ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಶುಕ್ಲಪಕ್ಷ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ. ರಾಹುಕಾಲ- ಶನಿವಾರ ಬೆಳಗ್ಗೆ 09:00 ರಿಂದ 10:30 ರವರೆಗೆ ಇರಲಿದೆ.
ಮೇಷ
- ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
- ಕಿರಿಯರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತೀರಿ ಗೌರವ ಸಿಗಲಿದೆ
- ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ
- ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವಂತಹದ್ದು
- ಹಳೆಯ ಕೆಲಸಗಳು ಪ್ರಗತಿ ಹೊಂದುತ್ತದೆ
- ಸಾಯಂಕಾಲ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಣಬಹುದು
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
- ಆರ್ಥಿಕವಾದ ಸಮಸ್ಯೆ ಬಗೆಹರಿಯುವ ದಿನವಾಗಿದೆ
- ಪ್ರೇಮಿಗಳಿಗೆ ಅನುಕೂಲ ಆಗುವಂತಹದ್ದು
- ಭೂ ಸಂಬಂಧವಾದ ಲಾಭವೂ ಇರುವಂತಹದ್ದು
- ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
- ಮಹಾಗಣಪತಿ ಪ್ರಾರ್ಥನೆ ಮಾಡಿ
ಮಿಥುನ
- ದೇಹದಲ್ಲಿ ದೌರ್ಬಲ್ಯ ಕಾಡಬಹುದು
- ಶಿಕ್ಷಣದಲ್ಲಿ ಗಮರ್ನಾಹವಾದ ಪ್ರಗತಿ
- ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ನಿಮಗೆ ಉಪಯೋಗಕ್ಕೆ ಬರುತ್ತದೆ
- ಪ್ರೇಮಿಗಳಿಗೆ ಆತಂಕ ಮತ್ತು ಭಯ ಇರುವಂತಹದ್ದು
- ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
- ಮದುವೆಯ ವಿಚಾರ ಪ್ರಸ್ತಾಪಕ್ಕೆ ಬರಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ಹೊಸದಾಗಿ ಮದುವೆ ಮಾಡಿಕೊಂಡವರಲ್ಲ್ಲಿ ಕಿರಿಕಿರಿ ಉಂಟಾಗಲಿದೆ
- ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿ
- ಪ್ರಿಯರೊಂದಿಗೆ ಜಗಳವಾಗಬಹುದು
- ಆರ್ಥಿಕವಾದ ಲಾಭವಿದೆ
- ಆರೋಗ್ಯ ಕಾಪಾಡಿಕೊಳ್ಳಿ
- ಮನೆಯಲ್ಲಿ ಸಾಯಂಕಾಲದ ಹೊತ್ತಿಗೆ ಸಮಸ್ಯೆಯಾಗಬಹುದು
- ಈಶ್ವರನ ಆರಾಧನೆ ಮಾಡಿ
ಸಿಂಹ
- ಮೇಲಾಧಿಕಾರಿಗಳಿಂದ ಸಹಾಯ ಕೇಳುವುದರಿಂದ ಅನುಕೂಲ ಆಗುತ್ತದೆ
- ಪ್ರಾಮಾಣಿಕತೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರದ ಹಾಗೆ ನಡೆದುಕೊಳ್ಳಿ
- ಶಿಕ್ಷಣ, ರಾಜಕೀಯ ಈ ಎರಡೂ ವಿಚಾರದಲ್ಲಿ ಯಶಸ್ಸಿದೆ
- ನಿಮ್ಮ ಅನಿಸಿಕೆ ಈಡೇರುವ ದಿನ
- ಉತ್ತಮವಾದ ಸಮಯ ಇರುವುದರಿಂದ ಶುಭ ಲಾಭಗಳಿವೆ
- ಕುಟುಂಬದಲ್ಲಿ ಅನ್ಯೋನ್ಯತೆ ಕಾಣುವಂತಹದ್ದು
- ನಾರಾಯಣ ಸ್ತೋತ್ರ ಪಠಿಸಿ
ಕನ್ಯಾ
- ಕುಟುಂಬದಲ್ಲಿ ಕಿರಿಕಿರಿ ಉಂಟಾಗಲಿದೆ
- ಧಾರ್ಮಿಕ ವಿಚಾರಕ್ಕೆ ಜಗಳ ಆಗುವ ಸಾಧ್ಯತೆ ಇದೆ
- ವ್ಯಾಪಾರ ವೃದ್ಧಿಗೆ ಹೊಸ ಮಾರ್ಗವನ್ನು ಹುಡುಕುತ್ತೀರಿ
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಆಗುವ ದಿನ
- ಆರೋಗ್ಯ ಸಮಸ್ಯೆ ಅದರಲ್ಲೂ ಗಂಟಲು ನೋವಿನ ಸಮಸ್ಯೆ ಕಾಣುವಂತಹದ್ದು
- ಹಣದ ವಿಚಾರದಲ್ಲಿ ಮನಸ್ತಾಪ ಆಗಲಿದೆ
- ಸಾಯಂಕಾಲ ಪಶ್ಚಿಮಕ್ಕೆ ತಿರುಗಿ ಶಿವಮಂತ್ರವನ್ನು 108 ಬಾರಿ ಜಪಿಸಿ
ತುಲಾ
- ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
- ಇಂದು ಬಡ್ತಿಗೆ ಅವಕಾಶಗಳಿರುವ ದಿನ
- ಸಮಾಜಮುಖಿ ಕೆಲಸಗಳಲ್ಲಿ ಸಹಕಾರ ನೀಡುತ್ತೀರಿ
- ಎರಡನೇ ಮದುವೆಯಾದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಲಿದೆ
- ಅತಿಯಾದ ಶ್ರಮದಿಂದ ದೇಹಾಲಸ್ಯ ಉಂಟಾಗುತ್ತದೆ
- ಆರ್ಥಿಕವಾದ ಸಮಾಧಾನ ತೃಪ್ತಿ ಕೊಡಲಿದೆ
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ವೃಶ್ಚಿಕ
- ಉದ್ಯೋಗ ಅಥವಾ ವ್ಯವಹಾರದ ಬಗ್ಗೆ ಚರ್ಚೆ ಮಾಡಿ
- ಸರಿಯಾದ ಆಹಾರವನ್ನು ಸೇವಿಸಿ
- ಅರ್ಜೀರ್ಣದಂತಹ ಸಮಸ್ಯೆ ಕಾಡಬಹುದು
- ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ
- ಮನೆಯವರ ಸಲಹೆ ಸಹಕಾರ ಬಹಳ ಅಗತ್ಯವಾಗಿರುತ್ತದೆ
- ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಾಗಿರಬೇಕು
- ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ಧನಸ್ಸು
- ನಿಮ್ಮ ಮಾತಿಗೆ ಮನೆಯಲ್ಲಿ ಸ್ವಲ್ಪ ಬೆಲೆ ಸಿಗುವಂತಹದ್ದು
- ನಿಮ್ಮ ಪ್ರತಿಭೆ ಅಥವಾ ಬುದ್ಧಿವಂತಿಕೆ ಉಪಯೋಗವಾಗುತ್ತದೆ
- ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
- ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
- ಶರೀರದಲ್ಲಿ ಹಳೆಯ ನೋವು ಕಾಣಿಸಿಕೊಳ್ಳಬಹುದು
- ಖರ್ಚು ಅಧಿಕವಾಗಿರುತ್ತದೆ ಮನಸ್ಸಿಗೆ ಬೇಸರವಾಗಲಿದೆ
- ದುರ್ಗಾದೇವಿಯ ಆರಾಧನೆ ಮಾಡಿ
ಮಕರ
- ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
- ನಿಮ್ಮ ಆರೋಗ್ಯವೂ ಬಹಳ ಮುಖ್ಯವಾಗಿರುತ್ತದೆ ತಾತ್ಸಾರ ಬೇಡ
- ಅಪರಿಚಿತರೊಂದಿಗೆ ಚರ್ಚೆ ನಡೆಸುತ್ತೀರಿ ಆದರೆ ಉಪಯೋಗವಾಗುವುದಿಲ್ಲ
- ಹಿರಿಯರ ಮಾರ್ಗದರ್ಶನ ಪಡೆಯಿರಿ
- ಹೊಸ ವ್ಯಾಪಾರಕ್ಕೆ,ವ್ಯವಹಾರಕ್ಕೆ ಅನುಕೂಲವಿದೆ
- ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾಗಿರುತ್ತದೆ ಆದರೆ ಅದು ಕಾರ್ಯರೂಪಕ್ಕೆ ತನ್ನಿ
- ಶ್ರೀ ರಾಮನನ್ನು ಪೂಜಿಸಿ
ಕುಂಭ
- ಕಾನೂನು ವಿಚಾರಗಳಲ್ಲಿ ಜಯ ಸಿಗುವಂತಹದ್ದು
- ವ್ಯವಹಾರದಲ್ಲಿ ಲಾಭ ಸಿಗಲಿದೆ
- ಅತಿಥಿಗಳ ಆಗಮನದಿಂದ ಸಂತೋಷ ಸಿಗಲಿದೆ
- ಮಕ್ಕಳಿಗೆ ಶುಭ ಸಮಯವಾಗಿರುತ್ತದೆ
- ವ್ಯವಹಾರ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ನೀವು ಚರ್ಚೆ ಮಾಡಬಹುದು
- ಪ್ರಯಾಣವು ಅನಿವಾರ್ಯವಾಗಿ ಏರ್ಪಾಟಾಗುತ್ತದೆ
- ಇಷ್ಟ ದೇವತಾ ಆರಾಧನೆ ಮಾಡಿ
ಮೀನ
- ನಿಮ್ಮ ಹಳೆಯ ಕೆಲಸಕ್ಕೆ ತುಂಬಾ ಪರಿಶ್ರಮ ಪಡಬೇಕಾಗುತ್ತದೆ
- ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
- ನಿಮ್ಮ ಯೋಚನೆಗಳ ಬಗ್ಗೆ ಗಮನಹರಿಸಿ
- ಕುಟುಂಬದ ಜವಾಬ್ದಾರಿ ಬಗ್ಗೆ ನಿರ್ಲಕ್ಷ್ಯಬೇಡ
- ಅತಿಥಿಗಳಿಗಾಗಿ, ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ
- ವ್ಯವಹಾರಕ್ಕೆ ಅನುಕೂಲವಿದೆ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ
- ನವಗ್ರಹ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post