ಗೌಡರ ಕುಟುಂಬದ ಹಿರಿಯ ಸೊಸೆ ಭವಾನಿ ರೇವಣ್ಣರ ಸಿಂ‘ಹಾಸನ’ ಮಾತು ಜೆಡಿಎಸ್‌ನಲ್ಲಿ ಕಂಪನ ಸೃಷ್ಟಿಸಿದೆ. ಪಂಚರತ್ನ ಯಾತ್ರೆ ಮಾಡ್ತ ಪಕ್ಷ ಸಂಘಟನೆಯಲ್ಲಿ ತೊಡಗಿರೋ ದಳಪತಿಯ ತಳಮಳಕ್ಕೆ ಕಾರಣವಾಗಿದೆ. ಚುನಾವಣೆ ಹೊತ್ತಲ್ಲಿ ದೇವೇಗೌಡರ ಕುಟುಂಬದಲ್ಲಿ ಬಿರುಕು ಮೂಡಲು ಆರಂಭಿಸಿದೆ. ಸದ್ಯ ಈ ಟಿಕೆಟ್ ತಿಕ್ಕಾಟದ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ರಾಯರ ಮೊರೆ ಹೋಗಿದೆ.
ಕೇಳಿದ್ರಲ್ಲ ದೊಡ್ಡಗೌಡರ ಹಿರಿ ಸೊಸೆ ಭವಾನಿ ರೇವಣ್ಣರ ಮಾತು. ಹಾಸನದಿಂದ ನಾನೇ ಸ್ಪರ್ಧೆ ಮಾಡ್ತೀನಿ. ನನ್ನ ಹೆಸರೇ ಫೈನಲ್ ಅಂತಾ ಕಡ್ಡಿ ಮುರಿದಂತೆ ಘೋಷಿಸಿದ್ರು. ಹಾಸನ ವಿಧಾನಸಭಾ ಕ್ಷೇತ್ರವನ್ನ ಹೈವೋಲ್ಟೇಜ್ ಕಣವನ್ನಾಗಿ ಮಾಡಿದ್ರು. ಇದ್ರ ಮಧ್ಯೆ ಸೂರಜ್ ರೇವಣ್ಣ ಹೆಚ್‌ಡಿಕೆಗೆ ತಿರುಗೇಟು ಕೊಟ್ಟಿದ್ರು. ಇದು ಗೌಡರ ಕುಟುಂಬದ ಕಿರಿಯ ಕುಡಿಯನ್ನ ಕಂಗೆಡಿಸಿ ಬಿಟ್ಟಿದೆ. ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ ಅಂತಾ ರಾಯರ ಆಸ್ಥಾನಕ್ಕೆ ತೆರಳುವಂತೆ ಮಾಡಿದೆ.
ಸಿಂ‘ಹಾಸನ’ಕ್ಕಾಗಿ ಗೌಡರ ಕುಟುಂಬದಲ್ಲಿ ಗದ್ದಲ
ಗುರು ರಾಯರ ಮೊರೆ ಹೋದ ಕುಮಾರಸ್ವಾಮಿ
ಹಾಲಲ್ಲಾದರು ಹಾಕು.. ನೀರಲ್ಲಾದರೂ ಹಾಕು ರಾಘವೇಂದ್ರ.. ಅಂತಾ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಇವತ್ತು ಮಂತ್ರಾಲಯದ ಗುರುರಾಘವೇಂದ್ರರ ಮೊರೆ ಹೋಗಿದ್ರು. ಹಾಸನ ಟಿಕೆಟ್ ಫೈಟ್ ಮಧ್ಯೆಯೇ ರಾಯರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ್ರು. ತಮ್ಮ ಕುಟುಂಬದಲ್ಲಿ ಎದುರಾಗಿರೋ ಟಿಕೆಟ್ ಗೊಂದಲವನ್ನ ಇತ್ಯರ್ಥ ಪಡಿಸು.. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಿಸು ಅಂತಾ ಪ್ರಾರ್ಥಿಸಿದ್ರು.
ಭವಾನಿ ರೇವಣ್ಣ ಮತ್ತು ಸೂರಜ್ ರೇವಣ್ಣ ಮಾತಿನಿಂದ ಹೆಚ್‌ಡಿಕೆ ನೊಂದು ಹೋಗಿದ್ದಾರೆ. ಇವರು ಆಡಿರೋ ಮಾತುಗಳಿಂದ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ. ಈ ಮಧ್ಯೆ ಮನಶಾಂತಿಗಾಗಿ ರಾಯರ ಸನ್ನಿಗೆ ತೆರಳಿ ಪ್ರಾರ್ಥಿಸಿದ್ದಾರೆ. ಕಷ್ಟಕಾರ್ಪಣ್ಯಗಳನ್ನ ನೀಗಿಸು ದೇವ ಅಂತಾ ಬೇಡಿಕೊಂಡಿದ್ದಾರೆ. ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ಸೂರಜ್ ರೇವಣ್ಣ ಮಾತಿಗೆ ಭಾವನಾತ್ಮಕವಾಗಿ ಉತ್ತರಿಸಿದ್ದಾರೆ.
‘ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ’
ರಾಯರ ದರ್ಶನ ಬಳಿಕ ಅನಿತಾ ಕುಮಾರಸ್ವಾಮಿ ಹೇಳಿಕೆ
ಇನ್ನೂ ರಾಯರ ದರ್ಶನದ ಬಳಿಕ ಮಾತನಾಡಿರೋ ಅನಿತಾ ಕುಮಾರಸ್ವಾಮಿ, ಹಾಲಲ್ಲಾದರು ಹಾಕು.. ನೀರಲ್ಲಾದರು ಹಾಕು ಅಂತಾ ಇಲ್ಲಿಗೆ ಬಂದಿದ್ದೇನೆ.. ರಾಯರ ದೇವಸ್ಥಾನಕ್ಕೆ ಬಂದು ಬಹಳ ವರ್ಷಗಳೇ ಆಗಿತ್ತು. ಹೀಗಾಗಿ ಮಂತ್ರಾಲಯಕ್ಕೆ ಬಂದು ದರ್ಶನ ಪಡೆದಿದ್ದೇನೆ ಅಂತಾ ಹೇಳಿದ್ರು.
ಹಾಸನಕ್ಕೂ ನನಗೂ ಸಂಬಂಧ ಇಲ್ಲ ಎಂದ ಅನಿತಾ ಕುಮಾರಸ್ವಾಮಿ
ಹೆಚ್‌ಡಿಕೆ ದಂಪತಿ ಮನಃಶಾಂತಿಗಾಗಿ ರಾಯರ ಮೊರೆ ಹೋಗಿದ್ದಾರೆ. ಆದ್ರೆ, ಇತ್ತ ಪಕ್ಷದ ನೆಮ್ಮದಿ ಕೆಡಿಸುವಂತ ಕೆಲಸಕ್ಕೆ ಕಾರ್ಯಕರ್ತರು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್, ಸೂರಜ್ ಅಭಿಮಾನಿಗಳ ಮಧ್ಯೆ ಸಮರ ನಡೀತಿದೆ. ಅಲ್ಲದೇ ಗೌಡರ ಮನೆಯ ಟಿಕೆಟ್ ಗದ್ದಲ ಪಕ್ಷಕ್ಕೆ ಡ್ಯಾಮೇಜ್ ಮಾಡುವಂತೆ ಕಾಣ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post