ಸ್ಲ್ಯಾಪ್ ಫೈಟಿಂಗ್ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು ಇದೆ. ಅದರಂತೆಯೇ ರೊಮೊನಿಯಾದಲ್ಲಿ ನಡೆದ ಸ್ಲ್ಯಾಪ್ ಫೈಟಿಂಗ್ ಚಾಂಪಿಯನ್ಶಿಪ್ನಲ್ಲಿ ಗೆದ್ದ ಆಟಗಾರನ ಫೋಟೋ ನೋಡಿದ ಜನರು ಈ ಆಟವನ್ನು ನಿಷೇಧ ಮಾಡುವಂತೆ ಧ್ವನಿ ಎತ್ತಿದ್ದಾರೆ.
ಕಾಮ್ಸ್ ಸೊರಿನ್ ಎಂಬಾತ ಸ್ಲ್ಯಾಪ್ ಫೈಟಿಂಗ್ ಚಾಂಪಿಯನ್ಶಿಪ್ನಲ್ಲಿ ಗೆದ್ದಿದ್ದಾನೆ. ಆದರೆ ಆತನ ಮುಖ ಪೂರ್ತಿ ಊದಿಕೊಂಡಿದ್ದು, ವಿರೂಪಗೊಂಡಿದೆ.
ಸ್ಲ್ಯಾಪ್ ಫೈಟಿಂಗ್ನಲ್ಲಿ ಕಾಮ್ಸ್ ಸೊರಿನ್ ಆಟವಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅನೇಕರು ಈ ಆಟವನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಅದರಲ್ಲೊಬ್ಬ ‘‘ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಂತ ಈ ಕ್ರೀಡೆಯು ನಿಷ್ಪ್ರಯೋನಕ’’ ಎಂದು ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post