ಎಲ್ಲಾ ರಾಷ್ಟ್ರಗಳಿಗೂ ಅಕ್ಕ ಪಕ್ಕದ ರಾಷ್ಟ್ರಗಳೇ ಮಗ್ಗುಲ ಮುಳ್ಳಾಗಿ ಪರಿಣಮಿಸಿವೆ. ಸದಾ ಇರಾನ್ ಮೇಲೆ ಮುಸಕಿನ ಗುದ್ದಾಟ ನಡೆಸಿರೋ ಇಸ್ರೇಲ್, ಡ್ರೋನ್ ಮೂಲಕ ಸರಣಿ ದಾಳಿ ನಡೆಸಿದೆ. ಇರಾನ್ ಅತ್ತ ಹೊತ್ತಿ ಉರಿತಿದ್ರೂ ಇತ್ತ ಇಸ್ರೇಲ್ ಮಾತ್ರ ನಮಗೇನು ಗೊತ್ತಿಲ್ಲ ಅಂತ ನೌಟಂಕಿ ಆಟವಾಡಿದೆ.
ಡ್ರೋನ್ ದಾಳಿಗೆ ಸ್ಪೋಟಗೊಳ್ತಿರೋ ಕಟ್ಟಡ
ನಡುರಸ್ತೆಯಲ್ಲೇ ಹೊತ್ತಿ ಉರಿಯುತ್ತಿರೋ ವಾಹನ
ಇರಾನ್ನ ಬಾನಂಚಿನಲ್ಲಿ ತಡರಾತ್ರಿ ಲೋಹದ ಹಕ್ಕಿಗಳು ಅರ್ಭಟಿಸಿವೆ. ಇಸ್ಫಾಹಾನ್ ನಗರದ ಮೇಲೆ ರಾತ್ರಿ ಹಾರಾಟ ನಡೆಸಿದ್ದ ಮೂರು ಡ್ರೋನ್ಗಳು ಇದಕ್ಕಿದ್ದಂತೆ ರಕ್ಕಸ ದಾಳಿ ನಡೆಸಿವೆ. ಡ್ರೋನ್ ಆರ್ಭಟಕ್ಕೆ ಇರಾನ್ನ ಇಸ್ಫಾಹಾನ್ ನಗರದ ಜನ ಬೆಚ್ಚಿ ಬಿದ್ದಿದ್ದಾರೆ. ಇರಾನ್ ಸೇನಾ ಪಡೆಯ ಸ್ಥಳಗಳನ್ನೇ ಟಾರ್ಗೆಟ್ ಮಾಡಿ ಡ್ರೋನ್ಗಳು ನಡೆಸಿದ್ದು ಹಲವು ಕಟ್ಟಡಗಳು ಹೊತ್ತಿ ಉರಿದಿವೆ.
ಸರಣಿ ಡ್ರೋನ್ ದಾಳಿಗೆ ಇರಾನ್ನ ಶಸ್ತ್ರಾಸ್ತ್ರ ಗೋಡೌನ್ ಉಡೀಸ್
ಇರಾನ್ನ ಇಸ್ಫಾಹಾನ್ ಮೇಲೆ ಮಧ್ಯರಾತ್ರಿ ನಡೆದ ಸರಣಿ ಡ್ರೋನ್ ದಾಳಿಗೆ ನಗರ ಸ್ಮಶಾನವಾಗಿ ಬದಲಾಗಿದೆ. ಇರಾನ್ನ ಮಿಲಿಟರಿ ಪ್ಲಾಂಟ್ ಟಾರ್ಗೆಟ್ ಮಾಡಿ ಡ್ರೋನ್ ಅಟ್ಯಾಕ್ ಆಗಿರೋದ್ರಿಂದ 5 ಕಡೆಗಳಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಪ್ರಮುಖ ತೈಲದ ಡಿಪೋ, ಶಸ್ತ್ರಾಸ್ತ್ರ ಗೋಡೌನ್ ಸುಟ್ಟು ಭಸ್ಮವಾಗಿವೆ. ತಕ್ಷಣ ಕಾರ್ಯ ಪ್ರವೃತ್ತವಾದ ಇರಾನ್ ಸೇನಾ ಪಡೆ ಮೂರು ಡ್ರೋನ್ಗಳನ್ನ ಹೊಡೆದುರುಳಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಅಂತ ತಿಳಿದುಬಂದಿದೆ.
ಇರಾನ್ ಮೇಲೆ ದಾಳಿ.. ಇಸ್ರೇಲ್ ಮೇಲೆ ಅನುಮಾನ..!
ಇರಾನ್ ಶಕ್ತಿ ಕುಂದಿಸಲು ಇಸ್ರೇಲ್ ದಾಳಿ ಮಾಡಿರೋ ಶಂಕೆ!
ಸೇನಾ ಬಲಾಡ್ಯತೆ, ಗಡಿವಿವಾದ, ಶಸ್ತ್ರಾಸ್ತ್ರ ಪ್ರಯೋಗದಿಂದ ಸದಾ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿರೋ ಇರಾನ್ ಹಾಗೂ ಇಸ್ರೇಲ್ ದೇಶಗಳು ಹಲವು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಸುತ್ತಲೇ ಇವೆ. ಇತ್ತೀಚೆಗೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗಿಕ ಪರೀಕ್ಷೆಯನ್ನ ನಡೆಸಿ ಯಶಸ್ವಿಯಾಗಿತ್ತು. ಸದಾ ದಯಾದಿಗಳಂತೆ ಇರಾನ್ ಮೇಲೆ ಮೂಗು ಮುರಿಯೋ ಇಸ್ರೇಲ್ ಇತ್ತೀಚೆಗೆ ಇರಾನ್ ನಡೆಸಿದ ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗಿಕ ಪರೀಕ್ಷೆಯಿಂದ ಕಾದು ಕೆಂಡವಾಗಿತ್ತು. ಇರಾನ್ನ ಸೇನಾ ಸಾಮರ್ಥ್ಯವನ್ನ ಕುಂದಿಸಲು ಹೊಂಚು ಹಾಕಿದ್ದ ಇಸ್ರೇಲ್ ಇರಾನ್ನ ಇಸ್ಫಾಹಾನ್ ನಗರವನ್ನ ಡ್ರೋನ್ ಮೂಲಕ ಟಾರ್ಗೆಟ್ ಮಾಡಿ ದಾಳಿ ನಡೆಸಿದೆ ಎನ್ನಲಾಗಿದೆ.
ಇಸ್ಫಾಹಾನ್ ನಗರದಲ್ಲಿ ಇರಾನ್ ಸೇನಾ ಪಡೆಯ ಗೋಡೌನ್ಗಳು ಹಾಗೂ ಸೇನಾ ತುಕಡಿ ಇರೋದ್ರಿಂದ ಇಸ್ರೇಲ್ ಹೀಗೆ ದಾಳಿ ನಡೆಸಲು ಪ್ಲಾನ್ ಮಾಡಿದೆ ಅಂತ ಹೇಳಲಾಗ್ತಿದೆ. ಆದರೆ ಈ ವರೆಗೂ ಇರಾನ್ ಮೇಲಿನ ದಾಳಿಯ ಹೊಣೆಯನ್ನ ಹೊರದ ಇಸ್ರೇಲ್, ಅತ್ತ ಇರಾನ್ ಹೊತ್ತಿ ಉರಿತಿದ್ರು ನಮಗೇನು ಗೊತ್ತಿಲ್ಲ ಅನ್ನೋ ಹಾಗೆ ಸೈಲೆಂಟ್ ಆಗಿದೆ. ಬಗಲ್ ಮೆ ದುಶ್ಮನ್ ಅನ್ನೋ ಹಾಗೆ ಇರಾನ್ ಹಾಗೂ ಇಸ್ರೇಲ್ ಆಗಾಗ ಕಾಲ್ಕೆರೆದು ಫೀಲ್ಡ್ಗಿಳಿದು ಜನರ ಎದೆಬಡಿತ ಹೆಚ್ಚಿಸುತ್ತಿವೆ. ಉಕ್ರೇನ್-ರಷ್ಯಾ ಯುದ್ದವನ್ನ ಕಂಡು ಬೆಚ್ಚಿಬಿದ್ದಿರೋ ಜನತೆ ಇಂತಹ ಯುದ್ದದಾಹಿ ರಾಷ್ಟ್ರಗಳು ನಡೆಸೋ ಅಟ್ಟಹಾಸ ಮತ್ತೊಂದು ಯುದ್ದಕ್ಕೆ ನಾಂದಿ ಹಾಡದಿರಲಿ ಅಂತ ಪರಿತಪ್ಪಿಸುತ್ತಿದ್ದಾರೆ.
Iran 🇮🇷 is being attacked. A number of weapons / drones factories have been struck.
Iranian 🇮🇷 Telegram indicates that Israeli 🇮🇱 Air Force has been seen over multiple Iranian cities.
Seems Russia’s 🇷🇺 drone supplier, to attack Ukraine 🇺🇦, may be going out of business!!!
👍👍👍 pic.twitter.com/W2GqF0gIoh— Jason Jay Smart (@officejjsmart) January 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post