ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.
ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ ಹಿಂದಿನಿಂದಲೂ ವೈರುಧ್ಯ ಇದೆ ಎನ್ನಲಾಗುತ್ತಿದೆ. ಕೊಟ್ಟೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಹಿನ್ನಲೆ ಜಗಳೂರಿನಿಂದ ಕೊಟ್ಟೂರು ಪಟ್ಟಣದವರೆಗೂ ಸೀರಿಗೇರಿ ಸ್ವಾಮಿಗಳು ಬೈಕ್ ಱಲಿ ಹಮ್ಮಿಕೊಂಡಿದ್ದರು. ಈ ವೇಳೆ ಕಲ್ಲು ತೂರಾಟ ಮಾಡಲಾಗಿದೆ.
ಉಜ್ಜೈನಿ ಮಠ ಮತ್ತು ಉಜ್ಜೈನಿ ಗ್ರಾಮಕ್ಕೆ ತರಳುಬಾಳು ಸಿರಿಗೇರಿ ಮಠದವರು ತೆರಳ ಬಾರದು ಎನ್ನುವ ಅಲಿಖಿತ ನಿಯಮವಿದೆ. ಆದರೂ ಕೂಡ ಕಾಳಪುರ ಕ್ರಾಸ್ ಬಳಿಯಿಂದ ಉಜ್ಜೈನಿ ಪೀಠವಿರುವ ಉಜ್ಜೈನಿ ಗ್ರಾಮಕ್ಕೆ ಕೆಲವರು ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾಳಪುರ ಗ್ರಾಮದ ಜನರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಕಲ್ಲು ತೂರಾಟದ ಪರಿಣಾಮದಿಂದ ಗ್ರಾಮದಲ್ಲಿ ಕೆಲ ಮನೆ, ಬೈಕ್, ಬಣವಿಗಳಿಗೆ ಬೆಂಕಿ ಜೊತೆಗೆ ಪೊಲೀಸರ ಮೇಲೂ ಹಲ್ಲೆ ಮಾಡಲಾಗಿದೆ. ಹೀಗಾಗಿ ಉಜ್ಜೈನಿ ಹಾಗೂ ಸುತ್ತಮುತ್ತಲಿನ 9 ಪಾದಗಟ್ಟೆಗಳಿರುವ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post