ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಮುರಳಿ ವಿಜಯ್, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಇತ್ತೀಚೆಗೆ ಬಿಸಿಸಿಐ ನಿರ್ಧಾರಗಳ ಬಗ್ಗೆ ಮುರಳಿ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದರು.
ಟೀಂ ಇಂಡಿಯಾ ಪರ ಮುರಳಿ ವಿಜಯ್ 61 ಟೆಸ್ಟ್ ಪಂದ್ಯ ಹಾಗೂ 17 ಏಕದಿನ ಪಂದ್ಯಗಳನ್ನು ಆಡಿದ್ದರು. ಜೊತೆಗೆ 9 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. 2008-2009ರ ಸಮಯದಲ್ಲಿ ನಡೆದ ಬಾರ್ಡ್ ಗವಾಸ್ಕರ್ ಟೆಸ್ಟ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು.
2018ರಲ್ಲಿ ಆಸ್ಟ್ರೇಲಿಯಾದ ಪರ್ಥ್ನಲ್ಲಿ ನಡೆದ ಟೆಸ್ಟ್ ಪಂದ್ಯ ಕೊನೆಯ ಬಾರಿಗೆ ಆಡಿದ್ದರು. ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮುರಳಿ ವಿಜಯ್ ಆಯ್ಕೆ ಆಗಿರಲಿಲ್ಲ. 2019ರಲ್ಲಿ ತಮಿಳುನಾಡು ಪರ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದ್ದರು.
ಟೆಸ್ಟ್ ಪಂದ್ಯಗಳಲ್ಲಿ 105 ಇನ್ನಿಂಗ್ಸ್ ಆಡಿರುವ ಮುರಳಿ ವಿಜಯ್, 38.28 ಸರಾಸರಿಯಲ್ಲಿ 3982 ರನ್ಗಳಿಸಿದ್ದರು. ಅದರಲ್ಲಿ 12 ಶತಕ ಹಾಗೂ 15 ಅರ್ಧಶತಕಗಳು ಕೂಡ ಸೇರಿವೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 167 ರನ್ ಬಾರಿಸಿದ್ದರು. ಅದೇ ಅವರ ಬೆಸ್ಟ್ ಪರ್ಫಾರ್ಮೆನ್ಸ್ ಆಗಿದೆ.
@BCCI @TNCACricket @IPL @ChennaiIPL pic.twitter.com/ri8CCPzzWK
— Murali Vijay (@mvj888) January 30, 2023
ಇದನ್ನೂ ಓದಿ: BCCI ಜೊತೆಗಿನ ಸಂಬಂಧ ಮುಗಿದಿದೆ -ಬಿಗ್ಬಾಸ್ ವಿರುದ್ಧ ಮುರುಳಿ ವಿಜಯ್ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post