ಮೈಸೂರಿನಲ್ಲಿ ಬರೋಬ್ಬರಿ 13 ವರ್ಷಗಳ ನಂತರ ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಿದೆ. ಸುಮಾರು 5 ಎಕರೆ ಜಾಗದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಸಾಹಸ ಸಿಂಹ ಸ್ಮಾರಕ ನಿರ್ಮಾಣ ಮಾಡಿದೆ.
ಇದನ್ನು ಓದಿ: ವಿಷ್ಣು ಸ್ಮಾರಕ ಕಾಟಾಚಾರಕ್ಕೆ ಮಾಡ್ತಾ ಸರ್ಕಾರ? ಅಭಿಮಾನಿಗಳ ಆಕ್ರೋಶ ಯಾಕೆ..?
ಇನ್ನು, ಈ ಸಂಬಂಧ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ರಾಜ್ ಕುಮಾರ್ ಟ್ವೀಟ್ ಮಾಡಿ ವಿಷ್ಣು ಅವರನ್ನು ನೆನೆದಿದ್ದಾರೆ. ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಯಾಗಿರುವುದು ಚಿತ್ರರಂಗಕ್ಕೆ ಅವರ ಅಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತದೆ. ಆ ಕೊಡುಗೆಯನ್ನು ಶಾಶ್ವತವಾಗಿ ಸ್ಮರಿಸೋಣ ಎಂದು ಬರೆದಿದ್ದಾರೆ.
— Ashwini Puneeth Rajkumar (@Ashwini_PRK) January 31, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post