ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆಯು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ನಾಳೆ ರಾಹುಲ್ ಗಾಂಧಿ ಕನಸಿನ ‘ಭಾರತ್ ಜೋಡೋ’ ಯಾತ್ರೆಯು ಪೂರ್ಣಗೊಳ್ಳಲಿದೆ. ನಿರೀಕ್ಷೆಯಂತೆ ಈ ಯಾತ್ರೆಯು ಇಂದು ಶ್ರೀನಗರದ ಲಾಲ್ ಚೌಕ್ ತಲುಪಿದೆ. ನಿಗದಿತದ ಕಾರ್ಯಕ್ರಮದಂತೆ ರಾಹುಲ್ ಗಾಂಧಿ, ಲಾಲ್ ಚೌಕ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
ಧ್ವಜಾರೋಹಣ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಕಂಡು ಬಂತು. ಈ ವೇಳೆ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ, ರಾಜ್ಯಸಭಾ ಸದಸ್ಯ ರಂದೀಪ್ ಸಿಂಗ್ ಸುರ್ಜೇವಾಲಾ ಕೂಡ ಇದ್ದರು. ‘ಭಾರತ್ ಜೋಡೋ’ ಯಾತ್ರೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಲಾಲ್ ಚೌಕ್ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶವನ್ನು ಸೀಲ್ ಮಾಡಲಾಗಿದೆ.
ಲಾಲ್ ಚೌಕ್ನಿಂದ ‘ಭಾರತ್ ಜೋಡೋ ಯಾತ್ರೆ’ ನಗರದ ಬೌಲೆವಾರ್ಡ್ ಪ್ರದೇಶದ ನೆಹರು ಪಾರ್ಕ್ ಕಡೆಗೆ ಪ್ರಯಾಣಿಸಲಿದೆ. ಇದುವರೆಗೆ 4,080 ಕಿಮೀ ಕ್ರಮಿಸಿರುವ ಭಾರತ್ ಜೋಡೋ ಯಾತ್ರೆಯು ನಾಳೆ ಸಂಪನ್ನಗೊಳ್ಳಲಿದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯು ಶುರುವಾಗಿತ್ತು. ದೇಶಾದ್ಯಂತ ಪಯಣಕಂಡ ಈ ಯಾತ್ರೆಯು 75 ಜಿಲ್ಲೆಗಳ ಮೂಲಕ ಸಾಗಿದೆ.
ಇನ್ನು ನಾಳೆ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಾಂಭದಲ್ಲಿ 23 ವಿರೋಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ. ವರದಿಗಳ ಪ್ರಕಾರ 12 ವಿರೋಧ ಪಕ್ಷದ ನಾಯಕರು ಭಾರತ್ ಜೊಡೋ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಿನ್ನೆ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬ್ ಮುಫ್ತಿ, ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]