ಶ್ರೀನಗರ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹಲವು ಖುಷಿಯಾದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೊನೆಯ ದಿನವಾದ ಇವತ್ತು ಶ್ರೀನಗರದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕಂಡೊಡನೆ ಸ್ನೋ ಬಾಲ್ ಆಟವಾಡಿದ್ದಾರೆ.ಶ್ರೀನಗರದಲ್ಲಿದ್ದ ರಾಹುಲ್ ಗಾಂಧಿ ಅವರನ್ನ ನೋಡಲು ಪ್ರಿಯಾಂಕಾ ಗಾಂಧಿ ಆಗಮಿಸಿದ್ರು. ಆಗ ರಾಹುಲ್ ಗಾಂಧಿ, ಪ್ರಿಯಾಂಕಾರನ್ನ ನೋಡುತ್ತಿದ್ದಂತೆ ಸ್ನೋ ಬಾಲ್ ಎತ್ತಿಕೊಂಡು ತಲೆ ಮೇಲೆ ಹೊಡೆದಿದ್ದಾರೆ. ಪ್ರಿಯಾಂಕಾ ಕೂಡ ರಾಹುಲ್‌ಗೆ ಮಂಜಿನಿಂದ ತಲೆ ಸವರಿ ಮುದ್ದಾಡಿದ್ದಾರೆ. ಮುಂಜಾನೆಯ ಕೊರೆಯುವ ಚಳಿಯಲ್ಲಿ ಅಣ್ಣ, ತಂಗಿಯರ ಈ ಮಂಜಿನಾಟ ನೋಡುಗರ ಗಮನ ಸೆಳೆದಿದೆ. ರಾಹುಲ್, ಪ್ರಿಯಾಂಕಾ ಅವರ ಈ ಮುದ್ದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಣ್ಣ ತಂಗಿಯ ಈ ಬಂಧ ಜನುಮ ಜನುಮದ ಅನುಬಂಧ: ಪ್ರಿಯಾಂಕಾಗೆ ಅಪ್ಪಿ ಮುತ್ತಿಟ್ಟ ರಾಹುಲ್
ಭಾರತ್ ಜೋಡೋ ಯಾತ್ರೆ ಉತ್ತರಪ್ರದೇಶ ಪ್ರವೇಶಿಸಿದಾಗಲೂ ರಾಹುಲ್ ಗಾಂಧಿ ಹೀಗೆ ಮಾಡಿದ್ರು. ವೇದಿಕೆ ಮೇಲೆ ಪಕ್ಕದಲ್ಲೇ ಕೂತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾರನ್ನ ಬಿಗಿದಪ್ಪಿಕೊಂಡ್ರು. ಉಕ್ಕಿ ಬಂದ ಪ್ರೀತಿಯಲ್ಲೇ ಸಿಹಿಮುತ್ತು ಕೊಟ್ಟಿದ್ರು.
ಇದನ್ನೂ ಓದಿ: ಪ್ರೀತಿಯಿಂದ ಅಮ್ಮನ ಅಪ್ಪಿಕೊಂಡು ರಾಹುಲ್ ಗಾಂಧಿ ಏನ್ ಹೇಳಿದ್ರು ಗೊತ್ತಾ..?
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುವಾಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭಾಗಿಯಾಗಿದ್ರು. ರಾಹುಲ್ ಯಾತ್ರೆಯಲ್ಲಿ ಹೆಜ್ಜೆ ಹಾಕುವಾಗ ಸೋನಿಯಾ ಗಾಂಧಿ ಅವರ ಶೂ ಲೇಸ್ ಬಿಚ್ಚಿತ್ತು. ಇದನ್ನು ತಕ್ಷಣ ಗಮನಿಸಿದ ರಾಹುಲ್ ಗಾಂಧಿ ರಸ್ತೆ ಮಧ್ಯೆಯೇ ಕುಳಿತು ಶೂ ಲೇಸ್ ಕಟ್ಟಿದ್ದರು.
Sheen Mubarak!😊
A beautiful last morning at the #BharatJodoYatra campsite, in Srinagar.❤️ ❄️ pic.twitter.com/rRKe0iWZJ9
— Rahul Gandhi (@RahulGandhi) January 30, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post