ಯಾರಾದರೂ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲೊಂದು ಕಂಪನಿ ಉದ್ಯೋಗಿಗಳನ್ನು ಹುಡುಕುತ್ತಿದೆ. ಬರೀ ತಿಂದು ನಿದ್ದೆ ಮಾಡಿದ್ರೆ ಸಾಕು. ಮಾತ್ರವಲ್ಲದೆ, ಸರಿಯಾದ ಸಂಬಳವನ್ನು ಕೊಡುತ್ತದೆ. ಕೆಲಸ ಇಲ್ಲದೆ ಖಾಲಿ ಕೂತವರಿಗೆ ಈ ಕೆಲಸ ನೆರವಾಗಬಹುದು ನೋಡಿ.
ಸ್ಲೀಪ್ ಜಂಕಿ ಎಂಬ ಕಂಪನಿ ನಿದ್ರೆಗೆ ಸಂಬಂಧಿಸಿದ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಗಿ ಉದ್ಯೋಗಿಗಳನ್ನು ಹುಡುಕುತ್ತಿದೆ. ‘‘ಡೈರಿ ಡ್ರೀಮರ್ಸ್’’ ಟೈಟಲ್ನಲ್ಲಿ ಈ ಅಧ್ಯಯನ ನಡೆಸುತ್ತಿದೆ. ಇದಕ್ಕಾಗಿ 5 ಜನರ ತಂಡ ರಚಿಸಲು ಮುಂದಾಗಿದೆ. ಕಂಪನಿ ಉದ್ಯೋಗಿಗಳಿಗೆ 81 ಸಾವಿರ ರೂಪಾಯಿ ಸಂಬಳ ನೀಡುತ್ತದೆ.
ಅಂದಹಾಗೆಯೇ, ಸುಮ್ನೆ ತಿಂದು ನಿದ್ರೆ ಮಾಡೋದಲ್ಲ. ಈ ಕಂಪನಿ ಚೀಸ್ ತಿನ್ನುವ ವಿಚಾರದಲ್ಲಿ ನಿದ್ರೆಗೆ ಸಂಬಂಧಿಸಿ ಅಧ್ಯಯನ ಮಾಡುತ್ತಿದೆ. ಚೀಸ್ ತಿಂದ ಮೇಲೆ ನಿದ್ರೆಯ ಗುಣಮಟ್ಟ, ಶಕ್ತಿಯ ಗುಣಮಟ್ಟ, ದುಃಸ್ವಪ್ನಗಳನ್ನು ಬಗ್ಗೆ ಸಂಶೋಧನೆ ಮಾಡುತ್ತಿದೆ.
ಕಂಪನಿಯ ರೂಪುರೇಷೆಯಂತೆಯೇ ಕೆಲಸ ಮಾಡಿ, ಅದಕ್ಕೆ ತಕ್ಕಂತ ವಿಮರ್ಶೆ ನೀಡಿದರೆ ಸಾಕು ಸಂಬಳವನ್ನು ಕೊಡುತ್ತದೆ. ಒಟ್ಟಿನಲ್ಲಿ ಉದ್ಯೋಗಿಯು ಕಂಪನಿಯ ಚೀಸ್ ಟೇಸ್ಟರ್ ಆಗಿ ಕೆಲಸ ಮಾಡಬೇಕಿದೆ.
ಚೀಸ್ ತಿಂದ ಬಳಿಕ ಏನು ಮಾಡಬೇಕು ಗೊತ್ತಾ?
ಉದ್ಯೋಗಿಗಳು ಬೇರೆ ಬೇರೆ ರೀತಿಯ ಚೀಸ್ ಟೇಸ್ಟ್ ಮಾಡಬೇಕು. ತಿಂದ ಬಳಿಕ ಸ್ಲೀಪ್ ಟ್ರ್ಯಾಕರ್ ಅನ್ನು ಬಳಸಿಕೊಂಡು ನಿದ್ರೆಯ ಸಮಯವನ್ನು ಲಾಗ್ ಮಾಡಬೇಕು. ವಾರವಿಡಿ ನಿದ್ರೆಯ ಗುಣಮಟ್ಟ, ಶಕ್ತಿಯ ಮಟ್ಟ ಲಿಖಿತ ವರದಿ ಸಲ್ಲಿಸಬೇಕು. ಮೂರು ತಿಂಗಳ ಕಾಲ ಮಾಡಬೇಕು.
ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಚೀಸ್ ಟೇಸ್ಟರ್ ಆಗಲು 21 ವರ್ಷದ ವಯಸ್ಸಿನವರಿಗೆ ಅವಕಾಶ ತೆರೆದಿಟ್ಟಿದೆ. ಸ್ಲೀಪ್ ಜಂಕಿ ವೆಬ್ಸೈಟ್ಗೆ ಹೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಈ ಸಂಶೋಧನೆಯಲ್ಲಿ ವ್ಯಕ್ತಿ ಏಕಾಂಗಿಯಾಗಿ ಮಲಗಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post