ರಾಯಚೂರು: ಹಾಸನ ಟಿಕೆಟ್ ಹಂಚಿಕೆಯ ವಿಚಾರ ಜೆಡಿಎಸ್‌ನಲ್ಲಿ ಬಹುದೊಡ್ಡ ಬಿಕ್ಕಟ್ಟು ಸೃಷ್ಟಿಸಿದೆ. ಸೂರಜ್ ರೇವಣ್ಣ ಹಾಸನದಲ್ಲಿ ನೀಡಿದ ಹೇಳಿಕೆ ಬಳಿಕ ಮಂತ್ರಾಲಯದಲ್ಲಿ ಅನಿತಾ ಕುಮಾರಸ್ವಾಮಿ ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ಅನ್ನೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮಕ್ಕಳ ದಾರಿ ತಪ್ಪಿಸಲು ಶಕುನಿಗಳಿದ್ದಾರೆ -ಸೂರಜ್ ರೇವಣ್ಣ ಟಾಂಟ್ಗೆ HDK ಎಮೋಷನಲ್ ಕಾರ್ಡ್..!
ಮಂತ್ರಾಲಯಕ್ಕೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿ ಅವರು ಗುರು ರಾಘವೇಂದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಕುಟುಂಬದ ಗೊಂದಲಗಳನ್ನು ಬಗೆಹರಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ರಾಯಚೂರಿಗೆ ದೌಡಾಯಿಸಿದ ಅನಿತಾ
ನಿನ್ನೆಯೇ ಕುಮಾರಸ್ವಾಮಿ ಅವರು ತುಂಬಾ ಭಾವುಕರಾಗಿ ಸೂರಜ್ ರೇವಣ್ಣ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ರು. ಇದನ್ನ ಮನಗಂಡ ಅನಿತಾ ಕುಮಾರಸ್ವಾಮಿ ದಿಢೀರನೇ ರಾಯಚೂರಿಗೆ ತೆರಳಿದರು ಎನ್ನಲಾಗಿದೆ. ಇಂದು ಮಂತ್ರಾಲಯ ರಾಯರ ಸನ್ನಿಧಿಗೆ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ ಪತಿಯ ಜೊತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು
ಗುರು ರಾಘವೇಂದ್ರ ಸ್ವಾಮಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅನಿತಾ ಕುಮಾರಸ್ವಾಮಿ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂದು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ. ಕುಮಾರಸ್ವಾಮಿ ಅವರ ಬೇಸರ ಮತ್ತು ಅನಿತಾ ಕುಮಾರಸ್ವಾಮಿ ಅವರ ಈ ಮಾತು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post