ಇಂಗ್ಲೆಂಡ್‌ನ ಬಿಬಿಸಿ ನ್ಯೂಸ್ ಚಾನಲ್ ಸಿದ್ಧಪಡಿಸಿ ಪ್ರಸಾರ ಮಾಡಿರುವ ಮೋದಿ ಕ್ವಶ್ಚನ್-2 ಎಪಿಸೋಡ್ಗಳ ಡಾಕ್ಯುಮೆಂಟರಿ ‘India: The Modi Question’ ಭಾರತದಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿದೆ. ಇದನ್ನು ಎರಡು ಎಪಿಸೋಡ್ನಲ್ಲಿ ಪ್ರಸಾರ ಮಾಡಿದೆ. ಜನವರಿ 17ರಂದು ಮೋದಿ ಕ್ವೆಶ್ಚನ್ ಡಾಕ್ಯುಮೆಂಟರಿಯ ಮೊದಲ ಎಪಿಸೋಡ್ ಪ್ರಸಾರ ಮಾಡಲಾಗಿದೆ. ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಲಂಡನ್ನಲ್ಲಿನ ಬಿಬಿಸಿ ಹೆಡ್ ಆಫೀಸ್ ಮುಂದೆ ಕನ್ನಡಿಗರು ಪ್ರತಿಭಟನೆ ನಡೆಸಿದ್ದಾರೆ.
ಬಿಬಿಸಿ ಹೆಡ್ ಕ್ವಾರ್ಟರ್ಸ್ ಮುಂಭಾಗ ಕನ್ನಡಿಗರು ತಮ್ಮ ಮಕ್ಕಳ ಜೊತೆ ಸುಮಾರು 4 ಗಂಟೆಗಳವರೆಗೆ ಪ್ರತಿಭಟನೆ ನಡೆಸಿದರು. ಬಿಬಿಸಿಯು ಭಾರತದ ವಿರುದ್ಧವಾಗಿಯೇ ವರದಿಗಳನ್ನು ಮಾಡ್ತಿದೆ. ಜಮ್ಮು-ಕಾಶ್ಮೀರದ ಕುರಿತು ಯಾಕೆ ಇವರು ಏನನ್ನೂ ತೋರಿಸುವುದಿಲ್ಲ. ಕೇವಲ ಗುಜರಾತ್ ಅನ್ನೇ ಟಾರ್ಗೆಟ್ ಮಾಡಿಕೊಂಡು ಯಾಕೆ ಕೆಟ್ಟದಾಗಿ ತೋರಿಸ್ತಿದ್ದಾರೆ ಎಂದು ಪ್ರತಿಭಟನಾ ನಿರತ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ: BBC ಡಾಕ್ಯುಮೆಂಟರಿಯಲ್ಲಿ ಮೋದಿ ಬಗ್ಗೆ ಇರೋದೇನು..? ನಿಷೇಧ ಯಾಕೆ..?
ಕನ್ನಡಿಗರೇ ಅಷ್ಟೇ ಅಲ್ಲದೇ ಇತರೆ ಭಾಷೆಯ ಭಾರತೀಯರೂ ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ಬಿಬಿಸಿ ಹೆಡ್ ಆಫೀಸ್ ಮುಂದೆ ಸುಮಾರು 300ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾರತೀಯರು ಸೇರಿ ಸಾಕ್ಷ್ಯಚಿತ್ರ ಹಾಗೂ ಬಿಬಿಸಿ ವಿರುದ್ಧ ಘೋಷಣೆ ಕೂಗಿದ್ದಾರೆ ಎನ್ನಲಾಗ್ತಿದೆ. ಈ ಪ್ರತಿಭಟನೆ ಕೇವಲ ಲಂಡನ್ನ ಬಿಬಿಸಿ ಆಫೀಸ್ ಮುಂದೆ ಅಲ್ಲದೇ ಇಂಗ್ಲಿಂಡ್ನ ಮ್ಯಾಂಚೆಸ್ಟರ್, ಗ್ಲಾಸ್ಗೋ, ನ್ಯೂ ಕ್ಯಾಸ್ಟಲ್ ಮತ್ತು ಬರ್ಮಿಂಗ್ಹ್ಯಾಮ್ನಲ್ಲೂ ಭಾರತೀಯರು ಪ್ರೊಟೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
300 plus people from the Indian diaspora came out to protest in London at the @BBC headquarters against their divisive & one sided documentary. Similar protests across UK in Manchester, Glasgow, New Castle and Birmingham.#DefundTheBBC #BBCDocumentary pic.twitter.com/6y46CgsBvQ
— Manu Khajuria 🇮🇳 (@KhajuriaManu) January 29, 2023
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post