ನ್ಯೂಜಿಲೆಂಡ್ನಲ್ಲಿ ಮೊದಲ ವರ್ಷಧಾರೆಗೆ ಜನ ತತ್ತರಿಸಿಹೋಗಿದ್ದಾರೆ. ವರುಣಾರ್ಭಟಕ್ಕೆ ರಸ್ತೆಗಳೆಲ್ಲ ನದಿಗಳಂತಾಗಿ ಮನೆಗಳು ಮುಳುಗಡೆಯಾಗಿ ಹೋಗಿದೆ. ಎಡೆಬಿಡದೇ ಸುರಿಯುತ್ತಿರೋ ರಣಮಳೆ ಜನರನ್ನ ಮನೆಯಿಂದ ಹೊರಬಾರದಂತೆ ಮಾಡಿ ದಿಗ್ಬಂಧನ ವಿಧಿಸಿದೆ. ಅಷ್ಟಕ್ಕೂ ವರುಣ ಇತಂದೊಂದು ರಣಾರ್ಭಟ ಮೆರೆಯುತ್ತಿರೋದು ಭಾರತದಲಲ್ಲ ಬದಲಾಗಿ ನ್ಯೂಜಿಲೆಂಡ್ನಲ್ಲಿ. ಅಕಾಲಿಕ ಮಳೆಯ ಆರ್ಭಟದಿಂದ ತತ್ತರಿಸಿರೋ ನ್ಯೂಜಿಲೆಂಡ್ ಜನ ವರುಣಾರ್ಭಟಕ್ಕೆ ಬೇಸತ್ತು ಹೋಗಿದ್ದಾರೆ.
ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದೆ ಮಳೆ!
ನ್ಯೂಜಿಲೆಂಡ್ನ ಆಕ್ಲಾಂಡ್ನಲ್ಲಿ ಕಳೆದ 4 ದಿನಗಳಿಂದ ಎಡೆಬಿಡದೆ ಸುರಿಯುತ್ತಿರೋ ವರ್ಷಧಾರೆ ಜನರ ನಿದ್ದೆಗೆಡಿಸಿದೆ. ವರ್ಷದ ಮೊದಲ ಮಳೆಗೆ ಜನ ಪದರಗುಟ್ಟಿ ಹೋಗಿದ್ದಾರೆ. ನಿರಂತರ ಮಳೆಯಿಂದ ಆಕ್ಲಾಂಡ್ನ ಜನತೆ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರವಾಹದ ನೀರಿನಿಂದ ರಸ್ತೆಗಳು ನದಿಗಳಾಗಿ ಬದಲಾಗಿವೆ. ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮನೆಯ ಅಕ್ಕ-ಪಕ್ಕ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.
ನಿರಂತರ ಮಳೆಗೆ ಈಜು ಕೊಳದಂತಾಯ್ತು ವಿಮಾನ ನಿಲ್ದಾಣ!
ದೋ ಅಂತ ಸುರಿಯುತ್ತಿರೋ ಮಳೆಯಿಂದ ನ್ಯೂಜಿಲೆಂಡ್ನ ಆಕ್ಲಾಂಡ್ನ ಏರ್ಪೋರ್ಟ್ ಸಂಪೂರ್ಣ ಜಲಾವೃತವಾಗಿದೆ. ಪ್ರವಾಹದ ನೀರಿನಲ್ಲಿ ಏರ್ಪೋರ್ಟ್ನ ವಸ್ತುಗಳು ತೆಲಾಡುತ್ತಿವೆ. ಕಳೆದ 4 ದಿನಗಳಿಂದ ಏರ್ಪೋರ್ಟ್ನಲ್ಲಿ ವ್ಯವಸ್ಥೆ ಅದೋಗತಿಗೆ ತಲುಪಿದೆ.
ವರುಣಾರ್ಭಟಕ್ಕೆ ಮೂವರು ಸಾವು.. ಮತ್ತೋರ್ವ ನಾಪತ್ತೆ
ವರ್ಷಾರಂಭದಲ್ಲೇ ನ್ಯೂಜಿಲೆಂಡ್ನಲ್ಲಿ ಅಬ್ಬರಿಸಿದ ಮಳೆರಾಯ ಹೊಸ ದಾಖಲೆಯನ್ನೇ ಸೃಷ್ಠಿಸಿದ್ದಾನೆ. 24 ಗಂಟೆಯಲ್ಲಿ ಆಕ್ಲಾಂಡ್ನಲ್ಲಿ 249 ಮಿಲಿ ಮೀಟರ್ ಮಳೆಯಾಗಿದ್ದು ಇದು ನ್ಯೂಜಿಲೆಂಡ್ ಇತಿಹಾಸದಲ್ಲೇ ಸುರಿದಿರೋ ದಾಖಲೆಯ ಮಳೆಯಾಗಿದೆ. ಮಳೆಯಿಂದ ಉಂಟಾಗಿರೋ ಪ್ರವಾಹಕ್ಕೆ ಸಿಲುಕಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, ಮತ್ತೊರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದವನ ಶೋಧಕರ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.
ಮಳೆಯಿಂದ ಉಂಟಾಗಿರೋ ಅನಾಹುತಗಳ ಬಗ್ಗೆ ಪ್ರಧಾನಿ ಹಿಪ್ಕಿನ್ಸ್ ವೈಮಾನಿಕ ಸಮೀಕ್ಷೆ ನಡೆಸಿದ್ದು ಪ್ರವಾಹದಿಂದ ನಿರಾಶ್ರಿತರಾಗಿರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರ್ಷದ ಮೊದಲ ಮಳೆ ನ್ಯೂಜಿಲೆಂಡ್ ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದೆ. ಮನೆ -ಮಠ ಕಳೆದುಕೊಂಡು ಜನರು ಪರಿತಪ್ಪಿಸುವ ಸ್ಥಿತಿ ನಿರ್ಮಾಣವಾಗಿದೆ.
Auckland, New Zealand just recorded its wettest day ever causing deadly, severe flooding.
Over 10 inches of rain fell in 24 hours smashing the previous wettest day on record by nearly 4 inches!
Mind-boggling stuff.
🎥@CrazyIdeasNZ pic.twitter.com/SAUkaH43UG
— Colin McCarthy (@US_Stormwatch) January 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post