ಪ್ಯಾನ್ ಇಂಡಿಯಾ ಟ್ರೆಂಡ್ ಜಾಸ್ತಿ ಆಗ್ತಿದ್ದಂತೆ ಮಲ್ಟಿಸ್ಟಾರ್ ಚಿತ್ರಗಳು ಹೆಚ್ಚಾಗ್ತಿವೆ. ಸೂಪರ್ ಸ್ಟಾರ್ಗಳು ಒಟ್ಟಿಗೆ ಸಿನಿಮಾ ಮಾಡೋ ಕಲ್ಚರ್ ಟ್ರೆಂಡ್ ಆಗ್ತಿವೆ. ಈಗ ಇಡೀ ಇಂಡಿಯಾನೇ ಸರ್ಪ್ರೈಸ್ ಆಗೋ ಥರಾ ಸಿನಿಮಾವೊಂದು ಸೆಟ್ಟೇರ್ತಿದ್ದು. ಬಾಹುಬಲಿ, ತ್ರಿಬಲ್ ಆರ್, ಕೆಜಿಎಫ್, ವಿಕ್ರಮ್ ಈ ಚಿತ್ರಗಳೆಲ್ಲಾ ಪ್ಯಾನ್ ಇಂಡಿಯಾ ಹಿಟ್ ಆಗೋಕೆ ಪ್ರಮುಖ ಕಾರಣ ಮಲ್ಟಿಸ್ಟಾರ್ ಕಾಸ್ಟಿಂಗ್. ಇಬ್ಬರು ಮೂವರು ಬಿಗ್ ಸ್ಟಾರ್ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದು. ಈಗ ಸಿನಿಮಾ ಇಂಡಸ್ಟ್ರಿನೇ ಅಚ್ಚರಿ ಪಡುವ ಮತ್ತೊಂದು ಮೆಗಾ ಕಾಂಬಿನೇಷನ್ ಸೌತ್ ಇಂಡಸ್ಟ್ರಿಯಲ್ಲಿ ತಯಾರಾಗ್ತಿದೆ. ಮಾಸ್ಟರ್, ವಿಕ್ರಮ್ ಖ್ಯಾತಿಯ ಲೋಕೇಶ್ ಕನಕರಾಜ್ ಮುಂದಿನ ಚಿತ್ರದಲ್ಲಿ ಸ್ಟಾರ್ ಮೇಳಾನೇ ನಡೆಯಲಿದೆ.
ಒಂದೇ ಚಿತ್ರದಲ್ಲಿ ವಿಜಯ್, ವಿಕ್ರಮ್, ಕಮಲ್.!
ವಿಕ್ರಮ್ ಸಿನಿಮಾದ ಸೂಪರ್ ಸಕ್ಸಸ್ ನಂತರ ಲೋಕೇಶ್ ಕನಕರಾಜ್ ತಮಿಳು ನಟ ವಿಜಯ್ ಜೊತೆ ಎರಡನೇ ಬಾರಿ ಕೈ ಜೋಡಿಸ್ತಿದ್ದಾರೆ. ಮಾಸ್ಟರ್ ಚಿತ್ರದ ನಂತರ ಮತ್ತೆ ವಿಜಯ್ಗೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಈ ಸಲ ವಿಜಯ್ ಜೊತೆ ಸೂಪರ್ಸ್ಟಾರ್ ಕಮಲ್ ಹಾಸನ್ ಹಾಗೂ ಚಿಯಾನ್ ವಿಕ್ರಮ್ ಒಟ್ಟುಗೂಡಿಸೋಕೆ ಮಹಾ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ. ಈ ಯೋಜನೆಯಲ್ಲಿ ಲೋಕೇಶ್ ಯಶಸ್ಸು ಕೂಡ ಕಂಡಿದ್ದಾರಂತೆ.
ವಿಜಯ್ ಅವರ 67ನೇ ಚಿತ್ರ ನಿರ್ದೇಶಿಸ್ತಿರುವ ಲೋಕೇಶ್ ವಿಲನ್ ಪಾತ್ರಕ್ಕಾಗಿ ಚಿಯಾನ್ ವಿಕ್ರಮ್ ಅವರನ್ನು ಅಪ್ರೋಚ್ ಮಾಡಿದ್ದಾರೆ. ವಿಜಯ್ಗೆ ವಿಲನ್ ಆಗೋಕೆ ವಿಕ್ರಮ್ ಕೂಡ ಒಪ್ಪಿಗೆ ಸೂಚಿಸಿದ್ದು, ಸ್ಪೆಷಲ್ ರೋಲ್ವೊಂದಕ್ಕೆ ಕಮಲ್ ಹಾಸನ್ ಅವರನ್ನ ಬುಕ್ ಮಾಡ್ಕೊಂಡಿದ್ದಾರಂತೆ.
ಬಾಲಿವುಡ್ನಿಂದ ಸಂಜಯ್ ದತ್, ಕನ್ನಡದಿಂದ ರಕ್ಷಿತ್.!
ಈ ಚಿತ್ರದ ಇನ್ನೂ ಸ್ಪೆಷಲ್ ಸಮಾಚಾರ ಏನೆಂದರೆ ವಿಜಯ್, ವಿಕ್ರಮ್, ಕಮಲ್ ಜೊತೆಗೆ ಬಾಲಿವುಡ್ ಖಳನಾಯಕ್ ಸಂಜಯ್ ದತ್ ಕೂಡ ಇರಲಿದ್ದಾರಂತೆ. ಕೆಜಿಎಫ್ ನಂತರ ಸಂಜಯ್ ದತ್ಗೆ ಸೌತ್ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ಈಗಾಗಲೇ ದತ್ ಬರೋದು ಕನ್ಫರ್ಮ್ ಆಗಿದೆ. ಇನ್ನು 777ಚಾರ್ಲಿ ಮೂಲಕ ಪ್ಯಾನ್ ಇಂಡಿಯಾ ಹಿಟ್ ಬಾರಿಸಿದ ರಕ್ಷಿತ್ ಶೆಟ್ಟಿ ಕೂಡ ವಿಜಯ್ ಟೀಮ್ ಸೇರಲಿದ್ದಾರೆ ಎಂದು ಹೇಳಲಾಗಿದೆ.
ಲೋಕೇಶ್ ಕನಗಕರಾಜ್ ಸಿನಿಮಾಗಳಲ್ಲಿ ಚೈನ್ ಲಿಂಕ್ ಕಥೆಗಳಿರುತ್ತದೆ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾದ ಪಾತ್ರಗಳಿಗೆ ಲಿಂಕ್ ಕೊಡೋದು ಲೋಕೇಶ್ ಅವರ ಸ್ಟೈಲ್. ಇದರಲ್ಲಿ ಗೆಲುವು ಕೂಡ ಕಂಡಿದ್ದಾರೆ. ವಿಕ್ರಮ್ ಸಿನಿಮಾದಲ್ಲಿ ಕೈದಿ 2 ಹಾಗೂ ವಿಕ್ರಮ್ 2 ಚಿತ್ರದ ಸುಳಿವು ಕೊಟ್ಟಿದ್ರು. ಈಗ ಕಮಲ್ ಹಾಸನ್ ಎಂಟ್ರಿಯಿಂದ ದಳಪತಿ 67ನೇ ಚಿತ್ರದಲ್ಲಿ ವಿಕ್ರಮ್ ಸೀಕ್ವೆಲ್ಗೂ ಲಿಂಕ್ ಕೊಟ್ಟಿರಬಹುದು ಎಂಬ ಕುತೂಹಲ ಕಾಡ್ತಿದೆ. ರಾಜಮೌಳಿ, ಪ್ರಶಾಂತ್ ನೀಲ್ ಅವರಂತೆ ಲೋಕೇಶ್ ಕನಕರಾಜ್ ಕೂಡ ತಮ್ಮದೇ ಬ್ರ್ಯಾಂಡ್ ಕ್ರಿಯೆಟ್ ಮಾಡ್ಕೊಂಡಿದ್ದಾರೆ. ಹಾಗಾಗಿ, ಸೆಟ್ಟೇರೋ ಮುಂಚೆನೇ ವಿಜಯ್ 67ನೇ ಹೈ ವೋಲ್ಟೇಜ್ ಎಕ್ಸ್ಪೆಕ್ಟೆಶನ್ ಮೂಡಿಸಿದ್ದು, ಈ ಸ್ಟಾರ್ ಕಾಸ್ಟಿಂಗ್ ಫೈನಲ್ ಆದ್ರೆ ಬಾಕ್ಸ್ ಆಫೀಸ್ ಶೇಕ್ ಆಗೋದು ಗ್ಯಾರೆಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post