ಉತ್ತರ ಕರ್ನಾಟಕ ಟಾರ್ಗೆಟ್ ಮಾಡಿಕೊಂಡು ಬಿಜೆಪಿ ರಣತಂತ್ರ ರೂಪಿಸ್ತಿದೆ. ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲು ಕಮಲ ಪಾಳಯದ ಘಟಾನುಘಟಿಗಳೇ ಅಖಾಡಕ್ಕಿಳಿದಿದ್ದಾರೆ. ಕಳೆದ ರಾತ್ರಿ ಹುಬ್ಬಳ್ಳಿಗೆ ಬಂದಿಳಿದ ಬಿಜೆಪಿ ಚಾಣಕ್ಯ, ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಕುಂದಗೋಳದಲ್ಲಿ ಬೃಹತ್ ರೋಡ್ ಶೋ ಮೂಲಕ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಉಳಿದಿರೋದು ನೂರೇ ದಿನಗಳು. ಈಗಾಗಲೇ ಅಧಿಕಾರದಲ್ಲಿರೋ ಕೇಸರಿ ಪಡೆ ಮತ್ತೆ ಚುಕ್ಕಾಣಿ ಹಿಡಿಯಲು ತಂತ್ರಗ ಮೇಲೆ ತಂತ್ರಗಳನ್ನು ರೂಪಿಸ್ತಿದೆ. ಬಿಜೆಪಿಯ ಘಟಾನುಘಟಿ ನಾಯಕರ ದಂಡು ರಾಜ್ಯದತ್ತ ಬರ್ತಿದೆ. ಕಳೆದ ಎರಡು ತಿಂಗಳಿ ರಾಜ್ಯಕ್ಕೆ ಪ್ರಧಾನಿ ಮೋದಿಹಾಗೂ ಅಮಿತ್ ಶಾ ಹಲವು ಬಾರಿ ಭೇಟಿ ನೀಡಿ, ಮತಬೇಟೆ ಮಾಡಿದ್ದರು. ಕಳೆದ ರಾತ್ರಿ ಗಂಡುಮೆಟ್ಟಿದ ನಾಡಿಗೆ ಅಮಿತ್ ಶಾ ಎಂಟ್ರಿಯಾಗಿದ್ದಾರೆ.
ಸಿಎಂ ಸೇರಿಂದತೆ ಬಿಜೆಪಿ ನಾಯಕರಿಂದ ಅಮಿತ್ ಶಾಗೆ ಸ್ವಾಗತ
ಬಿಜೆಪಿ ಚಾಣಕ್ಯ ಅಮಿತ್ ಶಾ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ಕಳೆದ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾರನ್ನು ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದ್ರು. ಏರ್ಪೋರ್ಟ್ನಿಂದ ನೇರವಾಗಿ ಹುಬ್ಬಳ್ಳಿಯ ಡೆನಿಸನ್ ಹೋಟೆಲ್ಗೆ ಅಮಿತ್ ಶಾ ತೆರಳಿದ್ರು. ಡೆನಿಸನ್ ಹೋಟೆಲ್ನಲ್ಲಿ ರಾತ್ರಿ ಉಳಿದುಕೊಂಡಿದ್ದ ಅಮಿತ್ ಶಾ, ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಧಾರವಾಡಕ್ಕೆ ಅಮಿತ್ ಶಾ
ಬೆಳಗ್ಗೆ ಬಿವಿಬಿ ಇಂಜೀನಿಯರಿಂಗ್ ಕಾಲೇಜ್ಗೆ ಭೇಟಿ ನೀಡಲಿದ್ದಾರೆ. ಕೆಎಲ್ಇ ಸಂಸ್ಥೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ನ ಒಳಾಂಗಣ ಕ್ರೀಡಾಂಗಣವನ್ನು ಅಮಿತ್ ಶಾ ಬೆಳಗ್ಗೆ 10.45ಕ್ಕೆ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಕೆಎಲ್ಇ ಕಾರ್ಯಕ್ರಮದ ನಂತರ ಧಾರವಾಡಕ್ಕೆ ಪ್ರಯಾಣ ಬೆಳಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಧಾರವಾಡಕ್ಕೆ ಬಂದಿಳಿಯಲಿರುವ ಶಾ, ವಿಧಿ-ವಿಜ್ಞಾನ ವಿವಿ ಕ್ಯಾಂಪಸ್ಗೆ ಶಂಕುಸ್ಥಾಪನೆ ಮಡಲಿದ್ದಾರೆ.
ಕುಂದಗೋಳದಲ್ಲಿ ಶಾ ಬೃಹತ್ ರೋಡ್ ಶೋ!
ಬಳಿಕ ಮಧ್ಯಾಹ್ನ ಕುಂದಗೋಳಕ್ಕೆ ಭೇಟಿ ನೀಡಲಿರೋ ಅಮಿತ್ ಶಾ ಬೃಹತ್ ರೋಡ್ ಶೋ ಮೂಲಕ ಮತದಾರರನ್ನು ಸೆಳೆಯಲಿದ್ದಾರೆ. ಮಧ್ಯಾಹ್ನ 1:30ಕ್ಕೆ ಏರ್ಕ್ರಾಫ್ಟ್ ಮೂಲಕ ಕುಂದಗೋಳಕ್ಕೆ ತೆರಳಲಿರೋ ಗೃಹ ಸಚಿವರು ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ನಡೆಯಲಿರುವ ವಿಜಯ ಸಂಕಲ್ಪ ಅಭಿಯಾನ ಹಾಗೂ ಗೋಡೆ ಬರಹ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ಕುಂದಗೋಳ ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಗಾಳಿ ಮಾರೆಮ್ಮ ಗುಡಿಯಿಂದ ಮೂರಂಗಡಿ ಕ್ರಾಸ್ವರೆಗೆ ಒಂದೂವರೆ ಕೀಮಿ ನಡೆಯಲಿರುವ ರೋಡ್ ಶೋನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಪಾಲ್ಕೊಳ್ಳುವ ನಿರೀಕ್ಷೆ ಇದೆ. ಇದಾದ ಬಳಿಕ 3 ಗಂಟೆಗೆ ಏರ್ ಕ್ರಾಫ್ಟ್ ಮೂಲಕ ಎಂಕೆ ಹುಬ್ಬಳ್ಳಿಗೆ ಅಮತ್ ಶಾ ಭೇಟಿ ಕೊಡಲಿದ್ದಾರೆ. ಸಂಜೆ 4 ಗಂಟೆಗೆ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ 2 ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದು, ಪಕ್ಷ ಸಂಘಟನೆಯ ಕುರಿತು ಪ್ರಮುಖರೊಂದಿಗೆ ಚರ್ಚೆ ಮಾಡಲಿದ್ದಾರೆ. ಇವೆಲ್ಲಾ ಮುಗಿಸಿ ರಾತ್ರಿ ಎಂಕೆ ಹುಬ್ಬಳ್ಳಿಯಿಂದ ನವದೆಹಲಿಗೆ ಅಮಿತ್ ಶಾ ಪ್ರಯಾಣ ಬೆಳೆಸಲಿದ್ದಾರೆ.
ಅಮಿತ್ ಶಾ ಅವರು, ಕುಂದಗೋಳದಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ಭಾಗವಹಿಸಿ ನಂತರ ಬೆಳಗಾಂನಲ್ಲಿ ಕಿತ್ತೂರಿನಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ ಮತ್ತು ಱಲಿಯಲ್ಲಿ ಭಾಗವಹಿಸ್ತಾರೆ. ಬೆಳಗಾಂನಲ್ಲಿ ಪ್ರಮುಖರ ಸಭೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸ್ತಾರೆ. ನಂತರ ರಾತ್ರಿ ದೆಹಲಿಗೆ ಹೋಗ್ತಾರೆ.
ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಇಡೀ ಒಂದು ದಿನ ಉತ್ತರಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ಚುನಾಣೆಗಾಗಿ ರಣವ್ಯೂಹ ಹೆಣೆಯಲಿದ್ದಾರೆ. ಎರಡು ದಿನಗಳ ಭೇಟಿ ಮೂಲಕ ಅಮಿತ್ ಶಾ ಆ ಭಾಗದ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post