ನವದೆಹಲಿ: ಹಿಮಾಚಲ ಪ್ರದೇಶದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿ ಕಿಡಿಗೇಡಿಗಳು ಭಾರೀ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣ ಈಗ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಎಚ್ಚೆತ್ತ ಹಿಮಾಚಲ ಪ್ರದೇಶ ಪೊಲೀಸ್ರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು, ಈ ಸಂಬಂಧ ಮಾತಾಡಿರುವ ಗವರ್ನರ್ ರಾಜೇಂದ್ರ ವಿಶ್ವನಾಥ್ ಅವರು, ನನ್ನ ಹೆಸರಿನಲ್ಲಿ ಫೇಕ್ ಇನ್ಸ್ಟಾಗ್ರಾಂ ಕ್ರಿಯೇಟ್ ಮಾಡಲಾಗಿದೆ. ಫೇನ್ ಅಕೌಂಟ್ನಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜನ ಹಣ ನೀಡಬೇಡಿ, ಎಚ್ಚರದಿಂದಿರಿ ಎಂದು ಮನವಿ ಮಾಡಿದ್ದಾರೆ.
ಸದ್ಯ ಈ ಖಾತೆಯನ್ನು ಇನ್ಆ್ಯಕ್ಟೀವ್ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಶಂಕಿತ ಸೈಬರ್ ಕ್ರಿಮಿನಲ್‌ಗಳು ವೈದ್ಯಕೀಯ ತುರ್ತು ಪರಿಸ್ಥಿತಿ ನೆಪದಲ್ಲಿ ಫಂಡ್ ರೈಸ್ ಮಾಡಿದ್ದರು. ಇದಕ್ಕಾಗಿ ಸಿಎಂ ಮುಖ್ಯ ಕಾರ್ಯದರ್ಶಿ ಹೆಸರು ಬಳಸಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post