ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ನ ಫ್ರಾಂಚೈಸಿಗಳು ಆಟಗಾರರನ್ನ ಹೇಗೆ ನಡೆಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ ಎಂದು ಯೂನಿವರ್ಸಲ್ ಬಾಸ್ ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟ್ ಆಟಗಾರ ಕ್ರಿಸ್ಗೇಲ್ ಹೇಳಿದ್ದಾರೆ.
RCB ಹಾಗೂ ಪಂಜಾಬ್ನ ಫ್ರಾಂಚೈಸಿಗಳು ಆಟಗಾರರ ಜೊತೆ ಹೇಗಿರಬೇಕು. ಅವರನ್ನ ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನ ಕಲಿಯಬೇಕಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಉತ್ತಪ್ಪರಂತಹ ಆಟಗಾರರನ್ನ ಹೇಗೆ ನೋಡಿಕೊಳ್ಳಬೇಕು ಹಾಗೂ ಅವರನ್ನ ಹೇಗೆ ಬೆಂಬಲಿಸಬೇಕು ಎನ್ನುವಲ್ಲಿ ಫ್ರಾಂಚೈಸಿ ವಿಫಲವಾಗಿದೆ ಎಂದಿದ್ದಾರೆ. ಸದ್ಯ ಇದಕ್ಕೆ RCB ಫ್ಯಾನ್ಸ್ ಕೋಪಗೊಂಡಿದ್ದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
RCB ಪರ 7 ವರ್ಷಗಳ ಕಾಲ ಬ್ಯಾಟ್ ಬೀಸಿದ್ದ ಗೇಲ್, ತಂಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಈಗ ಕ್ರಿಕೆಟ್ನಿಂದಲೇ ದೂರವಾದ ಮೇಲೆ ಹೀಗ್ಯಾಕೆ ಆದರು ಅಂತಾ ಫ್ಯಾನ್ಸ್ ಪ್ರಶ್ನಿಸಿದ್ದಾರೆ. ಎಬಿ ಡಿವಿಲಿಯರ್ಸ್ ಅಂತಹ ಆಟಗಾರನ ಜೊತೆ ನಿಮಗೆ ಹಾಲ್ ಆಫ್ ಫೇಮ್ ನೀಡಿ ಗೌರವಿಸಿದ್ದಕ್ಕೆ ಸಾರ್ಥಕವಾಯ್ತು ಎಂದು ವ್ಯಂಗ್ಯವಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗೇಲ್ರನ್ನ ಫುಲ್ ಟ್ರೋಲ್ ಮಾಡಲಾಗ್ತಿದೆ.
ಕ್ರಿಸ್ಗೇಲ್ 2011ರಲ್ಲಿ ಆರ್ಸಿಬಿ ಟೀಮ್ಗೆ ಸೇರಿದ್ದರು. ಪರವಾಗಿದ್ದ ವೇಳೆ 91 ಪಂದ್ಯಗಳಲ್ಲಿ 3,420 ರನ್ಸ್ ಗಳಿಸಿದದರು. ಇದರಲ್ಲಿ 5 ಸೆಂಚುರಿ ಕೂಡ ಸೇರಿದ್ದವು. ಅಲ್ಲದೇ 2011ರಲ್ಲಿ 608 ರನ್, 2012ರಲ್ಲಿ 733 ರನ್ಗಳನ್ನ ಸಿಡಿಸಿದ್ದರು. ಹೀಗಾಗಿ ಇವರು ಈ ಎರಡು ಅವಧಿಯಲ್ಲಿ ಆರ್ಸಿಬಿ ಪರ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post