿ ತಾರಕರತ್ನ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ನಾರಾಯಣ ಹೃದಯಾಲಯ ತನ್ನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಆಸ್ಪತ್ರೆ ವರದಿ ಪ್ರಕಾರ ಕುಪ್ಪದಲ್ಲಿ ತಾರಕರತ್ನಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು.. ಕೂಡಲೇ ಅವರಿಗೆ CPR ಮಾಡಲಾಗಿತ್ತು.. ಬರೋಬ್ಬರಿ 45 ನಿಮಿಷಗಳ ಕಾಲ CPR ಮಾಡಲಾಗಿದೆ. ನಂತರ ಪ್ರೈಮರಿ ವೈದ್ಯರು ತಾರಕರತ್ನ ಅವರ ಸಂಬಂಧಿಕರಿಗೆ ಬೆಂಗಳೂರಿನ ನಾರಾಯಣ ಹೆಲ್ತ್ ಕೇರ್ ಗೆ ಹೆಚ್ಚಿನ ಚಿಕಿತ್ಸೆಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ನಾರಾಯಣ ಹೃದಯಲಾಯದ ತಜ್ಞರುರೊಬ್ಬರು ಅಲ್ಲಿಗೆ ಹೋಗಿ ತಪಾಸಣೆ ಮಾಡಿದಾಗ ಅವರು ಗಂಭೀರ ಸ್ಥಿತಿಯಲ್ಲಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಅವರನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಕೇರ್‌ಗೆ ಶಿಫ್ಟ್ ಮಾಡಲಾಗಿದೆ.. ಈ ವೇಳೆಯೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇತ್ತು.. ಸದ್ಯ ತಾರಕರತ್ನ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.. ಕಾರ್ಡಿಯಾಲಜಿಸ್ಟ್, ICU ಪರಿಣಿತರು ಹಾಗೂ ಇತರೆ ತಜ್ಞರನ್ನು ಒಳಗೊಂಡ ಮಲ್ಟಿ ಡಿಸಿಪ್ಲಿನರಿ ಕ್ಲಿನಿಕ್ ತಂಡದ ನೇತೃತ್ವದಲ್ಲಿ ನಿಗಾ ಇಡಲಾಗಿದೆ. ಎಲ್ಲಾ ರೀತಿಯ ಮ್ಯಾಕ್ಸಿಮಂ ಸಪೋರ್ಟ್‌ನಲ್ಲೂ ತಾರಕ್ ಅವರ ಆರೋಗ್ಯ ಗಂಭೀರವಾಗಿಯೇ ಇದೆ.. ಅವರಿಗೆ ಬೇಕಿರುವ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post