ಇಂದು ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಪೈಲಟ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದ್ದಾರೆ.
ಪೈಟರ್ ಜೆಟ್ ಅಪಘಾತದಲ್ಲಿ ಓರ್ವ ಪೈಲಟ್ ಸಾವು ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ಅಸುನೀಗಿದ ಪೈಲಟ್ ಕರ್ನಾಟಕ ಮೂಲದವರು ಎಂಬುದು ಕನ್ನಡಿಗರಿಗೆ ಶಾಕ್ ನೀಡಿದೆ. ಅದರಲ್ಲೂ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದ್ದಾರೆ ಎಂಬುದು ನುಂಗಲಾರದ ತುತ್ತಂತಾಗಿದೆ.
ಯಾರು ಈ ಹನುಮಂತರಾವ್ ಸಾರಥಿ?
ಹನುಮಂತರಾವ್ ಸಾರಥಿ ಮೂಲತಃ ಬೆಳಗಾವಿಯವರು. 28 ಅಕ್ಟೋಬರ್ 1987ರಲ್ಲಿ ಜನಿಸಿದರು. ಇವರ ತಂದೆ ರೇವಣ್ಣ ಸಿದ್ದಪ್ಪ ಸಾರಥಿ ಮತ್ತು ತಾಯಿ ಸಾವಿತ್ರಿ ಸಾರಥಿ. ಈ ದಂಪತಿಗಳಿಗೆ ಹುಟ್ಟಿದ ಮೂರು ಮಕ್ಕಳಲ್ಲಿ ಹನುಮಂತರಾವ್ ಸಾರಥಿ ಕೂಡ ಒಬ್ಬರು.
ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ವಿಂಗ್ ಕಮಾಂಡರ್ ಹುದ್ದೆಯನ್ನು ಸೇರಿಕೊಂಡರು. ಇವರ ಸಹೋದರ ಪ್ರವೀಣ್ ಸಾರಥಿ ಕೂಡ ಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಹನುಮಂತರಾವ್ ಸಾರಥಿಗೆ ಮದುವೆಯಾಗಿದ್ದು, ವಿಮಾನ್ಶ ಅವರನ್ನು ವರಿಸಿದ್ದರು. ಇಬ್ಬರು ಮಕ್ಕಳ ತಂದೆಯಾದ ಹನುಮಂತರಾವ್ ಇಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೂರು ವರ್ಷದ ಮಗಳು ಮತ್ತು 1 ವರ್ಷದ ಮಗನನ್ನು ಹೊಂದಿದ್ದ ವಿಂಗ್ ಕಮಾಂಡರ್ ಸಾವು ಕನ್ನಡಿಗರಿಗೆ ಕಣ್ಣೀರು ತರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post