ಜಾರ್ಖಂಡ್: ಇಂದು ಬೆಳ್ಳಂಬೆಳಗ್ಗೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಇಬ್ಬರು ಡಾಕ್ಟರ್ ಸೇರಿ ಐವರು ಸಜೀವ ದಹನಗೊಂಡಿರುವ ಘಟನೆ ಧನ್ಬಾಗ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನ ವೈದ್ಯಕೀಯ ಸಂಸ್ಥೆಯ ಮಾಲೀಕ ಡಾ.ವಿಕಾಸ್ ಹಜ್ರಾ, ಪತ್ನಿ ಡಾ.ಪ್ರೇಮಾ ಹಜ್ರಾ ಇವರ ಅಳಿಯ ಸೋಹಾನ್ ಖಮಾರಿ ಮನೆಗೆಲಸದ ತಾರಾದೇವಿ ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಕೂಡ ಮೃತಪಟ್ಟಿದ್ದು ಅವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ನರ್ಸಿಂಗ್ ಹೋಂನಲ್ಲಿನ ಸ್ಟೋರ್ ರೂಮ್ನಲ್ಲಿ ಮೊದಲು ಬೆಂಕಿ ಕಾಣಿಸಿದೆ. ಬಳಿಕ ಅದು ಇಡೀ ಬಿಲ್ಡಿಂಗ್ಗೆ ಆವರಿಸಿಕೊಂಡಿದೆ. ಹೀಗಾಗಿ ಒಳಗಿದ್ದ ಮಾಲೀಕರು ಸೇರಿದಂತೆ ಇತರರು ಹೊರ ಬರಲಾಗದ ಕಾರಣ ಅವರು ಬೆಂಕಿಯಲ್ಲಿ ಸಜೀವವಾಗಿ ದಹನವಾಗಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಪ್ರೇಮ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post