ಹಾಸನ ವಿಧಾನಸಭಾ ಚುನಾವಣಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ದೇವೇಗೌಡರ ಕುಟುಂಬದಲ್ಲಿ ಎದ್ದಿರುವ ಗೊಂದಲಗಳು ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ರೇವಣ್ಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ತಮ್ಮ ಅಮ್ಮ ಭವಾನಿ ಪರವಾಗಿ ನೀಡಿರುವ ಹೇಳಿಕೆಗೆ ಸಂಬಂಧಿಸಿ ಮಾತನಾಡಿದ್ದ ಹೆಚ್.ಡಿ.ಕುಮಾರಸ್ವಾಮಿ, ಕೆಲವು ಶಕುನಿಗಳು ನಮ್ಮ ಮನೆ ಮಕ್ಕಳನ್ನ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು.
ಇವರೇ ನನ್ನ ಪ್ರಪಂಚ
ಇದೀಗ ಸೂರಜ್ ರೇವಣ್ಣ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾರ್ಮಿಕ ಪೋಸ್ಟ್ ಒಂದನ್ನು ಮಾಡಿದ್ದು, ನೇರವಾಗಿ ಚಿಕ್ಕಪ್ಪ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಂತೆ ಇದೆ. ‘ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಕಾಣುವ ಬುದ್ದಿ ನಮ್ಮದಾಗಿರಲಿ, ಇವರೇ ನನ್ನ ಪ್ರಪಂಚ’ ಎಂದು ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ತಾತ ಹೆಚ್.ಡಿ.ದೇವೇಗೌಡ, ಅಪ್ಪ ಹೆಚ್.ಡಿ.ರೇವಣ್ಣ, ಚಿಕ್ಕಪ್ಪ ಹೆಚ್.ಡಿ.ಕುಮಾರಸ್ವಾಮಿ ಜೊತೆ ನಿಂತು ಚರ್ಚೆ ಮಾಡುತ್ತಿರುವ ಫೋಟೋ ಅದಾಗಿದೆ. ಫೋಟೋ ಜೊತೆಗೆ ಬರೆದಿರುವ ಈ ಸಾಲುಗಳು ಹಲವಾರು ಅರ್ಥಗಳನ್ನು ಹೇಳುತ್ತಿದೆ. ಸದ್ಯ ಸೂರಜ್ ರೇವಣ್ಣ ಅವರ ಈ ಪೋಸ್ಟ್ ರಾಜಕೀಯ ವಲಯದಲ್ಲಿ ಭಾರೀ ಚರ್ಚಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post