ಮಹಾರಾಷ್ಟ್ರ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈನ ಮಲದ ಪ್ರದೇಶದ ಉದ್ಯಾನವನಕ್ಕಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದೆ. ಆ ಮೂಲಕ ಉದ್ಧವ್ ಠಾಕ್ರೆ ಆಡಳಿತದ ನಡೆಯನ್ನು ಹಿಮ್ಮೆಟ್ಟಿಸಲು ಯೋಚಿಸಿದೆ.
ಮಲದನ ಉದ್ಯಾನವಕ್ಕಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಮರುನಾಮಕರಣ ಮಾಡುವಂತೆ ಮುಂಬೈನ ಉಪನಗರದ ಜಿಲ್ಲಾ ಉಸ್ತುವಾರಿ ಸಚಿವ ಮಂಗಲ್ ಲೋಧಾ ಅವರು ಜಿಲ್ಲಾಧಿಕಾರಿಗೆ ಆದೇಶಿಸಿದ್ದರು. ಅದರಂತೆಯೇ ಇದೀಗ ಉದ್ಯಾನವನಕ್ಕಿದ್ದ ಟಿಪ್ಪು ಸುಲ್ತಾನ್ ಹೆಸರಿನ ಬದಲಿಗೆ ಬೇರೆ ಹೆಸರನ್ನಿಡಲು ಮುಂದಾಗಿದ್ದಾರೆ.
ಈ ಬಗ್ಗೆ ಲೋಧಾ ಅವರು ಟ್ವೀಟ್ ಮಾಡಿದ್ದು, ‘‘ಅಂತಿಮವಾಗಿ ಬಲಪಂಥೀಯರಿಗೆ ವಿಜಯ! ಹಿಂದೂ ಸಮಾಜದ ಪ್ರತಿಭಟನೆ ಮತ್ತು ಡಿಪಿಡಿಸಿ ಸಭೆಯಲ್ಲಿ ಗೋಪಾಲ್ ಶೆಟ್ಟಿ ಅವರ ಬೇಡಿಕೆಯನ್ನು ಪರಿಗಣಿಸಿದ ನಂತರ ಮಲದ ಉದ್ಯಾನವನಕ್ಕಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕಲು ಅನುಮತಿ ಸಿಕ್ಕಿದೆ. ಕೊನೆಯ ವರ್ಷ ಮಹಾ ವಿಕಾಸ್ ಅಗಾಡಿ ಸರ್ಕಾರ ಉದ್ಯಾನವನಕ್ಕೆ ಟಿಪ್ಲು ಸುಲ್ತಾನ್ ಹೆಸರಿಟ್ಟರು. ಇದಕ್ಕಾಗಿ ನಾವು ಪ್ರತಿಭಟಿಸಬೇಕಾಯಿತು’’ ಎಂದು ಬರೆದಿದ್ದಾರೆ.
Finally, victory of the Right!
Ordered removal of name Tipu Sultan from the park in Malad after considering the protests by Sakal Hindu Samaj & demand by @iGopalShetty Ji in the DPDC meeting.
Last year MVA govt had named the ground after Tipu Sultan and we had to protest it! pic.twitter.com/IRBgiAmfbZ
— Mangal Prabhat Lodha (@MPLodha) January 27, 2023
“ಕೆಲವರು ಟಿಪ್ಪು ಸುಲ್ತಾನ್ ಉದ್ಯಾನವನ ಎಂದು ಬ್ಯಾನರ್ ಹಾಕಿದ್ದರು ಮತ್ತು ಸ್ಥಳೀಯರು ಅದನ್ನು ವಿರೋಧಿಸಿದರು. ಇದಕ್ಕೆ ಮೊದಲು ಔಪಚಾರಿಕವಾಗಿ ಹೆಸರಿಸಲಾಗಿಲ್ಲ. ಆದ್ದರಿಂದ ಅಗತ್ಯವನ್ನು ಮಾಡಿ ಅಕ್ರಮ ಬ್ಯಾನರ್ ಅನ್ನು ತೆಗೆದುಹಾಕಲು ನಾನು ಅಧಿಕಾರಿಗಳಿಗೆ ಕೇಳಿದ್ದೇನೆ” ಎಂದು ಲೋಧಾ ಹೇಳಿದ್ದಾರೆ.
ಲೋಧಾ ಅವರು ಮಲದ ಉದ್ಯಾನವನದ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಮತ್ತು ಉದ್ಯಾನವನಕ್ಕೆ ಟಿಪ್ಪು ಹೆಸರನ್ನು ವಿರೋಧಿಸಿ ರಸ್ತೆಗೆ ಇಳಿದ ಜನರನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಟಿಪ್ಪು ಹೆಸರನ್ನು ಉದ್ಯಾನವನದಿಂದ ತೆಗೆದು ಬಿಆರ್ ಅಂಬೇಡ್ಕರ್ ಮತ್ತು ಅಶ್ಫಾಕುಲ್ಲಾ ಖಾನ್ ಹೆಸರನ್ನು ನೀಡಲು ಬಿಜೆಪಿಗೆ ಸಲಹೆಗಳು ಬರುತ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post